Wednesday, September 9, 2009

ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ

ಚಿತ್ರಃ ಪಡುವಾರ ಹಳ್ಳಿ ಪಾಂಡವರು
ಸಂಗೀತಃ ವಿಜಯಭಾಸ್ಕರ



ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ
ನನ್ನ ತಮ್ಮ ಮ೦ಕುತಿಮ್ಮ
ತೂಕಡಿಸಿ ತೂಕಡಿಸಿ ಬಿದ್ದರು
ನನ್ನಜ್ಜ ನಿನ್ನಜ್ಜ ಮುತ್ತಜ್ಜ

ಅಕ್ಷರದ ಸಕ್ಕರೆಯ ಕಹಿಯೆ೦ದು ತಿಳಿದು
ಪುಸ್ತಕವ ಕಸಕಿ೦ತ ಕಡೆಗಣಿಸಿ ಎಸೆದು
ಹಸ್ತವನು ತಲೆಗಿಟ್ಟು ಹಣೆ ಬರಹವೆ೦ದು
ತೂಕಡಿಸಿ ತೂಕಡಿಸಿ ಬಿದ್ದರು
ನಿನ್ನಜ್ಜ ನನ್ನಜ್ಜ ಮುತ್ತಜ್ಜ

ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ...

ಹಾಕಿಟ್ಟು ಹುಯಿಗ೦ಜಿ ತು೦ಡು ಕ೦ಬಳಿಗೆ
ತಾವಿಟ್ಟರೊ ಕೊರಳ ಜೀತದ ಕತ್ತರಿಗೆ
ದಿಕ್ಕೆಟ್ಟರೊ ನರಳಿ ಜೀವಶವದ೦ತೆ
ತೂಕಡಿಸಿ ತೂಕಡಿಸಿ ಬಿದ್ದರು
ನಿನ್ನಜ್ಜ ನನ್ನಜ್ಜ ಮುತ್ತಜ್ಜ

ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ...

ಬದುಕನ್ನು ಎದುರಿಸಲು ಕಣ್ತೆರೆದು ನೋಡ
ಬೆದರಿಕೆಗೆ ಕೈಕಟ್ಟಿ ಹಾಳಾಗಬೇಡ
ಕೊಚ್ಚೆಯ ಹುಳುವ೦ತೆ ಕುರುಡಾಗಬೇಡ
ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ
ನನ್ನ ತಮ್ಮ ಮ೦ಕುತಿಮ್ಮ
ತೂಕಡಿಸಿ ತೂಕಡಿಸಿ ಬಿದ್ದರು ನನ್ನಜ್ಜ ನಿನ್ನಜ್ಜ ಮುತ್ತಜ್ಜ

6 comments:

Ittigecement said...

ಯಜ್ನು...

ಇದು ನಂಗೆ ಬಹಳ ಇಷ್ಟದ ಹಾಡು...
ಹುಡುಕುತ್ತಿದ್ದೆ...
ತುಂಬಾ... ತುಂಬಾ ಥ್ಯಾಂಕ್ಸು...

Padyana Ramachandra said...

ವಿದೇಶದ ಕನ್ನಡಿಗರಿಗೆ ಅಂತರ್ಜಾಲದ ಮೂಲಕ ಹಳೆ ಕನ್ನಡ ಚಿತ್ರ ಗೀತೆಗಳ ಆನಂದವನ್ನು ಸವಿಯುವ ಅನುಕೂಲ ಮಾಡಿಕೊಟ್ಟ ಶ್ರೀ. ಯಜ್ಞೇಶ್ ಅವರಿಗೆ ವಂದನೆಗಳು.

-ಪ.ರಾಮಚಂದ್ರ
ರಾಸ್ ಲಫ್ಫಾನ್, ಕತಾರ್

ಅಂತರ್ವಾಣಿ said...

ಯಜ್ಞೇಶ್ ಅವರೆ,

ಒಳ್ಳೆ ಹಾಡನ್ನು ಪೋಸ್ಟ್ ಮಾಡಿದ್ದೀರ.
ಅನ್ಯಥಾ ಭಾವಿಸ ಬೇಡಿ,ಇದರ ಸಾಹಿತಿಗಳು ಡಿ.ವಿ.ಜಿ ಅನ್ನುವುದು ನನ್ನ ಅನುಮಾನ. "ಮಂಕುತಿಮ್ಮ" ಪದ ನೋಡು ಹಾಗೆ ಬರೆದರೋ ಅಥವಾ ನಿಮಗೆ ಇದು ಡಿವಿಜಿ ಅವರ ಸಾಹಿತ್ಯ ಎಂದು ಖಚಿತವಾದ ಮಾಹಿತಿಯಿದೆಯೋ?

Harisha - ಹರೀಶ said...

ಸುಮಾರು ಒಂದು ವಾರದ ಹಿಂದೆ ಎಫ್.ಎಂ ನಲ್ಲಿ ಈ ಹಾಡು ಬಂದಿತ್ತು.. ರಾಶಿ ಇಷ್ಟ ಆಗಿತ್ತು.. ಆದ್ರೆ ಯಾವ ಸಿನಿಮಾದ್ದು, ಎಂತೂ ಗೊತ್ತಿರಲ್ಲೆ.. ಇಲ್ಲಿ ಅದರ ಬರ್ದಿದ್ದಕ್ಕೆ ಧನ್ಯವಾದ.

ಯಜ್ಞೇಶ್ (yajnesh) said...

@ಪ್ರಕಾಶಣ್ಣ,
ನನಗೂ ಬಹಳ ಇಷ್ಟವಾದ ಹಾಡು. ಬಹಳಷ್ಟು ಸಲ ಈ ಹಾಡು ಕೇಳಿದ್ದೆ. ಅದರ ಸಾಹಿತ್ಯ ಸಿಕ್ಕಿರಲಿಲ್ಲ. ಈಗ ಎರಡೂ ಸಿಕ್ತು. ಮನಸ್ಸನ್ನು ಎಚರಿಸುವ ಸಾಹಿತ್ಯ. ಪ್ರತಿಕ್ರಿಯೆಗೆ ಧನ್ಯವಾದ.

@ರಾಮಚಂದ್ರ ಅವರೇ,
ನನಗೆ ಹಾಡುಗಳು ತುಂಬಾ ಇಷ್ಟ. ಆದರೆ ಸಾಹಿತ್ಯ ಸರಿಯಾಗಿ ಗೊತ್ತಿಲ್ಲದೇ ಮನಸ್ಸಿಗೆ ಬಂದಂತೆ ಮನೇಲಿ ಹೇಳ್ತಾಯಿರ್ತಿದ್ದೆ. ಕೊನೆಗೊಂದು ದಿನ ಹೊಳೆದಿದ್ದು ಬ್ಲಾಗ್. ಇಲ್ಲಿ ನನಗಿಷ್ಟವಾದ ಹಾಡಿನ ಸಾಹಿತ್ಯ ಬರಿಲಿಕ್ಕೆ ಪ್ರಾರಂಭಿಸಿದೆ. ಕೊನೆಗೆ ಯೂ-ಟ್ಯೂಬ್ ನಲ್ಲಿ ಸಿಕ್ಕ ಹಾಡಿನ ವೀಡಿಯೋ ಹಾಕೋಕೆ ಪ್ರಾರಂಭ ಮಾಡಿದೆ. ಇದು ಎಷ್ಟು ಜನರಿಗೆ ಆಪ್ತವಾಗತ್ತೊ ಗೊತ್ತಿಲ್ಲ. ನನಗಂತೂ ತುಂಬಾ ಇಷ್ಟವಾಗತ್ತೆ. ಮನಸ್ಸಿಗೆ ಬೇಸರವಾದಾಗ ಇಲ್ಲಿ ಬರ್ತೀನಿ ಹಾಡನ್ನು ಕೇಲ್ತಿನಿ ಸಾಹಿತ್ಯದ ಸವಿ ಉಂಡು ಮತ್ತೆ ಕೆಲ್ಸ :)ಪ್ರತಿಕ್ರಿಯೆಗೆ ಧನ್ಯವಾದ.

@ ಅಂತರ್ವಾಣಿಯವರೇ,
ನನಗೂ ಡಿ.ವಿ.ಜಿ ಹೌದೋ ಅಥವಾ ಅಲ್ಲವೋ ಅಂತ ಅನುಮಾನವಿತ್ತು. ಯಾರಾದರು ಸರಿಯಾದ ಮಾಹಿತಿ ನೀಡಬಹುದು ಅಂತ ಹಾಕಿದೆ. ಮಾಹಿತಿಗೆ ಧನ್ಯವಾದಗಳು. ಈಗ ಡಿ.ವಿ.ಜಿ ಹೆಸರು ತೆಗೆದಿದ್ದೇನೆ.

@ ಹರೀಶ್,

ನಂದೂ ಸೇಮ್ ಕೇಸ್. ದಿನಾ ಆಫೀಸಿನ ಬಸ್ಸಲ್ಲಿ ಬರುವಾಗ ನನ್ನ ಸಂಗಾತಿ ಎಫ್. ಎಮ್ ರೈನ್ಬೋ.. ಅದ್ರಲ್ಲಿ ಬರೋ ಹಳೆಯ ಹಾಡುಗಳು ನನಗೆ ಬಲು ಇಷ್ಟ. ಬಹಳಷ್ತು ದಿನ ಈ ಹಾಡನ್ನು ಕೇಳಿದ್ದೇನೆ. ಇತ್ತೀಚೆಗೆ ಕೇಳಿದ ತಕ್ಷಣ ಆಫೀಸಿಗೆ ಬಂದು ಅದಕ್ಕೆ ಹುಡುಕಿದೆ. ಸಿಕ್ಕಿತು. ನಿಮಗೂ ಈ ಹಾಡು ಇಷ್ಟವಾಗಿರಬಹುದು. ಇದರ ಸಾಹಿತ್ಯ ತುಂಬಾ ಚೆನ್ನಾಗಿದೆ. ಪ್ರತಿಕ್ರಿಯೆಗೆ ಧನ್ಯವಾದ

Anonymous said...

ಅದೇನ್ ಮಹಾ ಸಾಹಿತ್ಯ , ಇದನ್ನು ಓದಿ
ಎಲ್ಲೊ ಕೊಲೆಯಾಗಿದೆ ಎಂದು ಮಚ್ಚೊಂದು ಹೇಳುತಿದೆ
ಇಲ್ಲೇ ಕೊಲೆಯಾಗಿದೆ ಎಂದು ನಾಯೊಂದು ಬೊಗಳುತಿದೆ
ಇದ ನೋಡಿದ ಮೇಲೇನೆ ಕೊಲೆ ಶಂಕೆಯು ಮೂಡುತಿದೆ

ಹಿಂಗಿದ್ರೆನೆ ಫಿಲಂ ಓಡೋದು