ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು
ಚಿಕ್ಕವ್ವ....ಚಿಕ್ಕವ್ವ.....ಎನ್ನುತ ತನ್ನಾ ಗೆಳೆಯರ ಕರೆದಿತ್ತು
ಅದ ಕೇಳಿ ನಾ ಮೈ ಮರೆತೆ ಸ್ವರವೊಂದು ಆಗಲೆ ಕಲಿತೆ
ಹಾಡಿದೆ ಈ ಕವಿತೆ ನಾ ಹಾಡಿದೆ ಈ ಕವಿತೆ
ದೂರದ ಗುಡಿಯಲಿ ಪೂಜೆಯ ವೇಳೆಗೆ
ಘಂಟೆಯು ಮೊಳಗಿತ್ತು
ಟಣ್ ಡಣ್ ಟಣ್ ಡಣ್
ಎನ್ನುತ ಸೇವೆಗೆ ಎಲ್ಲರ ಕರೆದಿತ್ತು
ಅದಕೇಳಿ ನಾ ಮೈಮರೆತೆ
ಸ್ವರವೊಂದು ಆಗಲೆ ಕಲಿತೆ
ಹಾಡಿದೆ ಈ ಕವಿತೆ ನಾ ಹಾಡಿದೆ ಈ ಕವಿತೆ
ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು...
ಹರಿಯುವ ನದಿಯಾ ನೋಡುತ ನಿಂತೆ
ಅಲೆಗಳು ಕುಣಿದಿತ್ತು
ಕಲ ಕಲ ಕಲ ಕಲ......
ಮಂಜುಳ ನಾದವು ಕಿವಿಗಳ ತುಂಬಿತ್ತು
ಅದಕೇಳಿ ನಾ ಮೈ ಮರೆತೆ
ಸ್ವರವೊಂದು ಆಗಲೆ ಕಲಿತೆ
ಹಾಡಿದೆ ಈ ಕವಿತೆ ನಾ ಹಾಡಿದೆ ಈ ಕವಿತೆ
ಬಾನಲ್ಲಿ ನಿನ್ನಿಂದ ಸೂರ್ಯೋದಯ ಬಾಳಲ್ಲಿ ನಿನ್ನಿಂದ ಅರುಣೋದಯ ಬಾನಲ್ಲಿ ನಿನ್ನಿಂದ ಚಂದ್ರೋದಯ ಆನಂದ ನಿನ್ನಿಂದ ಕರುಣಾಮಯ ಮೋಡ ಮಳೆಯಾಗಲು ನೀರು ಭುವಿ ಸೇರಲು ಭೂಮಿ ಹಸಿರಾಗಲು ಲೋಕ ಗೆಲುವಾಗಲು ಓಂ ಓಂ ಓಂ ಓಂ ಓಂ ಓಂ ಓಂ ನೀ ಕಾರಣನು ದೇವ
ಬಾನಲ್ಲಿ ನಿನ್ನಿಂದ ಸೂರ್ಯೋದಯ...
ಈ ಲತೆ ನೀನೆ... ಆssss ಈ ಲತೆ ನೀನೆ ಈ ಸುಮ ನೀನೆ ಈ ಸುಮತಂದ ಗಂಧವೂ ನೀನೆ ಕಲ್ಲಲ್ಲಿ ಮುಳ್ಳಲ್ಲಿ ಮಣ್ಣಲ್ಲಿಯೂ ಗಿರಿಯಲ್ಲಿ ಗುಹೆಯಲ್ಲಿ ವನದಲ್ಲಿಯೂ ಬಾನಾಡಿ ಕೊರಳಲ್ಲಿ ಇಂಪಾಗಿಯೂ ತಂಗಾಳಿ ಸುಳಿಯಲ್ಲಿ ತಂಪಾಗಿಯೂ ತಂಗಾಳಿ ಸುಳಿಯಲ್ಲಿ ತಂಪಾಗಿಯೂ ಹಣ್ಣ ರುಚಿಯಲ್ಲಿಯೂ, ಜೇನ ಸಿಹಿಯಲ್ಲಿಯೂ, ಹಾಲ ಬೆಳಕಲ್ಲಿಯೂ, ರಾತ್ರಿ ಇರುಳಲ್ಲಿಯೂ ಓಂ ಓಂ ಓಂ ಓಂ ಓಂ ಓಂ ನೀನೇ ಇರುವೆ ದೇವ ಆಸ್ಸ್ಸ್
ಬಾನಲ್ಲಿನಿನ್ನಿಂದಸೂರ್ಯೋದಯ...
ಈಶ್ವರ ನೀನೇ...ಆsss ಈಶ್ವರ ನೀನೇ ಶಾಶ್ವತ ನೀನೇ ಎಲ್ಲವೂ ನೀನೇ ಎಲ್ಲೆಡೆ ನೀನೇ ಸಂತೋಷ ಕೊಡುವಂತ ನಗೆಯಲ್ಲಿಯೂ ಕಂದಂಗೆ ತಾಯ್ಕೊಡುವ ಮುತ್ತಲ್ಲಿಯೂ ಹಿತವಾದ ಸಂಗೀತ ಸ್ವರದಲ್ಲಯೂ ಕವಿಯಾಡೊ ಸವಿಯಾದ ಮಾತಲ್ಲಿಯೂ ಕವಿಯಾಡೊ ಸವಿಯಾದ ಮಾತಲ್ಲಿಯೂ ಬೆಂಕಿ ಕಿಡಿಯಲ್ಲಿಯೂ, ನೀರ ಹನಿಯಲ್ಲಿಯೂ, ಕಡಲ , ಸಿಡಿವ ಸಿಡಿಲಲ್ಲಿಯೂ ಓಂ ಓಂ ಓಂ ಓಂ ಓಂ ಓಂ ನೀನೇ ಇರುವೆ ದೇವ ಆsss
ಇದು ಕನ್ನಡ ಭಾವ ಗೀತೆ, ಚಿತ್ರ ಗೀತೆ, ಭಕ್ತಿ ಗೀತೆ, ಕವನ, ಜಾನಪದ ಗೀತೆಗಳನ್ನು ಕ್ರೋಡೀಕರಿಸುವ ಒಂದು ಪ್ರಯತ್ನ. ನಿಮಗಿಷ್ಟವಾದುದನ್ನು "comments" ನಲ್ಲಿ ಬರೆಯಿರಿ. ನಂತರ ಅದನ್ನು ಸಂಗ್ರಹದಲ್ಲಿ ಹಾಕಲಾಗುವುದು. ಸಾದ್ಯವಾದರೆ ವಿವರಗಳಿದ್ದರೆ ಉತ್ತಮ.
ಏಷ್ಟೋ ಹಾಡುಗಳ/ಭಾವ ಗೀತೆಗಳ ಸಾಹಿತ್ಯ ಅಲ್ಪ ಸಲ್ಪ ನೆನಪಿತ್ತು. ವೀಡಿಯೋ ಜೊತೆ ಸಾಹಿತ್ಯ ಇದ್ರೆ ವಿಡಿಯೋ ನೋಡ್ತಾ ನಾವು ಹಾಡು ಹೇಳಬಹುದಲ್ಲಾ ಅಂತ ಒಮ್ಮೆ ಅನಿಸ್ತು. ಅದ್ಕೆ ಈ ಬ್ಲಾಗ್ ಶುರು ಮಾಡಿದೆ. ಇದರ ಹಿಂದೆ ಯಾವುದೇ ದುರುದ್ದೇಶ ಇಲ್ಲ.
ನನ್ನ ಹತ್ತಿರವಿದ್ದ ಕೆಲವು ಹಾಡುಗಳ ಪುಸ್ತಕದಿಂದ ಕೆಲವನ್ನು ಇಲ್ಲಿ ಹಾಕಿದ್ದರೆ, ಇನ್ನು ಕೆಲವು ಅಂತರಜಾಲದಲ್ಲಿ ತೆಗೆದುಕೊಂಡಿದ್ದು ಮತ್ತು ಇನ್ನು ಕೆಲವನ್ನು ವೀಡಿಯೋ ಕೇಳಿ ಬರೆದುಕೊಂಡಿದ್ದು. youtube ನಲ್ಲಿ ವಿಡಿಯೋ ಹುಡುಕಿ ಇಲ್ಲಿ ಹಾಕಿದ್ದೇನೆ. ಎಷ್ಟೋ ಹಾಡುಗಳು ನನಗೆ ಸಿಕ್ಕಿದ್ದು KannadaLyrics.com ನಲ್ಲಿ. ಈ ಎಲ್ಲರಿಗೂ ಧನ್ಯವಾದಗಳು. ಅಕಸ್ಮಾತ್ ಇಲ್ಲಿರುವ ಹಾಡುಗಳ/ವಿಡಿಯೋಗಳು ನಿಮ್ಮ ಕಾಪಿರೈಟ್ ಇದ್ದರೆ ದಯವಿಟ್ಟು ತಿಳಿಸಿ. ತಕ್ಷಣ ತೆಗೆಯುತ್ತೇನೆ
ಮಲೆನಾಡಿನಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ಬೆಳೆದು ಕೆಲವು ವರ್ಷಗಳಿಂದ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ. ಕಲೆ,
ಸಾಹಿತ್ಯ, ಸಂಗೀತ ಮತ್ತು ಸಂಘಟನೆಯಲ್ಲಿ ಆಸಕ್ತಿ.
ಸದ್ಯ ಅಮೇರಿಕಾದಲ್ಲಿ "Apple" ನಲ್ಲಿ ಕೆಲಸ