Thursday, April 29, 2010

ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುಡಿಯೋಕೆ

ಚಿತ್ರ: ಜಿಮ್ಮಿಗಲ್ಲು
ಗೀತರಚನೆ:
ಚಿ.ಉದಯಶಂಕರ್
ಸಂಗೀತ: ವಿಜಯಭಾಸ್ಕರ
ಹಿನ್ನಲೆ ಗಾಯನ:ವಿಷ್ಣುವರ್ಧನ್


ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುಡಿಯೋಕೆ
ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ
ಅಂಗೈಯಗಲ ಜಾಗ ಸಾಕು ಹಾಯಾಗಿರೋಕೆ

ಕಾಡ್ನಾಗೊಂದು ಮರವೇ ಒಣಗಿ ಬಿದ್ರೆ ಏನಾಯ್ತು
ಊರ್ನಾಗೊಂದು ಮನೆಯೇ ಉರಿದು ಹೋದ್ರೆ ಏನಾಯ್ತು
ಕಾಡ್ನಾಗೊಂದು ಮರವೇ ಒಣಗಿ ಬಿದ್ರೆ ಏನಾಯ್ತು
ಊರ್ನಾಗೊಂದು ಮನೆಯೇ ಉರಿದು ಹೋದ್ರೆ ಏನಾಯ್ತು
ಒಂದು ಅಲ್ಲೇ ನನ್ನ ಹೋಗು ಅಂದರೇನು
ಸ್ವರ್ಗದಂತಾ ಊರು ನನ್ನ ಹತ್ತಿರ ಕರೆದಾಯ್ತು

ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುಡಿಯೋಕೆ...

ದುಡಿಯೋದಕ್ಕೆ ಮೈಯ್ಯಾ ತುಂಬಾ ಶಕ್ತಿ ತುಂಬೈತೆ
ಅಡ್ಡ ದಾರಿ ಹಿಡಿಯೋದ್ ತಪ್ಪು ಅಂಥ ಗೊತ್ತೈತೆ
ದುಡಿಯೋದಕ್ಕೆ ಮೈಯ್ಯಾ ತುಂಬಾ ಶಕ್ತಿ ತುಂಬೈತೆ
ಅಡ್ಡ ದಾರಿ ಹಿಡಿಯೋದ್ ತಪ್ಪು ಅಂಥ ಗೊತ್ತೈತೆ
ಕಷ್ಟಾ ಒಂದೇ ಬರದು ಸುಖವೂ ಬರದೇ ಇರದು
ರಾತ್ರೀ ಮುಗಿದಾ ಮೇಲೇ ಹಗಲು ಬಂದೇ ಬತ್ತೈತೆ

ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುಡಿಯೋಕೆ...

ಹರಿಯೋ ನದಿಯು ಒಂದೇ ಕಡೆ ನಿಲ್ಲೊಕ್ಕಾಗಲ್ಲ
ಹುಟ್ಟಿದ ಮನುಷ ಒಂದೇ ಊರಲಿ ಬಾಳೋಕಾಗಲ್ಲ
ಹರಿಯೋ ನದಿಯು ಒಂದೇ ಕಡೆ ನಿಲ್ಲೊಕ್ಕಾಗಲ್ಲ
ಹುಟ್ಟಿದ ಮನುಷ ಒಂದೇ ಊರಲಿ ಬಾಳೋಕಾಗಲ್ಲ
ದೇವ್ರು ತಾನೇ ನಂಗೆ ಅಪ್ಪ ಅಮ್ಮ ಎಲ್ಲಾ
ಸಾಯೋ ತನಕಾ ನಂಬಿದವರ ಕೈ ಬಿಡಾಕಿಲ್ಲ

ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುಡಿಯೋಕೆ...

Wednesday, April 28, 2010

ಆಕಾಶ ದೀಪವು ನೀನು

ಚಿತ್ರ: ಪಾವನ ಗಂಗಾ
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಹಿನ್ನಲೆ ಗಾಯನ: ಎಸ್.ಜಾನಕಿ



ಆಕಾಶ ದೀಪವು ನೀನು
ನಿನ್ನ ಕಂಡಾಗ ಸಂತೋಷವೇನು
ಆ ನೋಟದಲ್ಲೇ ಹಿತವೇನು
ಮರೆಯಾದಾಗ ನೋವೇನು

ಕಂಡಂದೆ ಕುಣಿಯಿತು ಮನವು
ಹೂವಾಗಿ ಅರಳಿತು ತನುವು
ಹೃದಯದ ವೀಣೆಯನು ಹಿತವಾಗಿ ನುಡಿಸುತಲಿ
ಆನಂದ ತುಂಬಲು ನೀನು
ನಾ ನಲಿವೆನು

ಆಕಾಶ ದೀಪವು ನೀನು...

ಅನುರಾಗ ಮೂಡಿದ ಮೇಲೆ
ನೂರಾರು ಬಯಕೆಯ ಮಾಲೆ
ಹೃದಯವು ಧರಿಸಿದೆ
ಈ ಜೀವ ಸೋಲುತಿದೆ
ಸಂಗಾತಿ ಆದರೆ ನೀನು
ನಾ ಉಳಿವೆನು

ಆಕಾಶ ದೀಪವು ನೀನು...

ಹೂವಾದ ಆಸೆಯೆಲ್ಲ
ಮುಳ್ಳಾಗಿ ಹೋಯಿತಲ್ಲ
ಜೀವ ನೋವ ತಾಳದಲ್ಲ
ಸುಖ ಶಾಂತಿ ಇನ್ನಿಲ್ಲ
ನೆಮ್ಮದಿಯ ಕಾಣೆನು
ನಾ ಸೋತೆನು

ಆಕಾಶ ದೀಪವು ನೀನು...

Friday, March 12, 2010

ಈ ಗುಲಾಬಿಯು ನಿನಗಾಗಿ...

ಚಿತ್ರ: ಮುಳ್ಳಿನ ಗುಲಾಬಿ
ಸಂಗೀತ: ಸತ್ಯಂ
ಹಿನ್ನಲೆ ಗಾಯನ:ಎಸ್.ಪಿ


ಈ ಗುಲಾಬಿಯು ನಿನಗಾಗಿ
ಇದು ಚೆಲ್ಲುವ ಪರಿಮಳ ನಿನಗಾಗಿ
ಈ ಹೂವಿನಂದ ಪ್ರೇಯಸಿ
ನಿನಗಾಗೆ ಕೇಳೆ ಪ್ರೇಯಸಿ
ನಿನಗಾಗೆ ಕೇಳೆ ಓ ರತಿ

ನನ್ನೀ ಕಣ್ಣಲಿ ಕಾತರವೇನು
ನಿನ್ನನು ಕಾಣುವ ಆತುರವೇನು
ನನ್ನೀ ಕಣ್ಣಲಿ ಕಾತರವೇನು
ನಿನ್ನನು ಕಾಣುವ ಆತುರವೇನು
ಆತುರ ತರುವಾ ವೇದನೆಯೇನು
ಜೀವದ ಜೀವವು ಪ್ರಿಯತಮೆ ನೀನು

ಈ ಗುಲಾಬಿಯು ನಿನಗಾಗಿ...

ನೀರನು ತೊರೆದರೆ ಕಮಲಕೆ ಸಾವು
ಹೂವನು ಮರೆತರೆ ದುಂಬಿಗೆ ಸಾವು
ನೀರನು ತೊರೆದರೆ ಕಮಲಕೆ ಸಾವು
ಹೂವನು ಮರೆತರೆ ದುಂಬಿಗೆ ಸಾವು..
ಕಾಣದೆ ಹೋದರೆ ಅರೆಕ್ಷಣ ನಿನ್ನ
ಮರುಕ್ಷಣ ಪ್ರಿಯತಮೆ ನನ್ನ ಸಾವು

ಈ ಗುಲಾಬಿಯು ನಿನಗಾಗಿ...

Tuesday, March 9, 2010

ಚಲುವಾ ಪ್ರತಿಮೆ ನೀನು ನಲಿವಾ ರಸಿಕ ನಾನು...

ಚಿತ್ರ: ಟೋನಿ
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ: ರಾಜನ್-ನಾಗೇಂದ್ರ
ಹಿನ್ನಲೆ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ




ಚಲುವಾ ಪ್ರತಿಮೆ ನೀನು ನಲಿವಾ ರಸಿಕ ನಾನು
ಮಧುರಾ ಸಂಗೀತ ನೀನು ಹೃದಯಾ ಸಂಗಾತಿ ನಾನೂ

ಜೀವನಾ ಕಡಲಲ್ಲಿ ನೀ ಗಂಗೆ ಸಂಗಮದಂತೇ ಬೆರೆಯೆ ಓಡೋಡಿ ಬಂದೇ
ಪ್ರೇಮದಾ ಹೊಸ ಬಾನಲೀ ಲಜ್ಜೆ ಕೆಂಪೇರಿದಂತೇ ನೀನು ರಂಗನ್ನೇ ತಂದೇ
ಚಲುವನು ಸೂಸಿ ಬಲೆಯನು ಬೀಸಿ
ಚಲುವನು ಸೂಸಿ ಬಲೆಯನು ಬೀಸಿ
ಸೆಳೆದಾ ಸೊಗಸೂ ನಿಂದೇನೂ ಹೋ

ಚಲುವಾ ಪ್ರತಿಮೆ ನೀನು ನಲಿವಾ ರಸಿಕ ನಾನು...

ಪ್ರೀತಿಗೆ ಮುಳ್ಳಾಗಿಹಾ ತೆರೆಯು ದೂರಾಗಬೇಕೂ ಮನಸು ಒಂದಾಗಬೇಕೂ
ಕಂಬನೀ ಈ ಕಣ್ಣಲ್ಲೀ ಇಂದು ಕೊನೆಯಾಗ ಬೇಕೂ ನಗುತ ನೀನಿರಬೇಕೂ
ಜೀವವು ನೀನು ದೇಹವು ನಾನೂ
ಜೀವವು ನೀನು ದೇಹವು ನಾನೂ
ಮನವಾ ಕವಿದಾ ನೋವೇನು ಹೋ

ಚಲುವಾ ಪ್ರತಿಮೆ ನೀನು ನಲಿವಾ ರಸಿಕ ನಾನು...

Monday, March 8, 2010

ನೇಸರ ನೋಡು ನೇಸರ ನೋಡು...

ಚಿತ್ರ: ಕಾಕನ ಕೋಟೆ
ರಚನೆ: ಮಾಸ್ತಿ ವೆಂಕಟೇಶ ಐಯಂಗಾರ್
ಸಂಗೀತ: ಸಿ.ಅಶ್ವತ್ಥ್



ನೇಸರ ನೋಡು ನೇಸರ ನೋಡು
ನೇಸರ ನೋಡು ನೇಸರ ನೋಡು

ಮೂಡಾಣ ಬಯ್ಲಿಂದ ಮೇಲಕ್ಕೆ ಹಾರಿ
ದೂರಾದ ಮಲೆಯ ತಲೆಯಾನೆ ಏರಿ

ನೇಸರ ನೋಡು ನೇಸರ ನೋಡು...

ಹೊರಳೀತು ಇರಳು ಬೆಳಕೀನ ಬೂಡು
ತೆರಯೀತು ನೋಡು ಬೆಳಗೀತು ನಾಡು

ನೇಸರ ನೋಡು ನೇಸರ ನೋಡು...

Sunday, March 7, 2010

ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ...

ಚಿತ್ರ:ಬಂಗಾರದ ಹೂವು
ಸಂಗೀತ: ರಾಜನ್-ನಾಗೇಂದ್ರ
ಹಿನ್ನಲೆ ಗಾಯನ: ಪಿ.ಸುಶೀಲ, ಎಸ್.ಜಾನಕಿ



ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ
ಈ ಬಾಳ ಬುತ್ತಿಯಲಿ ಸಿಹಿ ಪಾಲು ನಿನಗಿರಲಿ
ಕಹಿ ಎಲ್ಲ ನನಗಿರಲಿ

ಸಹನೆ ಮೀರಿ ಕಾಣದ ಕೈಗೆ ಮಾಡಿತೇನೋ ಮೈಯಿಗೆ ಮುಯ್ಯಿ
ಯಾರು ಇದಕೆ ಹೊಣೆಯೇ ಇಲ್ಲ ಇರಲಿ ನನಗೆ ನಿಂದನೆ ಎಲ್ಲ
ವಿಧಿಯು ಹೂಡಿ ಒಳಸಂಚನ್ನು ತೊರೆಯಿತೆನ್ನ ಹೊಂಗನಸನ್ನು
ನೋವ ನುಂಗಿ ಬಾಳುವೆ ನಾನು ಸುಖವು ನಿನ್ನ ಕಾಡಿತೇನು
ಈ ಬೇಗೆ ನೀಗಲಿ ಮನಸು ಹಗುರವಾಗಲಿ

ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ...

ಏನೇನೊ ಬಯಸಿತು ಮನಸು ಕೈ ಸೇರೆ ಎಲ್ಲಾ ಸೊಗಸು
ಕೈ ಜಾರೆ ಎಲ್ಲಾ ಕನಸು ಆಸೆ ಮರೆತರೇ ಲೇಸು
ನನ್ನ ಕಣ್ಣ ನೀರಿನಲ್ಲಿ ನಿನ್ನ ಬಿಂಬ ಕಾಣುತಿರಲಿ
ಈ ಬಾಳು ಇಂತೆ ಇರಲಿ ನಿನ್ನ ನೆನವು ಚಿರವಾಗಿರಲಿ
ಈ ಬೇಗೆ ನೀಗಲಿ ಮನಸು ಹಗುರವಾಗಲಿ

ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ...

ಮಧುವನ ಕರೆದರೆ...

ಚಿತ್ರ: ಇಂತಿ ನಿನ್ನ ಪ್ರೀತಿಯ
ಗೀತರಚನೆ: ಜಯಂತ್ ಕಾಯ್ಕಿಣಿ
ಸಂಗೀತ: ಸಾಧು ಕೋಕಿಲ
ಹಿನ್ನಲೆ ಗಾಯನ:ವಾಣಿ ಮತ್ತು ಚಿನ್ಮಯೀ




ಮಧುವನ ಕರೆದರೆ
ತನು ಮನ ಸೆಳೆದರೆ
ಶರಣಾಗು ನೀನು ಆದರೇ

ಬಿರುಗಾಳಿಯಲ್ಲಿ ತೇಲಿ
ಹೊಸ ಘಳಿಗೆ ಬಂದಿದೆ
ಕನಸೊಂದು ಮೈಯ್ಯಾ ಮುರಿದು
ಬಾ ಬಳಿಗೆ ಎಂದಿದೇ
ಶರಣಾಗು ಆದರೆ
ಸೆರೆಯಾಗು ಆದರೆ

ಮಧುವನ ಕರೆದರೆ...

ಕಂಗಳಲಿ ಕನಸಿನ ಕುಲುಮೆ
ಹೊಳೆಯುತಿದೆ ಜೀವದ ಒಲುಮೆ
ಬೆಳಕಲ್ಲಿ ನೋಡು ಆದರೆ
ಮೈಯೆಲ್ಲಾ ಚಂದ್ರನ ಗುರುತು
ಹೆಸರೆಲ್ಲೊ ಹೋಗಿದೆ ಮರೆತು
ನಾನ್ಯಾರು ಹೇಳು ಆದರೇ

ಮಧುವನ ಕರೆದರೆ...

ಮನಸಿನ ಹಸಿ ಬಣ್ಣಗಳಲ್ಲಿ
ನೀನೆಳೆವಾ ರೇಖೆಗಳಲ್ಲಿ
ನಾ ಮೂಡಬೇಕು ಆದರೇ
ಎದುರಿದ್ದು ಕರೆಯುವೇ ಏಕೆ
ಜೊತೆಯಿದ್ದು ಮರೆಯುವೇ ಏಕೆ
ನಿನ್ನೊಲವು ನಿಜವೇ ಆದರೇ

ಮಧುವನ ಕರೆದರೆ...