Wednesday, March 3, 2010

ಮಧುಮಾಸ ಚಂದ್ರಮಾ ನೈದಿಲೆಗೆ ಸಂಭ್ರಮಾ

ಚಿತ್ರ: ವಿಜಯವಾಣಿ
ಗೀತರಚನೆ: ಚಿ.ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಹಿನ್ನಲೆ ಗಾಯನ:ಎಸ್.ಜಾನಕಿ ಮತ್ತು ವಾಣಿ ಜಯರಾಮ್


ಮಧುಮಾಸ ಚಂದ್ರಮಾ ನೈದಿಲೆಗೆ ಸಂಭ್ರಮಾ
ಒಲವಿನಾ ಲೋಕಕೇ ನೀ ತಂದೇ ಪೌರ್ಣಿಮಾ

ನಾ ಪ್ರೇಮದರಮನೆಯಲ್ಲೀ ವೈಭೋಗ ಸಿರಿಯನು ಕಂಡೇ
ನನ್ನೆದೆಯ ಸಿಂಹಾಸನದೀ ನೀ ರಾಜ್ಯವಾಳಿದೇ
ನೀ ನನ್ನ ಬಾಳಿನ ಪುಟದೇ ಅನುರಾಗ ಕವಿತೆಯ ಬರೆದೇ
ನಾನಾಗ ಭಾವದ ಹೊಳೆಯಾ ಅಲೆಯಲ್ಲಿ ತೇಲಿದೇ
ಅಲೆಯಲ್ಲಿ ತೇಲಿ ತೇಲಿದೇ

ಮಧುಮಾಸ ಚಂದ್ರಮಾ ನೈದಿಲೆಗೆ ಸಂಭ್ರಮಾ...

ರಸಪೂರ್ಣ ಮೈತ್ರಿಯ ಸಮಯಾ ನೂರಾಸೆ ಕಡಲಿದು ಹೃದಯಾ
ನೀ ನಡೆಸು ಅಂಬಿಗನಾಗಿ ಒಲವೆಂಬ ನೌಕೆಯಾ
ಬಂಗಾರ ತೇರನು ಏರೀ ನಾ ನಿನ್ನ ಸಂಗದಿ ಬೆರೆವೆ
ಸುಖವೆಂಬ ಉಯ್ಯಾಲೆಯಲೀ ಸಖ ನಿನ್ನಾ ತೂಗುವೇ
ಹಾಯಾಗಿ ತೂಗಿ ಕೂಗುವೇ

ಮಧುಮಾಸ ಚಂದ್ರಮಾ ನೈದಿಲೆಗೆ ಸಂಭ್ರಮಾ...

1 comment:

Shree said...

re very niceeeeeeeee song......
re....
ನೀ ನಡೆಸು ಅಂಬಿಗನಾಗಿ ಒಲವೆಂಬ ನೌಕೆಯಾ.....