Sunday, August 3, 2008

ಮನಸ ಹೇಳ ಬಯಸಿದೆ... ನೂರೊಂದು

ಚಿತ್ರ: ಬೀಗರ ಪಂದ್ಯ
ರಚನೆ: ಆರ್.ಎನ್. ಜಯಗೋಪಾಲ್
ಸಂಗೀತ: ರಮೇಶ್ ನಾಯ್ಡು
ಹಿನ್ನಲೆ ಗಾಯನ: ಪಿ.ಸುಶೀಲ


ಮನಸ ಹೇಳ ಬಯಸಿದೆ... ನೂರೊಂದು
ತುಟಿಯ ಮೇಲೆ ಬಾರದಿದೆ... ಮಾತೊಂದು
ನೆನಪು ನೂರು ಎದೆಯಲಿ... ಅಗಲಿಕೆಯ ನೋವಲಿ
ವಿದಾಯ ಗೆಳೆಯನೇ... ವಿದಾಯ ಗೆಳತಿಯೇ
ವಿದಾಯ ಹೇಳ ಬಂದಿರುವೇ... ನಾನಿಂದು

ಹಗಲು ರಾತ್ರಿ... ಹಕ್ಕಿಯ ಹಾಗೇ... ಹಾರಿ ಮೆರೆದೆವು
ನಗು ಎನ್ನುವ ಅಲೆಯ ಮೇಲೆ ತೇಲಿ ನಲಿದೆವು
ಹೃದಯಗಳಾ... ಬೆಸುಗೆಯಾಗಿ
ಸ್ನೇಹ ಬಂಧ ಅಮರವಾಗಿ
ನಾಳೆ ಎನ್ನುವ ಚಿಂತೆ ಮರೆತು ಹಾಡಿ ಕುಣಿದೆವು
ಆ ಕಾಲ ಕಳೆದಿದೆ... ದೂರಾಗೋ ಸಮಯದೇ
ವಿದಾಯ ಹೇಳ ಬಂದಿರುವೇ... ನಾನಿಂದು

ಮನಸ ಹೇಳ ಬಯಸಿದೆ... ನೂರೊಂದು

ನೀನು ಬೇರೆ... ನಾನು ಬೇರೆ... ಹೇಗೋ ಬೆರೆತೆವು
ನಮ್ಮ ನಮ್ಮ ಒಪ್ಪು ತಪ್ಪು... ಎಲ್ಲಾ ಅರಿತೆವು
ಈ ದಿನವ ಮರೆಯಬೇಡ
ನಮ್ಮ ಸ್ನೇಹ ತೊರೆಯಬೇಡ
ದಾರಿ ಬೇರೆ ಆದರೇನು... ಪ್ರೀತಿ ಉಳಿಯಲಿ
ನಾನೆಲ್ಲೆ ಇದ್ದರೂ... ನೀ ಹೇಗೆ ಇದ್ದರೂ
ನೀ ನಾಳೆ ಕೇಳಬೇಡ.. ನನ್ನ ಯಾರೆಂದು

3 comments:

ಅಂತರ್ವಾಣಿ said...

ಅದ್ಭುತವಾದ ರಚನೆ..

Anonymous said...

Last but second line ನಲ್ಲಿ mistake ಇದೆ. “ನೀನೆಲ್ಲೇ ಇದ್ದರು ನೀ ಹೇಗೆ ಇದ್ದರು”

Anonymous said...

ಮದಲನೇ ಚರಣದಲ್ಲಿ “ವಿದಾಯ ಹೇಳೆ ಬಂದಿರುವೆ ನಾನ್ನೊಂದು”🙏