Thursday, June 21, 2007

ಬಂದೇ ಬರತಾವ ಕಾಲಾ

ಚಿತ್ರ: ಸ್ಪಂದನ
ರಚನೆ: ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ
ಸಂಗೀತ: ರಾಜನ್ ನಾಗೇಂದ್ರ
ಹಿನ್ನಲೆ ಗಾಯನ: ಪಿ.ಸುಶೀಲ

ಬಂದೇ ಬರತಾವ ಕಾಲಾ
ಬಂದೇ ಬರತಾವ ಕಾಲಾ
ಮಂದಾರ ಕನಸನು
ಕಂಡಂತ ಮನಸನು
ಒಂದು ಮಾಡುವ ಸ್ನೇಹ ಜಾಲಾ

ಮಾಗಿಯ ಎದೆ ತೂರಿ
ಕೂಗಿತೊ ಕೋಕಿಲ
ರಾಗದ ಚಂದಕೆ
ಬಾಗಿತೊ ಬನವೆಲ್ಲ
ತೂಗುತ ಬಳ್ಳಿ ಮೈಯನ್ನ
ಸಾಗದು ಬಾಳು ಏಕಾಕಿ ಎನುತಾವ

ಬಂದೇ ಬರತಾವ ಕಾಲಾ...

ಹುಣ್ಣಿಮೆ ಭಾನಿಂದ
ತಣ್ಣನೆ ಸವಿ ಹಾಲು
ಚೆಲ್ಲುತ ಮೆಲ್ಲನೆ
ನಲಿಸಿದೆ ಬುವಿಯನು
ಮುಸುಕಿದೆ ಮಾಯೆ ಜಗವನು
ಭುವಿ ಭಾನು ಸೇರಿ ಹರಸಾವು ಬಾಳನು

ಬಂದೇ ಬರತಾವ ಕಾಲಾ...

ತನುವು ನಿನ್ನದು ಮನವು ನಿನ್ನದು

ರಚನೆ : ಕುವೆಂಪು
ಸಂಗೀತ ಮತ್ತು ಹಿನ್ನಲೆ ಗಾಯನ : ಮೈಸೂರು ಅನಂತಸ್ವಾಮಿ
ಆಲ್ಬಂ : ಭಾವಸಂಗಮ

ತನುವು ನಿನ್ನದು ಮನವು ನಿನ್ನದು
ಎನ್ನ ಜೀವನ ಧನವು ನಿನ್ನದು
ನಾನು ನಿನ್ನವನೆಂಬ ಹೆಮ್ಮೆಯ
ಋ‍ಣವು ಮಾತ್ರವೆ ನನ್ನದು

ನೀನು ಹೊಳೆದರೆ ನಾನು ಹೊಳೆವೆನು,
ನೀನು ಬೆಳೆದರೆ ನಾನು ಬೆಳೆವೆನು
ನನ್ನ ಹರಣದ ಹರಣ ನೀನು
ನನ್ನ ಮರಣದ ಮರಣವು
ನನ್ನ ಮರಣದ ಮರಣವು

ತನುವು ನಿನ್ನದು ಮನವು ನಿನ್ನದು...

ನನ್ನ ಮನದಲಿ ನೀನು ಯುಕ್ತಿ,
ನನ್ನ ಹೃದಯದಿ ನೀನೆ ಭಕ್ತಿ
ನೀನೆ ಮಾಯ ಮೋಹ ಶಕ್ತಿಯು,
ನನ್ನ ಜೀವನ ಮುಕ್ತಿಯು
ನನ್ನ ಜೀವನ ಮುಕ್ತಿಯು

ತನುವು ನಿನ್ನದು ಮನವು ನಿನ್ನದು...

Wednesday, June 13, 2007

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು

ರಚನೆ: ಚಂದ್ರಶೇಖರ ಪಾಟೀಲ
ಸಂಗೀತ: ಸಿ. ಅಶ್ವಥ್
ಹಿನ್ನಲೆ ಗಾಯನ: ಸಿ. ಅಶ್ವಥ್

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು
ಒಳಗೊಳಗೇ ಹರಿಯುವವಳು
ಜೀವ ಹಿಂಡಿ ಹಿಪ್ಪೆ ಮಾಡಿ
ಒಳಗೊಳಗೇ ಕೊರೆಯುವವಳು ಸದಾ…
ಗುಪ್ತಗಾಮಿನಿನನ್ನ ಶಾಲ್ಮಲಾ

ಹಸಿರು ಮುರಿವ ಎಲೆಗಳಲ್ಲಿ
ಬಸಿರ ಬಯಕೆ ಒಸರುವವಳು
ತುಟಿ ಬಿರಿಯುವ ಹೂಗಳಲ್ಲಿ
ಬೆಂಕಿ ಹಾಡು ಉಸುರುವವಳು ಸದಾ…
ತಪ್ತಕಾಮಿನಿ ನನ್ನ ಶಾಲ್ಮಲಾ

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು...

ಭೂಗರ್ಭದ ಮೌನದಲ್ಲಿ
ಜುಂಮೆನುತ ಬಳುಕುವವಳು
ಅರಿವಿಲ್ಲದೆ ಮೈಯ ತುಂಬಿ
ಕನಸಿನಲ್ಲಿ ತುಳುಕುವವಳು ಸದಾ..
ಸುಪ್ತಮೋಹಿನಿ ನನ್ನ ಶಾಲ್ಮಲಾ

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು...

ನನ್ನ ಬದುಕ ಭುವನೇಶ್ವರಿ
ನನ್ನ ಶಾಲ್ಮಲಾ
ನನ್ನ ಹೃದಯ ರಾಜೇಶ್ವರಿ
ನನ್ನ ಶಾಲ್ಮಲಾ ಸದಾ…
ಗುಪ್ತಗಾಮಿನಿ ನನ್ನ ಶಾಲ್ಮಲಾ

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು...

Tuesday, June 12, 2007

ತೆರೆದಿದೆ ಮನೆ ಓ ಬಾ ಅತಿಥಿ

ಚಿತ್ರ: ಹೊಸಬೆಳಕು
ಸಾಹಿತ್ಯ: ಕುವೆಂಪು
ಸಂಗೀತ: ಎಂ. ರಂಗರಾವ್
ಹಿನ್ನಲೆ ಗಾಯನ: ಎಸ್. ಜಾನಕಿ , ವಾಣಿ ಜಯರಾಮ್


ತೆರೆದಿದೆ ಮನೆ ಓ ಬಾ ಅತಿಥಿ
ಹೊಸಬೆಳಕಿನ ಹೊಸಗಾಳಿಯಾ
ಹೊಸಬಾಳನು ತಾ ಅತಿಥಿ

ಆವರೂಪದೊಳು ಬಂದರು ಸರಿಯೇ
ಆವವೇಷದೊಳು ನಿಂದರು ಸರಿಯೇ
ನೇಸರುದಯದೊಳು ಬಹೆಯಾ ಬಾ
ತಿಂಗಳಂದದಲಿ ಬಹೆಯಾ ಬಾ

ತೆರೆದಿದೆ ಮನೆ ಓ ಬಾ ಅತಿಥಿ...

ಇಂತಾದರು ಬಾ ಅಂತಾದರು ಬಾ
ಎಂತಾದರು ಬಾ ಬಾ
ಬೇಸರವಿದಕೂ ಸರಿಸುವ ಹೊಸ ಬಾಳ
ಉಸಿರಾಗಿ ಬಾ ಬಾ ಬಾ

ತೆರೆದಿದೆ ಮನೆ ಓ ಬಾ ಅತಿಥಿ...

ಕಡಲಾಗಿ ಬಾ ಬಾನಾಗಿ ಬಾ
ಗಿರಿಯಾಗಿ ಬಾ ಕಾನಾಗಿ ಬಾ
ಕಡಲಾಗಿ ಬಾನಾಗಿಗಿರಿಯಾಗಿ ಕಾನಾಗಿ
ತೆರೆದಿದೆ ಮನ ಓ ಬಾ
ಹೊಸ ತಾನದ ಹೊಸ ಗಾನದ
ಹೊಸ ತಾನದ ಹೊಸ ಗಾನದ
ರಸ ಜೀವವ ತಾ ತಾ ತಾ

ತೆರೆದಿದೆ ಮನೆ ಓ ಬಾ ಅತಿಥಿ...

ಮಲಗು ಮಲಗೆನ್ನ ಮರಿಯೆ

ರಚನೆ: ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ

ಮಲಗು ಮಲಗೆನ್ನ ಮರಿಯೆ
ಬಣ್ಣದ ನವಿಲಿನ ಗರಿಯೆ
ಎಲ್ಲಿಂದ ಬಂದೆ ಈ ಮನೆಗೆ
ನಂದನ ಇಳಿದಂತೆ ಧರೆಗೆ

ಜೋ..ಜೋಜೋಜೋ...

ತಾವರೆ ದಳ ನಿನ್ನ ಕಣ್ಣು
ಕೆನ್ನೆ ಮಾವಿನ ಹಣ್ಣು
ಸಣ್ಣ ತುಟಿಯ ಅಂದ
ಬಣ್ಣದ ಚಿಗುರಿಗು ಚಂದ
ನಿದಿರೆ ಮರುಳಲ್ಲಿ ನಗಲು
ಮಂಕಾಯ್ತು ಉರಿಯುವ ಹಗಲು
ಜೋ..ಜೋಜೋಜೋ...

ಮಲಗು ಮಲಗೆನ್ನ ಮರಿಯೆ...

ಒಲುಮೆ ಹರಸಿದ ಕಂದ
ಹುಣ್ಣಿಮೆ ದೇವಗು ಚಂದ
ಬೆಳಕ ಕರೆವ ಅರುಣ
ನಿನ್ನ ನಗೆಯ ಕಿರಣ
ಚೆಲುವಿಗೆ ಸಾಟಿಯೆ ಕಾಮ
ತಿಮ್ಮಪ್ಪನಿಗೆ ಮೂರು ನಾಮ
ಜೋ..ಜೋಜೋಜೋ...

ಮಲಗು ಮಲಗೆನ್ನ ಮರಿಯೆ...

ಹಿಂದೆ ಹೇಗೆ ಚಿಮ್ಮುತಿತ್ತು ಕಣ್ಣ ತುಂಬ ಪ್ರೀತಿ

ರಚನೆ: ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ

ಹಿಂದೆ ಹೇಗೆ ಚಿಮ್ಮುತಿತ್ತು
ಕಣ್ಣ ತುಂಬ ಪ್ರೀತಿ
ಈಗ ಯಾಕೆ ಜ್ವಲಿಸುತಿದೆ
ಏನೋ ಶಂಕೆ ಭೀತಿ

ಹಿಂದೆ ಹೇಗೆ ಚಿಮ್ಮುತಿತ್ತು ...

ಜೇನು ಸುರಿಯುತಿತ್ತು ನಿನ್ನ
ದನಿಯ ಧಾರೆಯಲ್ಲಿ
ಕುದಿಯುತಿದೆ ಈಗ ವಿಷ
ಮಾತು ಮಾತಿನಲ್ಲಿ

ಹಿಂದೆ ಹೇಗೆ ಚಿಮ್ಮುತಿತ್ತು ...

ಒಂದು ಸಣ್ಣ ಮಾತಿನಿರಿತ
ತಾಳದಾಯ್ತೆ ಪ್ರೇಮ
ಜೀವವೆರಡು ಕೂಡಿ ಉಂಡ
ಸ್ನೇಹವಾಯ್ತೆ ಹೋಮ

ಹಿಂದೆ ಹೇಗೆ ಚಿಮ್ಮುತಿತ್ತು ...

ಹಮ್ಮು ಬೆಳದು ನಮ್ಮ ಬಾಳು
ಆಯ್ತು ಎರಡು ಸೀಳು
ಕೂಡಿಕೊಳಲಿ ಮತ್ತೆ ಪ್ರೀತಿ
ತಬ್ಬಿಕೊಳಲಿ ತೋಳು

ಹಿಂದೆ ಹೇಗೆ ಚಿಮ್ಮುತಿತ್ತು ...

ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ

ರಚನೆ: - ಎನ್.ಎಸ್.ಲಕ್ಷ್ಮಿನಾರಾಯಣ ಭಟ್ಟ

ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ
ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ

ದೂರದೊಂದು ತೀರದಿಂದ
ತೇಲಿ ಪಾರಿಜಾತ ಗಂಧ
ದಾಟಿ ಬಂತು ಬೇಲಿ ಸಾಲ
ಮೀಟಿ ಹಳೆಯ ಮಧುರ ನೋವ

ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ...

ಬಾನಿನಲ್ಲಿ ಒಂಟಿ ತಾರೆಸೋನೆ
ಸುರಿವ ಇರುಳ ಮೋರೆ
ಕತ್ತಲಲ್ಲಿ ಕುಳಿತು ಒಳಗೆ
ಬಿಕ್ಕುತಿಹಳು ಯಾರೋ ನೀರೆ

ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ...

ಹಿಂದೆ ಯಾವ ಜನ್ಮದಲ್ಲೋ
ಮಿಂದ ಪ್ರೇಮ ಜಲದ ಕಂಪು
ಬಂದು ಚೀರುವೆದೆಯ ಭಾವ
ಹೇಳಲಾರೆ ತಾಳಲಾರೆ

ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ..

Sunday, June 10, 2007

ನಿನ್ನ ನೀನು ಮರೆತರೇನು ಸುಖವಿದೆ

ಚಿತ್ರ: ದೇವರ ಕಣ್ಣು
ಸಾಹಿತ್ಯ: ಚಿ.ಉದಯಶಂಕರ್


ನಿನ್ನ ನೀನು ಮರೆತರೇನು ಸುಖವಿದೆ
ತನ್ನತನವ ತೊರೆದರೇನು ಸೊಗಸಿದೆ

ಹಾಡುವುದನು ಕೋಗಿಲೆಯು ಮರೆಯುವುದೇ
ಹಾರುವುದನು ಬಾನಾಡಿ ತೊರೆಯೆವುದೆ
ಮೀನು ಈಜದಿರುವುದೆ
ದು೦ಬಿ ಹೂವ ಮರೆವುದೆ
ಮುಗಿಲ ಕ೦ಡ ನವಿಲು ನಲಿಯದೆ

ನಿನ್ನ ನೀನು ಮರೆತರೇನು...

ಗಾಳಿ ತನ್ನ ಚಲನೆಯನ್ನು ಮರೆಯುವುದೆ
ಬೆಳ್ಳಿ ಮೋಡ ತೇಲದೆ ನಿಲ್ಲುವುದೆ
ತಾರೆ ಮಿನುಗದಿರುವುದೆ
ಮಿ೦ಚು ಹೊಡೆಯದಿರುವುದೆ
ನದಿಯು ಕಡಲ ಸ್ನೇಹ ಮರೆವುದೆ

ಸಗಮಪ, ಗಮಪನಿ, ಪನಿಸ, ಪನಿರಿ,
ಗಾ ನಿ ಸಾ ನಿ ಪಾ ಮಾ ಗಾ ಮ ರಿ ,
ಗಾ ನಿ ಸಾ ನಿ ಪಾ ಮ ಗಾ ಮ ಪಾ,
ಗಾ ನಿ ಸಾ ನಿ ಪಾ ಮಾ ಗಾ ಮ

ನಿನ್ನ ನೀನು ಮರೆತರೇನು ಸುಖವಿದೆ...

ಮಾಮರವೆಲ್ಲೋ ಕೋಗಿಲೆ ಎಲ್ಲೋ...

ಚಿತ್ರ: ದೇವರಗುಡಿ
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಹಿನ್ನಲೆ ಗಾಯನ: ಎಸ್.ಪಿ.ಬಾಲಸುಬ್ರಮಣ್ಯಂಮಾಮರವೆಲ್ಲೋ ಕೋಗಿಲೆ ಎಲ್ಲೋ
ಏನೀ ಸ್ನೇಹ ಸಂಬಂಧ
ಎಲ್ಲಿಯದೋ ಈ ಅನುಬಂಧ

ಸೂರ್ಯನು ಎಲ್ಲೋ ತಾವರೆ ಎಲ್ಲೋ
ಕಾಣಲು ಕಾತರ ಕಾರಣವೇನೋ
ಚಂದಿರನೆಲ್ಲೋ ನೈದಿಲೆ ಎಲ್ಲೋ
ನೋಡಲು ಅರಳುವ ಸಡಗರವೇನೋ
ಎಲ್ಲೇ ಇರಲೀ ಹೇಗೇ ಇರಲೀ
ಕಾಣುವ ಆಸೆ ಏತಕೋ ಏನೋ

ಮಾಮರವೆಲ್ಲೋ ಕೋಗಿಲೆ ಎಲ್ಲೋ...

ಹುಣ್ಣಿಮೆಯಲ್ಲಿ ತಣ್ಣನೆ ಗಾಳೀ
ಬೀಸಲು ನಿನ್ನಾ ನೆನಪಾಗುವುದು
ದಿನರಾತ್ರಿಯಲೀ ಏಕಾಂತದಲೀ
ಏಕೋ ಏನೋ ನೋವಾಗುವುದು
ಬಯಕೆಯು ತುಂಬಿ ಆಸೆಯ ತುಂಬೀ
ಎದೆಯನು ಕೊರೆದೂ ಕಾಡುವುದೇನೋ

ಮಾಮರವೆಲ್ಲೋ ಕೋಗಿಲೆ ಎಲ್ಲೋ...

Friday, June 8, 2007

ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ

ಚಿತ್ರ: ಬಾ ನಲ್ಲೆ ಮಧುಚಂದ್ರಕೆ
ಸಾಹಿತ್ಯ: ಪ್ರೊ. ಸಿದ್ದಲಿಂಗಯ್ಯ
ಸಂಗೀತ: ಹಂಸಲೇಖ
ಹಿನ್ನಲೆ ಗಾಯನ: ಎಸ್.ಪಿ.ಬಾಲಸುಬ್ರಮಣ್ಯಂಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ
ಸುಳಿದಾಡಬೇಡ ಗೆಳತಿ, ಸುಳಿದಾಡಬೇಡ ಗೆಳತಿ
ಚೆಲುವಾದ ನಿನ್ನ ಮಲ್ಲಿಗೆಯ ಮೈಯ್ಯ
ಸುಟ್ಟಾವು ಬೆಳ್ಳಿ ಕಿರಣ, ಸುಟ್ಟಾವು ಬೆಳ್ಳಿ ಕಿರಣ.

ಇಳಿಜಾರಿನಲ್ಲಿ ಆ ಕಣಿವೆಯಲ್ಲಿ
ನೀ ಇಳಿಯಬೇಡ ಗೆಳತಿ!
ನೀ ಇಳಿಯಬೇಡ ಗೆಳತಿ ಆ ಕಣಿವೆಯಲ್ಲಿ
ತತ್ತರಿಸುವಂತೆ ಕಾಲಲ್ಲಿ ಕಮಲ
ಮುತ್ತುವುವು ಮೊಲದ ಹಿಂಡು, ಮುತ್ತುವುವು ಮೊಲದ ಹಿಂಡು.

ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ...

ಈ ನನ್ನ ಎದೆಯ ಹೂದೊಟದಲ್ಲಿ
ನೀನೆತ್ತ ಪ್ರೀತಿ ಬಳ್ಳಿ!
ನೀನೆತ್ತ ಪ್ರೀತಿ ಬಳ್ಳಿ ಹೂದೊಟದಲ್ಲಿ
ಪಲ ಕೊಟ್ಟಿತೆನೆ ಹೂ ಬಿಟ್ಟಿತೇನೆ
ಉಲ್ಲಾಸವನ್ನು ಚಲ್ಲಿ, ಉಲ್ಲಾಸವನ್ನು ಚಲ್ಲಿ.

ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ...

ಈ ಊರ ಬನಕೆ ಚೆಲುವದ ಒಂಟಿ
ಹೂವಾಗಿ ಅರಳಿ ನೀನು!
ಹೂವಾಗಿ ಅರಳಿ ನೀನು ಈ ಊರ ಬನಕೆ
ಮರೆಯಾಗಬೆಡ ಮಕರಂದವೆಂದ
ದುಂಬಿಗಳ ದಾಳಿಯಲ್ಲಿ, ದುಂಬಿಗಳ ದಾಳಿಯಲ್ಲಿ.

ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ...

ಕಂಗಳು ತುಂಬಿರಲು ಕಂಬನಿ ಧಾರೆಯಲಿ

ಚಿತ್ರ: ಚಂದನದ ಗೊಂಬೆ
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಹಿನ್ನಲೆ ಗಾಯನ: ಎಸ್.ಜಾನಕಿಕಂಗಳು ತುಂಬಿರಲು ಕಂಬನಿ ಧಾರೆಯಲಿ
ಹೃದಯವು ಬೆಂದಿರಲು ನೋವಿನ ಜ್ವಾಲೆಯಲಿ
ಮೇಣದ ದೀಪದಂತೆ ನೊಂದು ನೊಂದು ನೀರಾದೇ..

ನಿಮ್ಮ ರೂಪ ಕಣ್ಣಿನಲಿ
ನಿಮ್ಮ ಮಾತೆ ಕಿವಿಗಳಲೀ
ನಿಮ್ಮ ನೋಟ ಇನ್ನೂ ನನ್ನ
ಹೃದಯವೀಣೆ ಮೀಟಿರಲೂ
ನಿಮ್ಮ ಸ್ನೇಹ ಮನಸಿನಲಿ
ನಿಮ್ಮ ಪ್ರೇಮ ನೆನಪಿನಲಿ
ನಿಮ್ಮ ಮುದ್ದು ಕಂದಾ ನನ್ನಾ
ಅಮ್ಮಾ ಎಂದು ಕೂಗಿರಲೂ
ನೊಂದ ನನ್ನ ಜೀವ ಇಂದು
ಎನೋ ಸುಖಾ ಕಾಣುತಿದೇ

ಕಂಗಳು ತುಂಬಿರಲು ಕಂಬನಿ ಧಾರೆಯಲಿ...

ನೀವು ತಂದ ಈ ಮನೆಗೆ
ನೀವು ತಂದ ಈ ಸಿರಿಗೆ
ದೂರವಾಗಿ ಎಂದೆಂದಿಗೂ
ಹೋಗಲಾರೆ ನಿಮ್ಮಾಣೆಗೂ
ನಿಮ್ಮ ಮನೆ ಬಾಗಿಲಿಗೆ
ತೋರಣದ ಹಾಗಿರುವೇ
ನಿಮ್ಮ ಮನೆ ದೀಪವಾಗೀ
ಬೆಳಗುವೆ ನನ್ನಾಣೆಗೂ
ನಿಮ್ಮ ನೆನಪಲ್ಲೇ ನನ್ನಾ
ಬಾಳಾ ನಾನೂ ಸಾಗಿಸುವೇ

ಕಂಗಳು ತುಂಬಿರಲು ಕಂಬನಿ ಧಾರೆಯಲಿ...

Thursday, June 7, 2007

ತೌರಸುಖದೊಳಗೆನ್ನ ಮರೆತಿಹಳು ಎನ್ನದಿರಿ

ರಚನೆ: ಕೆ.ಎಸ್. ನರಸಿಂಹಸ್ವಾಮಿ
ಕವನ ಸಂಕಲನ: ಮೈಸೂರು ಮಲ್ಲಿಗೆ

ತೌರಸುಖದೊಳಗೆನ್ನ ಮರೆತಿಹಳು ಎನ್ನದಿರಿ
ನಿಮ್ಮ ಪ್ರೇಮವ ನೀವೇ ಒರೆಯನಿಟ್ಟು
ನಿಮ್ಮ ನೆನಸೇ ನನ್ನ ಹಿಂಡುವುದು ಹಗಲಿನಲಿ
ಇರುಳಿನಲಿ ಕಾಣುವುದು ನಿಮ್ಮ ಕನಸು

ಬೃಂದಾವನದ ಹಣೆಗೆ ಕುಂಕುಮವನಿಡುವಾಗ
ಕಾಣುವುವು ಶ್ರೀತುಳಸಿ ಕೃಷ್ಣತುಳಸಿ
ನೀಲಾಂಬರನ ನಡುವೆ ಚಂದಿರನು ಬಂದಾಗ
ರೋಹಿಣಿಯು ಬೆಳಗುವಳು ಸನ್ನಿಧಿಯಲಿ

ತೌರಸುಖದೊಳಗೆನ್ನ ಮರೆತಿಹಳು ಎನ್ನದಿರಿ...

ತಾಯಡಿಗೆ ರುಚಿಯೆಂದು ನಾನಿಲ್ಲಿ ಕುಳಿತಿಲ್ಲ
ಇನ್ನು ತಂಗಿಯ ಮದುವೆ ತಿಂಗಳಿಹುದು
ತೌರಪಂಜರದೊಳಗೆ ಸೆರೆಯಾದ ಗಿಳಿಯಲ್ಲ
ಐದು ತಿಂಗಳ ಕಂದ ನಗುತಲಿಹುದು

ತೌರಸುಖದೊಳಗೆನ್ನ ಮರೆತಿಹಳು ಎನ್ನದಿರಿ...

ಚಿತ್ರದುರ್ಗದ ರೈಲು ನಿತ್ಯವೂ ಓಡೋಡಿ
ಮೈಸೂರ ಸೇರುವುದು ನಾನು ಬಲ್ಲೆ
ನಾಳೆ ಮಂಗಳವಾರ ಮಾರನೆಯ ದಿನ ನವಮಿ
ಆಮೇಲೆ ನಿಲ್ಲುವೆನೇ ನಾನು ಇಲ್ಲಿ

ತೌರಸುಖದೊಳಗೆನ್ನ ಮರೆತಿಹಳು ಎನ್ನದಿರಿ...

ಮರೆತಿಹಳು ಎನ್ನದಿರಿ ಕಣ್ಮರೆಯ ತೋಟದಲಿ
ಅಚ್ಚ ಮಲ್ಲಿಗೆ ಹೂವು ಅರಳು ಬಿರಿಯುತಿಹುದು
ಬಂದುಬಿಡುವೆನು ಬೇಗ ಮುನಿಯದಿರಿ ಕೊರಗದಿರಿ
ಚುಚ್ಚದಿರಿ ಮೊನೆಯಾದ ಮಾತನೆಸೆದು

Wednesday, June 6, 2007

ಉತ್ತರದ್ರುವದಿಂ ದಕ್ಷಿಣದ್ರುವಕೂ

ಚಿತ್ರ: ಶರಪಂಜರ
ಸಾಹಿತ್ಯ: ದ.ರಾ.ಬೇಂದ್ರೆಉತ್ತರದ್ರುವದಿಂ ದಕ್ಷಿಣದ್ರುವಕೂ
ಚುಂಬಕ ಗಾಳಿಯು ಬೀಸುತಿದೆ
ಸೂರ್ಯನ ಬಿಂಬಕೆ ಚಂದ್ರನ ಬಿಂಬವು
ರಂಜಿಸಿ ನಗೆಯಲಿ ಮೀಸುತಿದೆ

ಭೂರಂಗಕೆ ಅಭಿಸಾರಕೆ ಕರೆಯುತ
ತಿಂಗಳು ತಿಂಗಳು ನವೆಯುತಿದೆ
ತುಂಬುತ ತುಳುಕುತ ತೀರುತ ತನ್ನೊಳು
ತಾನೇ ಸವಿಯನು ಸವಿಯುತಿದೆ

ಉತ್ತರದ್ರುವದಿಂ ದಕ್ಷಿಣದ್ರುವಕೂ...

ಭೂವನ ಕುಸುಮಿಸಿ ಪುಲಕಿಸಿ ಮರಳಿಸಿ
ಕೋಟಿ ಕೋಟಿ ಸಲ ಹೊಸೆಯಿಸಿತು
ಮಿತ್ರನ ಮೈತ್ರಿಯ ಒಸಗೆ ಮಸಗದಿದೆ
ಮರುಕದ ದಾರೆಯ ಮಸೆಯಿಸಿತು

ಉತ್ತರದ್ರುವದಿಂ ದಕ್ಷಿಣದ್ರುವಕೂ...

ಅಕ್ಷಿನಮೀಲನ ಮಾಡದೆ
ನಕ್ಷತ್ರದ ಗಣ ಗಗನದಿ ಹಾರದಿದೆ
ಬಿದಿಗೆಯ ಬಿಂಬಾಧರದಲಿ ಇಂದಿಗು
ಮಿಲನದ ಚಿಹ್ನವು ತೋರದಿದೆ

ಉತ್ತರದ್ರುವದಿಂ ದಕ್ಷಿಣದ್ರುವಕೂ...

ನಲಿವಾ ಗುಲಾಬಿ ಹೂವೆ

ಚಿತ್ರ: ಆಟೋ ರಾಜ
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಹಿನ್ನಲೆ ಗಾಯಕ: ಎಸ್.ಪಿ.ಬಾಲಸುಬ್ರಮಣ್ಯಮ್ನಲಿವಾ ಗುಲಾಬಿ ಹೂವೆ
ಮುಗಿಲಾ ಮೇಲೇರಿ ನಗುವೆ
ನಿನಗೇ ನನ್ನಲ್ಲಿ ಒಲವು
ಅರಿಯೇ ನನ್ನಲ್ಲಿ ಚಲವೂ
ನಲಿವಾ ಗುಲಾಬಿ ಹೂವೆಒಲವೋ... ಚಲವೋ...

ಸುಳಿದೇ ತಂಗಾಳಿಯಂತೆ
ನುಡಿದೇ ಸಂಗೀತದಂತೆ
ಒಲವಿನ ಬಲೆಯಲಿ ಸೆಳೆಯುತ ಕುಳಿತೇ
ಸೊಗಸಾಗಿ... ಹಿತವಾಗಿ...
ಮನವಾ ನೀ ಸೇರಲೆಂದೆ
ಬಯಕೇ ನೂರಾರು ತಂದೇ
ಬಯಸದೆ ಬಳಿಯಲಿ ಸುಳಿಯುತ ಒಲಿದೆ
ಇಂದೇಕೇ ದೂರಾದೇ
ಬಯಸದೆ ಬಳಿಯಲಿ ಸುಳಿಯುತ ಒಲಿದೆ
ಹೀಗೇಕೇ... ಮರೆಯಾದೆ...

ನಲಿವಾ ಗುಲಾಬಿ ಹೂವೆ...

ಸುಮವೇ ನೀ ಬಾಡದಂತೆ
ಬಿಸಿಲಾ ನೀ ನೋಡದಂತೆ
ನೆರಳಲಿ ಸುಖದಲಿ ನಗುತಿರು ಚೆಲುವೆ
ಎಂದೆಂದೂ... ಎಂದೆಂದೂ...
ಇರು ನೀ ಹಾಯಾಗಿ ಹೀಗೆ
ಇರಲೀ ನನಗೆಲ್ಲ ಬೇಗೆ
ಕನಸಲಿ ನೋಡಿದ ಸಿರಿಯನು ಮರೆವೆ
ನಿನಗಾಗಿ ನನಗಾಗಿ
ಕನಸಲಿ ನೋಡಿದ ಸಿರಿಯನು ಮರೆವೆ
ನಿನಗಾಗಿ... ನನಗಾಗಿ...

ನಲಿವಾ ಗುಲಾಬಿ ಹೂವೆ...

ನೀನಿಲ್ಲದೇ ನನಗೇನಿದೇ


ನೀನಿಲ್ಲದೇ ನನಗೇನಿದೇ
ಮನಸ್ಸೆಲ್ಲಾ ನಿನ್ನಲ್ಲಿ ನೆಲೆಯಾಗಿದೆ
ಕನಸ್ಸೆಲ್ಲಾ ಕಣ್ಣಲ್ಲೇ ಸೆರೆಯಾಗಿದೇ

ನಿನಗಾಗಿ ಕಾದು ಕಾದು ಪರಿತಪಿಸಿ ನೊಂದೇ ನಾನು
ಕಹಿಯಾದ ವಿರಹದ ನೋವೂ ಹಗಲಿರುಳು ತಂದೇ ನೀನು
ಎದೆಯಾಸೆ ಏನೋ ಎಂದೂ ನೀ ಕಾಣದಾದೇ
ನಿಶೆಯೊಂದೆ ನನ್ನಲ್ಲೀ ನೀ ತುಂಬಿದೇ
ಬೆಳಕೊಂದೆ ನಿನ್ನಿಂದಾ ನಾ ಬಯಸಿದೇ

ನೀನಿಲ್ಲದೇ ನನಗೇನಿದೇ...

ಒಲವೆಂಬ ಕಿರಣಾ ಬೀರೀ ಒಳಗಿರುವ ಬಣ್ಣಾ ತೆರೆಸೀ
ಒಣಗಿರುವ ಎದೆಬಿಲದಲ್ಲಿ ಭರವಸೆಯ ಜೀವ ಹರಿಸಿ
ಸೆರೆಯಿಂದ ಬಿಡಿಸಿ ನನ್ನ ಆತಂಕ ನೀಗು
ಹೊಸ ಜೀವ ನಿನ್ನಿಂದಾ ನಾ ತಾಳುವೇ
ಹೊಸ ಲೋಕ ನಿನ್ನಿಂದಾ ನಾ ಕಾಣುವೇ

ನೀನಿಲ್ಲದೇ ನನಗೇನಿದೇ ...

ನಗುವ ನಯನ ಮದುರ ಮೌನ

ಚಿತ್ರ: ಪಲ್ಲವಿ ಅನುಪಲ್ಲವಿ
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ: ಇಳಯ ರಾಜ
ಹಿನ್ನಲೆ ಗಾಯಕರು: ಎಸ್.ಪಿ.ಬಾಲಸುಬ್ರಮಣ್ಯಮ್, ಎಸ್.ಜಾನಕಿ

ನಗುವ ನಯನ ಮದುರ ಮೌನ
ಮಿಡಿವ ಹೃದಯ ಇರೆ ಮಾತೇಕೆ
ಹೊಸ ಭಾಷೆಯಿದೂ ರಸ ಕಾವ್ಯವಿದೂ
ಇದ ಹಾಡಲು ಕವಿ ಬೇಕೇ

ನಿಂಗಾಗಿ ಹೇಳುವೆ ಕಥೆ ನೂರನೂ
ನಾನಿಂದು ನಗಿಸುವೆ ಈ ನಿನ್ನನೂ
ಇರುಳಲ್ಲಿ ಕಾಣುವೆ ಕಿರುನಗೆಯನೂ
ಕಣ್ಣಲ್ಲಿ ಹುಚ್ಚೊತ್ತ ಹೋಂಗನಸನೂ
ಜೊತೆಯಲ್ಲಿ ನಡೆವೆ ನಾ ಮಳೆಯಲೀ
ಬಿಡದಂತೆ ಹಿಡಿವೇ ಈ ಕೈಯನೂ
ಗೆಳೆಯಾ ಜೊತೆಗೇ ಹಾರೀ ಬರುವೇ
ಬಾನಾ ಎಲ್ಲೇ ದಾಟೀ ಬರುವೇ

ನಗುವ ನಯನ ಮದುರ ಮೌನ...

ಈ ರಾತ್ರಿ ಹಾಡೋ ಪಿಸು ಮಾತಲೀ
ನಾ ಕಂಡೆ ಇನಿದಾದ ಸವಿರಾಗವ
ನೀನಲ್ಲಿ ನಾನಿಲ್ಲಿ ಏಕಾಂತದೀ
ನಾಕಂಡೆ ನನ್ನದೇ ಹೊಸಲೋಕವ
ಈ ಸ್ನೇಹ ತಂದಿದೆ ಎದೆಯಲ್ಲೀ
ಎಂದೆಂದು ಅಳಿಸದ ರಂಗೋಲೀ
ಆಸೇ ಹೂವಾ ಹಾಸೀ ಕಾದೇ
ನಡೆ ನೀ ಕನಸಾ ಹೊಸಕೀ ಬಿಡದೇ

ನಗುವ ನಯನ ಮದುರ ಮೌನ...

ನಿನ್ನ ಪ್ರೇಮದ ಪರಿಯ

ಮೈಸೂರು ಮಲ್ಲಿಗೆ - ನಿನ್ನ ಪ್ರೇಮದ ಪರಿಯ
ರಚನೆ: ಕೆ.ಎಸ್.ನರಸಿಂಹ ಸ್ವಾಮಿ


ನಿನ್ನ ಪ್ರೇಮದ ಪರಿಯ
ನಾನರಿಯೆ ಕನಕಾಂಗಿ
ನಿನ್ನೊಳಿದೆ ನನ್ನ ಮನಸ್ಸು
ಹುಣ್ಣಿಮೆಯ ರಾತ್ರಿಯಲಿ
ಉಕ್ಕುವುದು ಕಡಲಾಗಿ
ನಿನ್ನೊಲುಮೆ ನನ್ನ ಕಂಡು
ನಿನ್ನೋಳಿದೆ ನನ್ನ ಮನಸ್ಸು

ಸಾಗರನ ಹೃದಯದಲಿ
ರತ್ನಪರ್ವತ ಮಾಲೆ
ಮಿಂಚಿನಲಿ ಮೀವುದಂತೆ
ತೀರದಲಿ ಬಳುಕುವಲ್ಲೆ
ಕಣ್ಣಚುಂಬಿಸಿ ಮತ್ತೆ
ಸಾಗುವುದು ಕನಸಿನಂತೆ
ನಿನ್ನೋಳಿದೆ ನನ್ನ ಮನಸ್ಸು

ನಿನ್ನ ಪ್ರೇಮದ ಪರಿಯ ...

ಅಲೆಬಂದು ಕರೆಯುವುದು
ನಿನ್ನೊಲುಮೆ ಅರಮನೆಗೆ
ಒಳಗಡಲ ರತ್ನಪುರಿಗೆ
ಅಲೆಯಿಡುವ ಮುತ್ತಿನಲೆ
ಕಾಣುವುದು ನಿನ್ನೊಲುಮೆ
ಒಳಗುಡಿಯ ಮೂರ್ತಿಮಹಿಮೆ
ನಿನ್ನೋಳಿದೆ ನನ್ನ ಮನಸ್ಸು

ನಿನ್ನ ಪ್ರೇಮದ ಪರಿಯ ...

ಹಿಂದೂಸ್ಥಾನುವು ಎಂದೂ ಮರೆಯದ

ಚಿತ್ರ: ಅಮೃತ ಘಳಿಗೆ
ಸಾಹಿತ್ಯ: ವಿಜಯನಾರಸಿಂಹ
ಸಂಗೀತ: ವಿಜಯಭಾಸ್ಕರ
ಹಿನ್ನಲೆ ಗಾಯಕ: ಜಯಚಂದ್ರ


ಹಿಂದೂಸ್ಥಾನುವು ಎಂದೂ ಮರೆಯದ
ಭಾರತ ರತ್ನವು ಜನ್ಮಿಸಲಿ
ಈ ಕನ್ನಡ ಮಾತೆಯ ಮಡಿಲಲ್ಲಿ
ಈ ಕನ್ನಡ ನುಡಿಯಾ ಗುಡಿಯಲ್ಲಿ

ಧೇಶಭಕ್ತಿಯ ಬಿಸಿ ಬಿಸಿ ನೆತ್ತರು
ಧಮನಿ ಧಮನಿಯಲಿ ತುಂಬಿರಲಿ
ವಿಶ್ವಪ್ರೇಮದಾ ಶಾಂತಿ ಮಂತ್ರದ
ಘೋಷವ ಎಲ್ಲೆಡೆ ಮೋಳಗಿಸಲಿ
ಸಕಲ ಧರ್ಮದ ಸತ್ವ ಸಮನ್ವಯ
ತತ್ವ ಜ್ಯೋತಿಯ ಬೆಳಗಿಸಲಿ

ಹಿಂದೂಸ್ಥಾನುವು ಎಂದೂ ಮರೆಯದ...

ಕನ್ನಡ ತಾಯಿಯ ಕೋಮಲ ಹೃದಯದ
ಭವ್ಯ ಶಾಸನ ಬರೆಯಿಸಲಿ
ಕನ್ನಡ ನಾಡಿನ ಎದೆ ಎದೆಯಲ್ಲೂ
ಕನ್ನಡ ವಾಣಿಯ ಸ್ಥಾಪಿಸಲಿ
ಈ ಮಣ್ಣಿನ ಪುಣ್ಯದ ದಿವ್ಯ ಚರಿತ್ರೆಯ
ಕಲ್ಲು ಕಲ್ಲಿನಲೂ ಕೆತ್ತಿಸಲಿ

ಹಿಂದೂಸ್ಥಾನುವು ಎಂದೂ ಮರೆಯದ...