Tuesday, May 21, 2013

ಮನಸೇ ನನ್ನ ಮನಸೇ ಏನಾಗಿದೆ ನಿನಗೆ

ರಚನೆಬಿ. ಆರ್. ಲಕ್ಷ್ಮಣರಾವ್ 
ಸಂಗೀತ ಮತ್ತು ಹಿನ್ನಲೆ ಗಾಯನ: ಸಿ ಅಶ್ವಥ್
ಮನಸೇ ನನ್ನ ಮನಸೇ
ಏನಾಗಿದೆ ನಿನಗೆ
ಏಕೆ ಅವಳ ಕಹಿ ನೆನಪೇ
ಜೇನಾಗಿದೆ ನಿನಗೆ

ಬೇಡವೆಂದರೂ ಏಕೆ ತರುವೆ
ಕಣ್ಮುಂದೆ ಅವಳ ಚಿತ್ರ
ಬೂಟಾಟಿಕೆ ಆ ನಾಟಕ
ಅವಳ ವಿವಿಧ ಪಾತ್ರ

ಮನಸೇ ನನ್ನ ಮನಸೇ ಏನಾಗಿದೆ ನಿನಗೆ...

ಪದೇ ಪದೇ ಮತ್ತದೇ ಜಾಗಕ್ಕೆ
ನನ್ನ ಸೆಳೆವೆಯೇಕೆ
ಕಂಡು ಮರುಗಲು ಕುಸಿದ ಅರಮನೆ
ಉರುಳಿದ ಪ್ರೇಮ ಪತಾಕೆ

ಮನಸೇ ನನ್ನ ಮನಸೇ ಏನಾಗಿದೆ ನಿನಗೆ...

ಮಣ್ಣಾಗಿದೆ ನನ್ನ ಪ್ರೀತಿ
ಹೃದಯದ ಗೋರಿಯಲ್ಲಿ
ಗೋರಿಯನ್ನೇಕೆ ಬಗೆಯುವೆ
ಮೋಹದ ಹಾರೆಯಲ್ಲಿ

ಮನಸೇ ನನ್ನ ಮನಸೇ ಏನಾಗಿದೆ ನಿನಗೆ...

Thursday, May 2, 2013

ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು

ಸಾಹಿತ್ಯ : ಆರ್.ಎನ್. ಜಯಗೋಪಾಲ್
ಸಂಗೀತ : ವಿಜಯಭಾಸ್ಕರ್
ಗಾಯನ : ಬಿ.ಕೆ. ಸುಮಿತ್ರಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು
ಚಿಕ್ಕವ್ವ....ಚಿಕ್ಕವ್ವ.....ಎನ್ನುತ ತನ್ನಾ ಗೆಳೆಯರ ಕರೆದಿತ್ತು
ಅದ ಕೇಳಿ ನಾ ಮೈ ಮರೆತೆ ಸ್ವರವೊಂದು ಆಗಲೆ ಕಲಿತೆ
ಹಾಡಿದೆ ಈ ಕವಿತೆ ನಾ ಹಾಡಿದೆ ಈ ಕವಿತೆ

ದೂರದ ಗುಡಿಯಲಿ ಪೂಜೆಯ ವೇಳೆಗೆ
ಘಂಟೆಯು ಮೊಳಗಿತ್ತು
ಟಣ್ ಡಣ್ ಟಣ್ ಡಣ್
ಎನ್ನುತ ಸೇವೆಗೆ ಎಲ್ಲರ ಕರೆದಿತ್ತು
ಅದಕೇಳಿ ನಾ ಮೈಮರೆತೆ
ಸ್ವರವೊಂದು ಆಗಲೆ ಕಲಿತೆ
ಹಾಡಿದೆ ಈ ಕವಿತೆ ನಾ ಹಾಡಿದೆ ಈ ಕವಿತೆ

ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು...

ಹರಿಯುವ ನದಿಯಾ ನೋಡುತ ನಿಂತೆ
ಅಲೆಗಳು ಕುಣಿದಿತ್ತು
ಕಲ ಕಲ ಕಲ ಕಲ......
ಮಂಜುಳ ನಾದವು ಕಿವಿಗಳ ತುಂಬಿತ್ತು
ಅದಕೇಳಿ ನಾ ಮೈ ಮರೆತೆ
ಸ್ವರವೊಂದು ಆಗಲೆ ಕಲಿತೆ
ಹಾಡಿದೆ ಈ ಕವಿತೆ ನಾ ಹಾಡಿದೆ ಈ ಕವಿತೆ

ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು...

Sunday, October 3, 2010

ಹೋದೆಯ ದೂರ ಓ ಜೊತೆಗಾರ ಸೇರಲು ಬಂದಾಗ

ಚಿತ್ರ: ಅನುಭವ
ಸಾಹಿತ್ಯ: ವಿ.ಮನೋಹರ್
ಸಂಗೀತ: ಎಲ್. ವೈದ್ಯನಾಥನ್
ಗಾಯನ: ವಾಣಿ ಜಯರಾಮ್
ಹೋದೆಯ ದೂರ ಓ ಜೊತೆಗಾರ ಸೇರಲು ಬಂದಾಗ
ನೀ ಅರಿಯದೆ ಹೋದೆ ಪ್ರೇಮದ ನಾ ಸಂದೇಶವ ತಂದಾಗ
ನೀ ಶೃತಿಯ ಮಿಡಿದಾಗ ಹಾಡಿದೆ ನಾ ಹುಸಿ ರಾಗ
ತೋರಿದೆ ನೀ ಅನುರಾಗ ಗಮನಿಸದೆ ತೆರಳಿದೆ ನಾ

ಹೋದೆಯ ದೂರ ಓ ಜೊತೆಗಾರ ಸೇರಲು ಬಂದಾಗ...

ನಲ್ಲ ಬಳಿಸಾರಿ ಮೆಲ್ಲ ಬಿಗಿದಾಗ ತಳ್ಳಿ ದೂರಾದೆ ಅರಿಯದೆ ನಾ
ಮದನ ನೀನಾಗಿ ಮುದದಿ ತೆರೆದಾಗ ರತಿಯ ಸವಿಲೀಲೆ ಮರೆತೆನು ನಾ
ಹೂವಿನ ಹಾಸಿಗೆ ನೀ ಹಾಸಿ ಮೋಗದಿ ನನ್ನನು ಕರೆದಾಗ
ಮಾಡಿದೆ ನಾನು ಪರಿಹಾಸ ನೀಡದೆ ನಿನಗೆ ಉಲ್ಲಾಸ
ಸವಿ ಇರುಳ ಹೊಂಗನಸ ಮುರಿದೆನು ನಾ

ಹೋದೆಯ ದೂರ ಓ ಜೊತೆಗಾರ ಸೇರಲು ಬಂದಾಗ...

ಮೇಘ್ಹ ಸರಿದಾಗ ತಾರೆ ಹೊಳೆದಾಗ ಚಂದ್ರ ಮರೆಯಾದ ನನ್ನ ತೊರೆದ
ಯಾರ ಬಳಿನಾನು ನೋವ ನುಡಿದೇನು ಇನಿಯ ಮರೆತಾಗ ಸಹಿಸೆನು ನಾ
ಬಾಳೆನು ಚಿಂತೆಯ ಪಾಲಾಇ ದುಂಬಿಯ ಕಾಣದ ಹೂವಾಗಿ
ತಾಳೆನು ನಾನು ಏಕಾಂತ ಬರುವೆನೆಇನ್ನ ಓ ಕಾಂತ
ಕೊರಗುತಿಹೆ ಮರುಗುತಿಗೆ ವಿರಹದಿ ನಾ

ಹೋದೆಯ ದೂರ ಓ ಜೊತೆಗಾರ ಸೇರಲು ಬಂದಾಗ...

Sunday, September 26, 2010

ಬಾನಲ್ಲಿ ನಿನ್ನಿಂದ ಸೂರ್ಯೋದಯ

ಚಿತ್ರ: ನೀನು ನಕ್ಕರೆ ಹಾಲು ಸಕ್ಕರೆ
ಸಾಹಿತ್ಯ: ಹಂಸಲೇಖ
ಸಂಗೀತ: ಹಂಸಲೇಖಶರಣೂ... ಶರಣೆನುವೆ...ಶರಣೆನುವೆ...
ಓ... ಪ್ರಭುವೇ... ಶರಣೆನುವೆ...

ಬಾನಲ್ಲಿ ನಿನ್ನಿಂದ ಸೂರ್ಯೋದಯ
ಬಾಳಲ್ಲಿ ನಿನ್ನಿಂದ ಅರುಣೋದಯ
ಬಾನಲ್ಲಿ ನಿನ್ನಿಂದ ಚಂದ್ರೋದಯ
ಆನಂದ ನಿನ್ನಿಂದ ಕರುಣಾಮಯ
ಮೋಡ ಮಳೆಯಾಗಲು ನೀರು ಭುವಿ ಸೇರಲು
ಭೂಮಿ ಹಸಿರಾಗಲು ಲೋಕ ಗೆಲುವಾಗಲು
ಓಂ ಓಂ ಓಂ ಓಂ ಓಂ ಓಂ ಓಂ
ನೀ ಕಾರಣನು ದೇವ

ಬಾನಲ್ಲಿ ನಿನ್ನಿಂದ ಸೂರ್ಯೋದಯ...

ಈ ಲತೆ ನೀನೆ... ಆssss
ಈ ಲತೆ ನೀನೆ ಈ ಸುಮ ನೀನೆ
ಈ ಸುಮತಂದ ಗಂಧವೂ ನೀನೆ
ಕಲ್ಲಲ್ಲಿ ಮುಳ್ಳಲ್ಲಿ ಮಣ್ಣಲ್ಲಿಯೂ
ಗಿರಿಯಲ್ಲಿ ಗುಹೆಯಲ್ಲಿ ವನದಲ್ಲಿಯೂ
ಬಾನಾಡಿ ಕೊರಳಲ್ಲಿ ಇಂಪಾಗಿಯೂ
ತಂಗಾಳಿ ಸುಳಿಯಲ್ಲಿ ತಂಪಾಗಿಯೂ
ತಂಗಾಳಿ ಸುಳಿಯಲ್ಲಿ ತಂಪಾಗಿಯೂ
ಹಣ್ಣ ರುಚಿಯಲ್ಲಿಯೂ, ಜೇನ ಸಿಹಿಯಲ್ಲಿಯೂ, ಹಾಲ ಬೆಳಕಲ್ಲಿಯೂ, ರಾತ್ರಿ ಇರುಳಲ್ಲಿಯೂ
ಓಂ ಓಂ ಓಂ ಓಂ ಓಂ ಓಂ
ನೀನೇ ಇರುವೆ ದೇವ ಆಸ್ಸ್ಸ್

ಬಾನಲ್ಲಿ ನಿನ್ನಿಂದ ಸೂರ್ಯೋದಯ...

ಈಶ್ವರ ನೀನೇ...ಆsss
ಈಶ್ವರ ನೀನೇ ಶಾಶ್ವತ ನೀನೇ
ಎಲ್ಲವೂ ನೀನೇ ಎಲ್ಲೆಡೆ ನೀನೇ
ಸಂತೋಷ ಕೊಡುವಂತ ನಗೆಯಲ್ಲಿಯೂ
ಕಂದಂಗೆ ತಾಯ್ಕೊಡುವ ಮುತ್ತಲ್ಲಿಯೂ
ಹಿತವಾದ ಸಂಗೀತ ಸ್ವರದಲ್ಲಯೂ
ಕವಿಯಾಡೊ ಸವಿಯಾದ ಮಾತಲ್ಲಿಯೂ
ಕವಿಯಾಡೊ ಸವಿಯಾದ ಮಾತಲ್ಲಿಯೂ
ಬೆಂಕಿ ಕಿಡಿಯಲ್ಲಿಯೂ, ನೀರ ಹನಿಯಲ್ಲಿಯೂ, ಕಡಲ , ಸಿಡಿವ ಸಿಡಿಲಲ್ಲಿಯೂ
ಓಂ ಓಂ ಓಂ ಓಂ ಓಂ ಓಂ
ನೀನೇ ಇರುವೆ ದೇವ ಆsss

ಬಾನಲ್ಲಿ ನಿನ್ನಿಂದ ಸೂರ್ಯೋದಯ...

Saturday, September 18, 2010

ಅಳಬೇಡ ತಂಗಿ ಅಳಬೇಡ

ಚಿತ್ರ: ಸಂತ ಶಿಶುನಾಳ ಶರೀಫ
ಸಾಹಿತ್ಯ: ಶಿಶುನಾಳ ಷರೀಫ್
ಸಂಗೀತ: ಸಿ.ಅಶ್ವಥ್
ಹಿನ್ನಲೆ ಗಾಯನ:
ಶಿವಮೊಗ್ಗ ಸುಬ್ಬಣ್ಣಅಳಬೇಡ ತಂಗಿ ಅಳಬೇಡ
ನಿನ್ನ ಕಳುಹಬಂದವರಿಲ್ಲಿ ಉಳುಹಿಕೊಂಬುವರಿಲ್ಲ

ದಡಿಕೀಲೆ ಉಡಿಯಕ್ಕಿ ಹಾಕಿದರವ್ವ
ಒಳ್ಳೆ ದುಡುಕೀಲೇ ಮುಂದಕ್ಕೆ ನೂಕಿದರವ್ವ
ಮಿಡಿಕ್ಯಾಡಿ ಮದಿವ್ಯಾದೆ ಮೋಜು ಕಾಣವ್ವ
ನೀ ಹುಡುಕ್ಯಾಡಿ ಮಾಯದ ಮರವೇರಿದ್ಯವ್ವ

ಅಳಬೇಡ ತಂಗಿ ಅಳಬೇಡ...

ರಂಗೀಲೀ ಉಟ್ಟೀದಿ ರೇಶ್ಮೀ ದಡಿ ಸೀರಿ
ಮತ್ತ ಹಂಗ ನೂಲಿನ ಪರಿವಿ ಮರಿತ್ಯವ್ವ ನಾರಿ
ಮಂಗಳ ಮೂರುತಿ ಶಿಶುನಾಳಧೀಶನ
ಅಂಗಳಕ ನೀ ಹೊರತು ಆದ್ಯವ್ವ ಗೌರಿ

ಅಳಬೇಡ ತಂಗಿ ಅಳಬೇಡ...

Saturday, September 11, 2010

ಗುಡಿಯ ನೋಡಿರಣ್ಣಾ

ಚಿತ್ರ: ಸಂತ ಶಿಶುನಾಳ ಶರೀಫ
ಸಾಹಿತ್ಯ: ಶಿಶುನಾಳ ಷರೀಫ್
ಸಂಗೀತ: ಸಿ.ಅಶ್ವಥ್
ಹಿನ್ನಲೆ ಗಾಯನ: ಸಿ.ಅಶ್ವಥ್ಗುಡಿಯ ನೋಡಿರಣ್ಣಾ
ದೇಹದ ಗುಡಿಯ ನೋಡಿರಣ್ಣಾ

ಗುಡಿಯ ನೋಡಿರಿದು
ಪೊಡವಿಗೆ ಒಡೆಯನು
ಆಡಗಿಕೊಂಡು ಕಡುಬೆಡಗಿನೊಳಿರುತಿಹ
ಗುಡಿಯ ನೋಡಿರಣ್ಣಾ

ಮೂರು ಮೂಲೆಯ ಕಲ್ಲು ಅದರೊಳು
ಜಾರುತಿರುವ ಕಲ್ಲು
ಧೀರ ನಿರ್ಗುಣನು ಸಾರ ಸಗುಣದಲಿ
ತೋರಿ ಅಡಗಿ ತಾ ಬ್ಯಾರ್ಯಾಗಿರುತಿಹ
ಗುಡಿಯ ನೋಡಿರಣ್ಣಾ ದೇಹದ ಗುಡಿಯ ನೋಡಿರಣ್ಣಾ...

ಆರು ಮೂರು ಕಟ್ಟಿ ಮೇಲಕೆ
ಏರಿದನು ಘಟ್ಟಿ
ಭೇರಿ ಕಾಳಿ ಶಂಖ
ಭಾರಿ ಸುನಾದದಿ
ಮೀರಿದಾನಂದ ತೋರಿ ಹೊಳೆಯುತಿಹ
ಗುಡಿಯ ನೋಡಿರಣ್ಣಾ ದೇಹದ ಗುಡಿಯ ನೋಡಿರಣ್ಣಾ...

ಸಾಗುತಿಹವು ದಿವಸ ಬಹುದಿನ
ಹೋಗಿ ಮಾಡಿ ಪಾಯ್ಸ
ಯೋಗಿ ರಾಜ ಶಿಶುನಾಳಧೀಶ ತಾ—
ನಾಗಿ ಪರಾತ್ಪರ ಬ್ರಹ್ಮರೂಪನಿಹ
ಗುಡಿಯ ನೋಡಿರಣ್ಣಾ ದೇಹದ ಗುಡಿಯ ನೋಡಿರಣ್ಣಾ...

Sunday, September 5, 2010

ಮೋಹದ ಹೆಂಡತಿ ತೀರಿದ ಬಳಿಕ

ಚಿತ್ರ: ಸಂತ ಶಿಶುನಾಳ ಶರೀಫ
ಸಾಹಿತ್ಯ: ಶಿಶುನಾಳ ಷರೀಫ್
ಸಂಗೀತ: ಸಿ.ಅಶ್ವಥ್
ಹಿನ್ನಲೆ ಗಾಯನ: ಸಿ.ಅಶ್ವಥ್ಮೋಹದ ಹೆಂಡತಿ ತೀರಿದ ಬಳಿಕ
ಮಾವನ ಮನೆಯ ಹಂಗಿನ್ಯಾಕೋ
ಸಾವು ನೋವಿಗೆ ಸಾರದ ಬೀಗನ
ಮಾತಿನ ಹಂಗೊಂದೆನಗ್ಯಾಕೋ?

ಖಂಡವನದಿ ಸೋಕಿ ತನ್ನ ಮೈಯೊಳು ತಾಕಿ
ಬಂಡೆದ್ದು ಹೋಗುವುದು ಭಯವ್ಯಾಕೋ?
ಮಂಡಲನಾಡಿಗೆ ಪಿಂಡದ ಗೂಡಿಗೆ
ಚಂಡಿತನದಿ ಚರಿಸ್ಯಾಡುವುದ್ಯಾಕೋ?

ಮೋಹದ ಹೆಂಡತಿ ತೀರಿದ ಬಳಿಕ...

ತಂದೆ ಗೋವಿಂದ ಗುರುವಿನ ಸೇವಕ
ಕುಂದಗೋಳಕೆ ಬಂದು ನಿಂತನ್ಯಾಕೋ ?
ಬಂಧುರ ಶಿಶುನಾಳಾಧೀಶನ ದಯದಿಂದ
ಇಂದಿಗೆ ವಿಷಯದ ವ್ಯಸನವು ಸಾಕೋ.

ಮೋಹದ ಹೆಂಡತಿ ತೀರಿದ ಬಳಿಕ...