Friday, March 12, 2010

ಈ ಗುಲಾಬಿಯು ನಿನಗಾಗಿ...

ಚಿತ್ರ: ಮುಳ್ಳಿನ ಗುಲಾಬಿ
ಸಂಗೀತ: ಸತ್ಯಂ
ಹಿನ್ನಲೆ ಗಾಯನ:ಎಸ್.ಪಿ


ಈ ಗುಲಾಬಿಯು ನಿನಗಾಗಿ
ಇದು ಚೆಲ್ಲುವ ಪರಿಮಳ ನಿನಗಾಗಿ
ಈ ಹೂವಿನಂದ ಪ್ರೇಯಸಿ
ನಿನಗಾಗೆ ಕೇಳೆ ಪ್ರೇಯಸಿ
ನಿನಗಾಗೆ ಕೇಳೆ ಓ ರತಿ

ನನ್ನೀ ಕಣ್ಣಲಿ ಕಾತರವೇನು
ನಿನ್ನನು ಕಾಣುವ ಆತುರವೇನು
ನನ್ನೀ ಕಣ್ಣಲಿ ಕಾತರವೇನು
ನಿನ್ನನು ಕಾಣುವ ಆತುರವೇನು
ಆತುರ ತರುವಾ ವೇದನೆಯೇನು
ಜೀವದ ಜೀವವು ಪ್ರಿಯತಮೆ ನೀನು

ಈ ಗುಲಾಬಿಯು ನಿನಗಾಗಿ...

ನೀರನು ತೊರೆದರೆ ಕಮಲಕೆ ಸಾವು
ಹೂವನು ಮರೆತರೆ ದುಂಬಿಗೆ ಸಾವು
ನೀರನು ತೊರೆದರೆ ಕಮಲಕೆ ಸಾವು
ಹೂವನು ಮರೆತರೆ ದುಂಬಿಗೆ ಸಾವು..
ಕಾಣದೆ ಹೋದರೆ ಅರೆಕ್ಷಣ ನಿನ್ನ
ಮರುಕ್ಷಣ ಪ್ರಿಯತಮೆ ನನ್ನ ಸಾವು

ಈ ಗುಲಾಬಿಯು ನಿನಗಾಗಿ...

Tuesday, March 9, 2010

ಚಲುವಾ ಪ್ರತಿಮೆ ನೀನು ನಲಿವಾ ರಸಿಕ ನಾನು...

ಚಿತ್ರ: ಟೋನಿ
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ: ರಾಜನ್-ನಾಗೇಂದ್ರ
ಹಿನ್ನಲೆ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ
ಚಲುವಾ ಪ್ರತಿಮೆ ನೀನು ನಲಿವಾ ರಸಿಕ ನಾನು
ಮಧುರಾ ಸಂಗೀತ ನೀನು ಹೃದಯಾ ಸಂಗಾತಿ ನಾನೂ

ಜೀವನಾ ಕಡಲಲ್ಲಿ ನೀ ಗಂಗೆ ಸಂಗಮದಂತೇ ಬೆರೆಯೆ ಓಡೋಡಿ ಬಂದೇ
ಪ್ರೇಮದಾ ಹೊಸ ಬಾನಲೀ ಲಜ್ಜೆ ಕೆಂಪೇರಿದಂತೇ ನೀನು ರಂಗನ್ನೇ ತಂದೇ
ಚಲುವನು ಸೂಸಿ ಬಲೆಯನು ಬೀಸಿ
ಚಲುವನು ಸೂಸಿ ಬಲೆಯನು ಬೀಸಿ
ಸೆಳೆದಾ ಸೊಗಸೂ ನಿಂದೇನೂ ಹೋ

ಚಲುವಾ ಪ್ರತಿಮೆ ನೀನು ನಲಿವಾ ರಸಿಕ ನಾನು...

ಪ್ರೀತಿಗೆ ಮುಳ್ಳಾಗಿಹಾ ತೆರೆಯು ದೂರಾಗಬೇಕೂ ಮನಸು ಒಂದಾಗಬೇಕೂ
ಕಂಬನೀ ಈ ಕಣ್ಣಲ್ಲೀ ಇಂದು ಕೊನೆಯಾಗ ಬೇಕೂ ನಗುತ ನೀನಿರಬೇಕೂ
ಜೀವವು ನೀನು ದೇಹವು ನಾನೂ
ಜೀವವು ನೀನು ದೇಹವು ನಾನೂ
ಮನವಾ ಕವಿದಾ ನೋವೇನು ಹೋ

ಚಲುವಾ ಪ್ರತಿಮೆ ನೀನು ನಲಿವಾ ರಸಿಕ ನಾನು...

Monday, March 8, 2010

ನೇಸರ ನೋಡು ನೇಸರ ನೋಡು...

ಚಿತ್ರ: ಕಾಕನ ಕೋಟೆ
ರಚನೆ: ಮಾಸ್ತಿ ವೆಂಕಟೇಶ ಐಯಂಗಾರ್
ಸಂಗೀತ: ಸಿ.ಅಶ್ವತ್ಥ್ನೇಸರ ನೋಡು ನೇಸರ ನೋಡು
ನೇಸರ ನೋಡು ನೇಸರ ನೋಡು

ಮೂಡಾಣ ಬಯ್ಲಿಂದ ಮೇಲಕ್ಕೆ ಹಾರಿ
ದೂರಾದ ಮಲೆಯ ತಲೆಯಾನೆ ಏರಿ

ನೇಸರ ನೋಡು ನೇಸರ ನೋಡು...

ಹೊರಳೀತು ಇರಳು ಬೆಳಕೀನ ಬೂಡು
ತೆರಯೀತು ನೋಡು ಬೆಳಗೀತು ನಾಡು

ನೇಸರ ನೋಡು ನೇಸರ ನೋಡು...

Sunday, March 7, 2010

ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ...

ಚಿತ್ರ:ಬಂಗಾರದ ಹೂವು
ಸಂಗೀತ: ರಾಜನ್-ನಾಗೇಂದ್ರ
ಹಿನ್ನಲೆ ಗಾಯನ: ಪಿ.ಸುಶೀಲ, ಎಸ್.ಜಾನಕಿನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ
ಈ ಬಾಳ ಬುತ್ತಿಯಲಿ ಸಿಹಿ ಪಾಲು ನಿನಗಿರಲಿ
ಕಹಿ ಎಲ್ಲ ನನಗಿರಲಿ

ಸಹನೆ ಮೀರಿ ಕಾಣದ ಕೈಗೆ ಮಾಡಿತೇನೋ ಮೈಯಿಗೆ ಮುಯ್ಯಿ
ಯಾರು ಇದಕೆ ಹೊಣೆಯೇ ಇಲ್ಲ ಇರಲಿ ನನಗೆ ನಿಂದನೆ ಎಲ್ಲ
ವಿಧಿಯು ಹೂಡಿ ಒಳಸಂಚನ್ನು ತೊರೆಯಿತೆನ್ನ ಹೊಂಗನಸನ್ನು
ನೋವ ನುಂಗಿ ಬಾಳುವೆ ನಾನು ಸುಖವು ನಿನ್ನ ಕಾಡಿತೇನು
ಈ ಬೇಗೆ ನೀಗಲಿ ಮನಸು ಹಗುರವಾಗಲಿ

ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ...

ಏನೇನೊ ಬಯಸಿತು ಮನಸು ಕೈ ಸೇರೆ ಎಲ್ಲಾ ಸೊಗಸು
ಕೈ ಜಾರೆ ಎಲ್ಲಾ ಕನಸು ಆಸೆ ಮರೆತರೇ ಲೇಸು
ನನ್ನ ಕಣ್ಣ ನೀರಿನಲ್ಲಿ ನಿನ್ನ ಬಿಂಬ ಕಾಣುತಿರಲಿ
ಈ ಬಾಳು ಇಂತೆ ಇರಲಿ ನಿನ್ನ ನೆನವು ಚಿರವಾಗಿರಲಿ
ಈ ಬೇಗೆ ನೀಗಲಿ ಮನಸು ಹಗುರವಾಗಲಿ

ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ...

ಮಧುವನ ಕರೆದರೆ...

ಚಿತ್ರ: ಇಂತಿ ನಿನ್ನ ಪ್ರೀತಿಯ
ಗೀತರಚನೆ: ಜಯಂತ್ ಕಾಯ್ಕಿಣಿ
ಸಂಗೀತ: ಸಾಧು ಕೋಕಿಲ
ಹಿನ್ನಲೆ ಗಾಯನ:ವಾಣಿ ಮತ್ತು ಚಿನ್ಮಯೀ
ಮಧುವನ ಕರೆದರೆ
ತನು ಮನ ಸೆಳೆದರೆ
ಶರಣಾಗು ನೀನು ಆದರೇ

ಬಿರುಗಾಳಿಯಲ್ಲಿ ತೇಲಿ
ಹೊಸ ಘಳಿಗೆ ಬಂದಿದೆ
ಕನಸೊಂದು ಮೈಯ್ಯಾ ಮುರಿದು
ಬಾ ಬಳಿಗೆ ಎಂದಿದೇ
ಶರಣಾಗು ಆದರೆ
ಸೆರೆಯಾಗು ಆದರೆ

ಮಧುವನ ಕರೆದರೆ...

ಕಂಗಳಲಿ ಕನಸಿನ ಕುಲುಮೆ
ಹೊಳೆಯುತಿದೆ ಜೀವದ ಒಲುಮೆ
ಬೆಳಕಲ್ಲಿ ನೋಡು ಆದರೆ
ಮೈಯೆಲ್ಲಾ ಚಂದ್ರನ ಗುರುತು
ಹೆಸರೆಲ್ಲೊ ಹೋಗಿದೆ ಮರೆತು
ನಾನ್ಯಾರು ಹೇಳು ಆದರೇ

ಮಧುವನ ಕರೆದರೆ...

ಮನಸಿನ ಹಸಿ ಬಣ್ಣಗಳಲ್ಲಿ
ನೀನೆಳೆವಾ ರೇಖೆಗಳಲ್ಲಿ
ನಾ ಮೂಡಬೇಕು ಆದರೇ
ಎದುರಿದ್ದು ಕರೆಯುವೇ ಏಕೆ
ಜೊತೆಯಿದ್ದು ಮರೆಯುವೇ ಏಕೆ
ನಿನ್ನೊಲವು ನಿಜವೇ ಆದರೇ

ಮಧುವನ ಕರೆದರೆ...

Friday, March 5, 2010

ಉಷೆ ಮೂಡಿದಾಗ ಪ್ರಿಯೆ ನಿನ್ನ ಕೆನ್ನೆಯ...

ಚಿತ್ರ: ಪ್ರೀತಿ ವಾತ್ಸಲ್ಯ
ಸಂಗೀತ: ರಾಜನ್-ನಾಗೇಂದ್ರ
ಹಿನ್ನಲೆ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ


ಉಷೆ ಮೂಡಿದಾಗ ಪ್ರಿಯೆ ನಿನ್ನ ಕೆನ್ನೆಯ
ರಂಗನ್ನು ನೋಡಿದೆ ಮೈ ಮರೆತು ಹಾಡಿದೆ
ಆ ಮೇಘ ಮಿಂಚಲು ನಗೆ ಮಿಂಚು ನಿನ್ನದು
ನೆನಪಾಗಿ ಬಂದಿದೆ ಸಿಹಿ ನೋವ ತಂದಿದೆ

ಹೂವರಳಿ ನಿಂತ ವೇಳೆ ಕಣ್ಮುಂದೆ ಬಂದಿತಲ್ಲೆ
ಪ್ರಿಯೆ ನಿನ್ನ ಕಾಡಿಗೆ ಕಣ್ಣ ಆ ನೋಟದಂದವೆ
ಕರೆ ನೀಡಿ ನೋಟದಲ್ಲಿ ನೀ ನಿಂತೆ ದೂರದಲ್ಲಿ
ಬಳಿ ಬಂದೆ ಬಯಸಿ ನಿನ್ನ ನೀ ಹೋದೆ ಕಾಣದೆ
ಆ ನೆನಪು ಕಾಡಿದೆ ನನ್ನ ಈ ಬೇಗೆ ತಾಳೆನು ಚಿನ್ನ

ಉಷೆ ಮೂಡಿದಾಗ ಪ್ರಿಯೆ ನಿನ್ನ ಕೆನ್ನೆಯ...

ಕಾವೇರಿ ನೀರಿನಲ್ಲು ಕನ್ನಡದ ಕಾವ್ಯದಲ್ಲು
ಬೇಲೂರ ಬಾಲೆಯಲ್ಲೂ ನಾ ಕಂಡೆ ನಿನ್ನನ್ನು
ಒಂದೊಂದು ಭಂಗಿಯಲ್ಲು ಒಂದೊಂದು ಭಾವದಲ್ಲೂ
ಒಂದೊಂದು ಮಾತಿನಲ್ಲು ನೀ ಸೆಳೆದೆ ನನ್ನನು
ನೀ ನಿಂತೆ ಕಣ ಕಣದಲ್ಲು ನನ್ನೆದೆಯ ಉಸಿರುಸಿರಲ್ಲು

ಉಷೆ ಮೂಡಿದಾಗ ಪ್ರಿಯೆ ನಿನ್ನ ಕೆನ್ನೆಯ...

Wednesday, March 3, 2010

ಮಧುಮಾಸ ಚಂದ್ರಮಾ ನೈದಿಲೆಗೆ ಸಂಭ್ರಮಾ

ಚಿತ್ರ: ವಿಜಯವಾಣಿ
ಗೀತರಚನೆ: ಚಿ.ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಹಿನ್ನಲೆ ಗಾಯನ:ಎಸ್.ಜಾನಕಿ ಮತ್ತು ವಾಣಿ ಜಯರಾಮ್


ಮಧುಮಾಸ ಚಂದ್ರಮಾ ನೈದಿಲೆಗೆ ಸಂಭ್ರಮಾ
ಒಲವಿನಾ ಲೋಕಕೇ ನೀ ತಂದೇ ಪೌರ್ಣಿಮಾ

ನಾ ಪ್ರೇಮದರಮನೆಯಲ್ಲೀ ವೈಭೋಗ ಸಿರಿಯನು ಕಂಡೇ
ನನ್ನೆದೆಯ ಸಿಂಹಾಸನದೀ ನೀ ರಾಜ್ಯವಾಳಿದೇ
ನೀ ನನ್ನ ಬಾಳಿನ ಪುಟದೇ ಅನುರಾಗ ಕವಿತೆಯ ಬರೆದೇ
ನಾನಾಗ ಭಾವದ ಹೊಳೆಯಾ ಅಲೆಯಲ್ಲಿ ತೇಲಿದೇ
ಅಲೆಯಲ್ಲಿ ತೇಲಿ ತೇಲಿದೇ

ಮಧುಮಾಸ ಚಂದ್ರಮಾ ನೈದಿಲೆಗೆ ಸಂಭ್ರಮಾ...

ರಸಪೂರ್ಣ ಮೈತ್ರಿಯ ಸಮಯಾ ನೂರಾಸೆ ಕಡಲಿದು ಹೃದಯಾ
ನೀ ನಡೆಸು ಅಂಬಿಗನಾಗಿ ಒಲವೆಂಬ ನೌಕೆಯಾ
ಬಂಗಾರ ತೇರನು ಏರೀ ನಾ ನಿನ್ನ ಸಂಗದಿ ಬೆರೆವೆ
ಸುಖವೆಂಬ ಉಯ್ಯಾಲೆಯಲೀ ಸಖ ನಿನ್ನಾ ತೂಗುವೇ
ಹಾಯಾಗಿ ತೂಗಿ ಕೂಗುವೇ

ಮಧುಮಾಸ ಚಂದ್ರಮಾ ನೈದಿಲೆಗೆ ಸಂಭ್ರಮಾ...

Tuesday, March 2, 2010

ಜೋ ಜೋ ಲಾಲೀ ನಾ ಹಾಡುವೇ

ಚಿತ್ರ: ಚಿನ್ನಾ ನಿನ್ನಾ ಮುದ್ದಾಡುವೆ
ಸಂಗೀತ: ಸಲೀಲ್ ಚೌಧರಿ
ಹಿನ್ನಲೆ ಗಾಯನ: ಕೆ.ಜೆ.ಏಸುದಾಸ್, ಎಸ್.ಜಾನಕಿ, ಅನಿತಾ(ಅಂತರಾ) ಚೌಧರಿಜೋ ಜೋ ಲಾಲೀ ನಾ ಹಾಡುವೇ
ಚಿನ್ನಾ ನಿನ್ನಾ ಮುದ್ದಾಡುವೇ
ಹೂವಂತ ಕನಸೂ ತಾ ಮೂಡಿ ಬರಲಿ
ನಗುವಾ ಅಳುವಾ ಕಣ್ಣಲ್ಲಿ ಇಂದೂ

ಜೋ ಜೋ ಲಾಲೀ ನಾ ಹಾಡುವೇ...

ನಿದಿರಾ ದೇವೀ ಬಾ ಮೆಲ್ಲಗೇ
ತಾರೆಯಿಂದಾ ಈ ಭೂಮಿಗೇ
ಸಾವಿರ ರಂಗಿನ ಮಳೆಬಿಲ್ಲಿನಾ
ಮಾಲೆಯ ಧರಿಸೀ ಬಾ ಇಲ್ಲಿಗೇ
ಚಿನ್ನದ ತೇರಲಿ ಒಲವಿಂದ ಬಂದು
ತಾರೇ ಮುತ್ತು ಕಂದಂಗೆ ಇಂದು

ಜೋ ಜೋ ಲಾಲೀ ನಾ ಹಾಡುವೇ...

ಚಿಪ್ಪೀ ಮಡಿಲಾ ಮುತ್ತಂತೆಯೇ
ದೀಪದೆ ಜ್ಯೋತಿ ಇರುವಂತೆಯೇ
ಕಿರಣದೇ ಕಾಂತಿ ಕುಳಿತಂತೆಯೇ
ಮೊಗ್ಗಲಿ ಸೌರಭ ಇರುವಂತೆಯೇ
ರಾತ್ರಿ ಸೆರಗೂ ಹಾಸಿರಲಿಂದೂ
ಮಲಗೂ ಮಮತೆ ಮಡಿಲಲ್ಲಿ ಬಂದೂ

ಜೋ ಜೋ ಲಾಲೀ ನಾ ಹಾಡುವೇ...

Monday, March 1, 2010

ತಾರೆಯು ಬಾನಿಗೆ ತಾವರೆ ನೀರಿಗೆ...

ಚಿತ್ರ: ಬಿಳಿಗಿರಿಯ ಬನದಲ್ಲಿ
ಗೀತರಚನೆ: ಚಿ.ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಹಿನ್ನಲೆ ಗಾಯನ: ಎಸ್.ಪಿ, ಎಸ್.ಜಾನಕಿ
ತಾರೆಯು ಬಾನಿಗೆ ತಾವರೆ ನೀರಿಗೆ
ಹೂವೆಲ್ಲ ವನದೇವಿ ಮುಡಿಗೆ
ನೀ ನನ್ನ ಬಾಳಿಗೆ
ಮುತ್ತೆಲ್ಲ ಕಡಲಲ್ಲಿ ಬಂಗಾರ ನೆಲದಲ್ಲಿ ಇರುವಂತೆ
ನೀ ನನ್ನಲ್ಲಿ, ಕಣ್ಣಲ್ಲಿ, ಮನದಲ್ಲಿ

ತಾರೆಯು ಬಾನಿಗೆ ತಾವರೆ ನೀರಿಗೆ...

ಸೂರ್ಯ ಬಾನಲಿ ಬೆಳಕು ಭೂಮಿಯಲ್ಲಿ
ಹೂಗಳು ಲತೆಯಲಿ ನೀನೆಂದು ನನ್ನಲಿ
ಮೋಡ ಬಾನಲಿ ಮಳೆಯು ಭೂಮಿಯಲ್ಲಿ
ದುಂಬಿಯು ಹೂವಲಿ ನಾನೆಂದು ನಿನ್ನಲಿ, ನಾನೆಂದೂ ನಿನ್ನಲಿ
ತಾಳಿಯು ಕೊರಳಿಗೆ ಉಂಗುರ ಬೆರಳಿಗೆ
ಹೂದಂಡೆ ಈ ಹೆಣ್ಣ ಮುಡಿಗೆ
ನೀ ನನ್ನ ಬಾಳಿಗೆ
ಮುತ್ತೆಲ್ಲ ಕಡಲಲ್ಲಿ ಬಂಗಾರ ನೆಲದಲ್ಲಿ ಇರುವಂತೆ
ನೀ ನನ್ನಲ್ಲಿ, ಕಣ್ಣಲ್ಲಿ, ಮನದಲ್ಲಿ

ತಾರೆಯು ಬಾನಿಗೆ ತಾವರೆ ನೀರಿಗೆ...

ನಿನ್ನಾ ಕಾಣದಾ ದಿನವೂ ವರುಷದಂತೆ
ನಿನ್ನನು ಸೇರಲು ಯುಗವೊಂದು ನಿಮಿಷದಂತೆ
ನಿನ್ನಾ ನೋಡಲು ಬಯಕೆ ಹೃದಯದಲ್ಲಿ
ನಾಚುತ ಕರಗಿದೆ ನನ್ನಾಸೆ ನಿನ್ನಲಿ, ನನ್ನಾಸೆ ನಿನ್ನಲಿ
ತಾಳಿಯು ಕೊರಳಿಗೆ ಉಂಗುರ ಬೆರಳಿಗೆ
ಹೂದಂಡೆ ಈ ಹೆಣ್ಣ ಮುಡಿಗೆ
ನೀ ನನ್ನ ಬಾಳಿಗೆ
ಮುತ್ತೆಲ್ಲ ಕಡಲಲ್ಲಿ ಬಂಗಾರ ನೆಲದಲ್ಲಿ ಇರುವಂತೆ
ನೀ ನನ್ನಲ್ಲಿ, ಕಣ್ಣಲ್ಲಿ, ಮನದಲ್ಲಿ

ತಾರೆಯು ಬಾನಿಗೆ ತಾವರೆ ನೀರಿಗೆ...