Monday, March 1, 2010

ತಾರೆಯು ಬಾನಿಗೆ ತಾವರೆ ನೀರಿಗೆ...

ಚಿತ್ರ: ಬಿಳಿಗಿರಿಯ ಬನದಲ್ಲಿ
ಗೀತರಚನೆ: ಚಿ.ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಹಿನ್ನಲೆ ಗಾಯನ: ಎಸ್.ಪಿ, ಎಸ್.ಜಾನಕಿ




ತಾರೆಯು ಬಾನಿಗೆ ತಾವರೆ ನೀರಿಗೆ
ಹೂವೆಲ್ಲ ವನದೇವಿ ಮುಡಿಗೆ
ನೀ ನನ್ನ ಬಾಳಿಗೆ
ಮುತ್ತೆಲ್ಲ ಕಡಲಲ್ಲಿ ಬಂಗಾರ ನೆಲದಲ್ಲಿ ಇರುವಂತೆ
ನೀ ನನ್ನಲ್ಲಿ, ಕಣ್ಣಲ್ಲಿ, ಮನದಲ್ಲಿ

ತಾರೆಯು ಬಾನಿಗೆ ತಾವರೆ ನೀರಿಗೆ...

ಸೂರ್ಯ ಬಾನಲಿ ಬೆಳಕು ಭೂಮಿಯಲ್ಲಿ
ಹೂಗಳು ಲತೆಯಲಿ ನೀನೆಂದು ನನ್ನಲಿ
ಮೋಡ ಬಾನಲಿ ಮಳೆಯು ಭೂಮಿಯಲ್ಲಿ
ದುಂಬಿಯು ಹೂವಲಿ ನಾನೆಂದು ನಿನ್ನಲಿ, ನಾನೆಂದೂ ನಿನ್ನಲಿ
ತಾಳಿಯು ಕೊರಳಿಗೆ ಉಂಗುರ ಬೆರಳಿಗೆ
ಹೂದಂಡೆ ಈ ಹೆಣ್ಣ ಮುಡಿಗೆ
ನೀ ನನ್ನ ಬಾಳಿಗೆ
ಮುತ್ತೆಲ್ಲ ಕಡಲಲ್ಲಿ ಬಂಗಾರ ನೆಲದಲ್ಲಿ ಇರುವಂತೆ
ನೀ ನನ್ನಲ್ಲಿ, ಕಣ್ಣಲ್ಲಿ, ಮನದಲ್ಲಿ

ತಾರೆಯು ಬಾನಿಗೆ ತಾವರೆ ನೀರಿಗೆ...

ನಿನ್ನಾ ಕಾಣದಾ ದಿನವೂ ವರುಷದಂತೆ
ನಿನ್ನನು ಸೇರಲು ಯುಗವೊಂದು ನಿಮಿಷದಂತೆ
ನಿನ್ನಾ ನೋಡಲು ಬಯಕೆ ಹೃದಯದಲ್ಲಿ
ನಾಚುತ ಕರಗಿದೆ ನನ್ನಾಸೆ ನಿನ್ನಲಿ, ನನ್ನಾಸೆ ನಿನ್ನಲಿ
ತಾಳಿಯು ಕೊರಳಿಗೆ ಉಂಗುರ ಬೆರಳಿಗೆ
ಹೂದಂಡೆ ಈ ಹೆಣ್ಣ ಮುಡಿಗೆ
ನೀ ನನ್ನ ಬಾಳಿಗೆ
ಮುತ್ತೆಲ್ಲ ಕಡಲಲ್ಲಿ ಬಂಗಾರ ನೆಲದಲ್ಲಿ ಇರುವಂತೆ
ನೀ ನನ್ನಲ್ಲಿ, ಕಣ್ಣಲ್ಲಿ, ಮನದಲ್ಲಿ

ತಾರೆಯು ಬಾನಿಗೆ ತಾವರೆ ನೀರಿಗೆ...

Saturday, February 27, 2010

ಸುಖದಾ ಸ್ವಪ್ನಗಾನ ಎದೆಯಾ ಆಸೆ ತಾನ

ಚಿತ್ರ: ಮರೆಯದ ಹಾಡು
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ : ಜಿ. ಕೆ. ವೆಂಕಟೇಶ್
ಗಾಯನ : ಎಸ್.ಜಾನಕಿ


ಸುಖದಾ ಸ್ವಪ್ನಗಾನ ಎದೆಯಾ ಆಸೆ ತಾನ
ಒಲವಾ ಭಾವವೀಣಾ
ನೀ ಮಿಡಿಯೆ ನಾ ನುಡಿಯೆ
ಅದುವೆ ಜೀವನ..

ಸ್ವರವೇಳು ಕಲೆತ ರಾಗ ಸ೦ಪೂರ್ಣ ಜೀವರಾಗ
ಉಸಿರೆರಡು ಬೆರೆತ ವೇಗ ಅನುರಾಗ ಭಾವಯೋಗ
ಜನುಮ ಜನುಮದಾ ಬ೦ಧಾ ಅನುಬ೦ಧಾ ನಮ್ಮದೂ
ತಪಸಿನಾ ಫಲವಿದೂ ದೈವದಾ ವರವಿದೂ
ಆ..ಆ..

ಸುಖದಾ ಸ್ವಪ್ನಗಾನ ಎದೆಯಾ ಆಸೆ ತಾನ

ಶೃತಿಲಯದ ಮಿಲನದಲ್ಲೇ ದೈವೀಕನಾದನಾದ ಲೀಲೆ
ಸತಿಪತಿಯ ಒಲವಿನಲ್ಲೇ ಸ೦ಸಾರ ನೌಕೆ ತೇಲೆ
ನೆನಪಿನ ತೋಟದ ಮಲ್ಲೇ ಹೂ ಮಾಲೆ
ಎ೦ದಿಗೂ ಬಾಡದಾ ಹೂವಿದು ಮುಗಿಯದಾ ಹಾಡಿದು
ಆ..ಆ..

ಸುಖದಾ ಸ್ವಪ್ನಗಾನ ಎದೆಯಾ ಆಸೆ ತಾನ

ಸವಿ ಮುರಳಿ ಕರೆದ ವೇಳೆ ಆ ರಾಧೆ ಓಡಿದ೦ತೆ
ಮಾಧವನ ನೆನಪಿನಲ್ಲೇ ಆ ಮೀರಾ ಹಾಡಿದ೦ತೆ
ನಿನ್ನೊಲವಿನಲ್ಲೆ ಮಿ೦ದೂ ನಾನಿ೦ದೂ
ಹಾಡುವೇ ನನ್ನನೇ ಮರೆಯುವೇ ನಿಮ್ಮಲೇ ಬೆರೆಯುವೆ
ಆ..ಆ..

ಸುಖದಾ ಸ್ವಪ್ನಗಾನ ಎದೆಯಾ ಆಸೆ ತಾನ

Thursday, November 19, 2009

ಇದು ರಾಮ ಮಂದಿರ

ಚಿತ್ರ: ರವಿಚಂದ್ರ
ಗೀತರಚನೆ: ಚಿ.ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
ಹಿನ್ನಲೆ ಗಾಯನ: ಡಾ. ರಾಜ್ ಕುಮಾರ್



ಇದು ರಾಮ ಮಂದಿರ
ನೀ ರಾಮ ಚಂದಿರ
ಜೊತೆಯಾಗಿ ನೀ ಇರಲು ಬಾಳ ಸಹಜ ಸುಂದರ

ಇದು ರಾಮ ಮಂದಿರ...

ಸ್ವಾಮಿ ನಿನ್ನ ಕಣ್‌ಗಳಲಿ,
ಚಂದ್ರೋದಯ ಕಾಣುವೆ
ಸ್ವಾಮಿ ನಿನ್ನ ನಗುವಲಿ,
ಅರುಣೋದಯ ನೋಡುವೆ
ಸರಸದಲ್ಲಿ ಚತುರ ಚತುರ,
ನಿನ್ನ ಸ್ನೇಹ ಅಮರ
ನಿನ್ನ ಬಾಳ ಕಮಲದಲಿ,
ನಾನು ನಲಿವ ಭ್ರಮರ

ಇದು ರಾಮ ಮಂದಿರ...

ನನ್ನ ಸೀತೆ ಇರುವ ತಾಣ,
ಕ್ಷೀರ ಸಾಗರದಂತೆ
ನನ್ನ ಸೀತೆ ಬೆರೆತ ಮನವು,
ಹೊನ್ನ ಹೂವಿನಂತೆ
ನುಡಿವ ಮಾತು ಮಧುರ ಮಧುರ,
ನುಡಿವ ಮಾತು ಮಧುರ ಮಧುರ
ನಿನ್ನ ಪ್ರೇಮ ಅಮರ
ನೀನು ಹೃದಯ ತುಂಬಿರಲು,
ಬಾಳು ಪ್ರೇಮ ಮಂದಿರ

ಇದು ರಾಮ ಮಂದಿರ, ಆನಂದ ಸಾಗರ
ಜೊತೆಯಾಗಿ ನೀ ಇರಲು, ಬಾಳು ಸಹಜ ಸುಂದರ

Monday, September 28, 2009

ಎಲ್ಲೋ ಮಳೆಯಾಗಿದೆಯೆಂದು ತಂಗಾಳಿಯು ಹೇಳುತಿದೆ

ಚಿತ್ರಃ ಮನಸಾರೆ
ಗೀತರಚನೆಃ ಜಯಂತ್ ಕಾಯ್ಕಿಣಿ
ಸಂಗೀತಃ ಮನೋಮೂರ್ತಿ
ಹಿನ್ನಲೆ ಗಾಯನಃ ಸೋನು ನಿಗಮ್



ಎಲ್ಲೋ ಮಳೆಯಾಗಿದೆಯೆಂದು ತಂಗಾಳಿಯು ಹೇಳುತಿದೆ
ಇಲ್ಲೇ ಒಲವಾಗಿದೆ ಎಂದೂ ಕನಸೊಂದು ಬೀಳುತಿದೆ
ವ್ಯಾಮೋಹವ ಕೇವಲ ಮಾತಿನಲೀ ಹೇಳಲು ಬರಬಹುದೆ
ನಿನ ನೋಡಿದ ಮೇಲೆಯು ಪ್ರೀತಿಯಲಿ ಬೀಳದೆ ಇರಬಹುದೆ


ಕಣ್ಣಲಿ ಮೂಡಿದೆ ಹನಿಗವನ ಕಾಯಿಸಿ ನೀ ಕಾಡಿದರೆ
ನೂತನ ಬಾವದ ಆಗಮನ ನೀ ಬಿಡದೇ ನೋಡಿದರೆ
ನಿನ ಧ್ಯಾನದಿ ನಿನ್ನಯ ತೋಳಿನಲಿ ಹೀಗೆಯೆ ಇರಬಹುದೆ
ಈ ಧ್ಯಾನವ ಕಂಡರೆ ದೇವರಿಗೂ ಕೋಪವು ಬರಬಹುದೆ

ಎಲ್ಲೋ ಮಳೆಯಾಗಿದೆಯೆಂದು ತಂಗಾಳಿಯು ಹೇಳುತಿದೆ...

ನೆನಪಿನ ಹೂಗಳ ಬಿಸಣಿಗೆ ನೀ ಬರುವ ದಾರಿಯಲಿ
ಓಡಿದೆ ದೂರಕೆ ಬೇಸರಿಕೆ ನೀ ಇರುವ ಊರಿನಲಿ
ಅನುಮಾನವೆ ಇಲ್ಲವೆ ಕನಸಿನಲಿ ಮೆಲ್ಲಗೆ ಬರಬಹುದೆ
ಅಲೆಮಾರಿಯ ಹೃದಯದ ಡೇರೆಯಲಿ ನೀನು ಇರಬಹುದೆ

ಎಲ್ಲೋ ಮಳೆಯಾಗಿದೆಯೆಂದು ತಂಗಾಳಿಯು ಹೇಳುತಿದೆ...

Wednesday, September 23, 2009

ಕಣಕಣದೆ ಶಾರದೆ, ಕಲೆತಿಹಳು ಕಾಣದೆ

ಚಿತ್ರಃ ಆಪ್ತಮಿತ್ರ
ಗೀತರಚನೆಃ ಕವಿರಾಜ್
ಸಂಗೀತಃ ಗುರುಕಿರಣ್
ಹಿನ್ನಲೆ ಗಾಯನಃ ಮಧು ಬಾಲಕೃಷ್ಣ



ಕಣಕಣದೆ ಶಾರದೆ, ಕಲೆತಿಹಳು ಕಾಣದೆ
ವನವನದಲ್ಲೂ ಕುಹುಕುಹು ಗಾನ
ಝರಿಝರಿಯಲ್ಲೂ ಜುಳುಜುಳು ಧ್ಯಾನ
ವಿಧವಿಧದಾ ನಾದ ಅವಳು ನುಡಿಸುತಿಹಳು

ಜನನಕು ಹಾಡು ಮರಣಕು ಹಾಡು ಯಾರೀ ಛಲಮಗಳು
ಪ್ರತಿ ಎದೆಯಾಳದಲು ಲಯ ತಾಳ ಗೀತೆ ಬದುಕಿನಲು
ಕೊರಳಿನಲಿ ಕೊಳಲಿನಲಿ ಚೆಲುವಿನಲಿ ಒಲವಿನಲಿ
ಒಲಿದು ಉಲಿದು ನಲಿದುಹರಿದು ಬರುವುದು ಶೃತಿಲಯವು

ಕಣಕಣದೆ ಶಾರದೆ, ಕಲೆತಿಹಳು ಕಾಣದೆ...

ಕುಲ ನೆಲದಾಚೆ ಅರಿಯುವ ಭಾಷೆ ಒಂದೇ ಜಗದೊಳಗೆ
ಅವರಿವರಿಲ್ಲ ಸರಿಸಮರೆಲ್ಲ ಸಪ್ತ ಸ್ವರಗಳಿಗೆ
ನಿಪಮಪನಿ ಸನಿಪನಿಸ ಗಸನಿಸಗ
ಮಪಮಪಗ ನಿಮಪಮ ಸನಿಪನಿ ಗಸನಿಸ

ಕಣಕಣದೆ ಶಾರದೆ, ಕಲೆತಿಹಳು ಕಾಣದೆ...

Wednesday, September 9, 2009

ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ

ಚಿತ್ರಃ ಪಡುವಾರ ಹಳ್ಳಿ ಪಾಂಡವರು
ಸಂಗೀತಃ ವಿಜಯಭಾಸ್ಕರ



ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ
ನನ್ನ ತಮ್ಮ ಮ೦ಕುತಿಮ್ಮ
ತೂಕಡಿಸಿ ತೂಕಡಿಸಿ ಬಿದ್ದರು
ನನ್ನಜ್ಜ ನಿನ್ನಜ್ಜ ಮುತ್ತಜ್ಜ

ಅಕ್ಷರದ ಸಕ್ಕರೆಯ ಕಹಿಯೆ೦ದು ತಿಳಿದು
ಪುಸ್ತಕವ ಕಸಕಿ೦ತ ಕಡೆಗಣಿಸಿ ಎಸೆದು
ಹಸ್ತವನು ತಲೆಗಿಟ್ಟು ಹಣೆ ಬರಹವೆ೦ದು
ತೂಕಡಿಸಿ ತೂಕಡಿಸಿ ಬಿದ್ದರು
ನಿನ್ನಜ್ಜ ನನ್ನಜ್ಜ ಮುತ್ತಜ್ಜ

ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ...

ಹಾಕಿಟ್ಟು ಹುಯಿಗ೦ಜಿ ತು೦ಡು ಕ೦ಬಳಿಗೆ
ತಾವಿಟ್ಟರೊ ಕೊರಳ ಜೀತದ ಕತ್ತರಿಗೆ
ದಿಕ್ಕೆಟ್ಟರೊ ನರಳಿ ಜೀವಶವದ೦ತೆ
ತೂಕಡಿಸಿ ತೂಕಡಿಸಿ ಬಿದ್ದರು
ನಿನ್ನಜ್ಜ ನನ್ನಜ್ಜ ಮುತ್ತಜ್ಜ

ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ...

ಬದುಕನ್ನು ಎದುರಿಸಲು ಕಣ್ತೆರೆದು ನೋಡ
ಬೆದರಿಕೆಗೆ ಕೈಕಟ್ಟಿ ಹಾಳಾಗಬೇಡ
ಕೊಚ್ಚೆಯ ಹುಳುವ೦ತೆ ಕುರುಡಾಗಬೇಡ
ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ
ನನ್ನ ತಮ್ಮ ಮ೦ಕುತಿಮ್ಮ
ತೂಕಡಿಸಿ ತೂಕಡಿಸಿ ಬಿದ್ದರು ನನ್ನಜ್ಜ ನಿನ್ನಜ್ಜ ಮುತ್ತಜ್ಜ

Wednesday, February 4, 2009

ಶಿವಪ್ಪ ಕಾಯೋ ತಂದೆ...

ಚಿತ್ರ: ಬೇಡರ ಕಣ್ಣಪ್ಪ
ರಚನೆ: ಎಸ್. ನಂಜಪ್ಪ
ಸಂಗೀತ: ಆರ್. ಸುದರ್ಶನಂ
ಹಿನ್ನಲೆ ಗಾಯಕರು : ಶ್ರೀ ಸಿ ಎಸ್ ಜಯರಾಮನ್



ಶರಣು ಶಂಕರ ಶಂಭೋ
ಓಂಕಾರನಾದ ರೂಪಾ
ಮೊರೆಯ ನೀ ಆಲಿಸೀ
ಪಾಲಿಸೋ ಸರ್ವೇಶಾ

ಶಿವಪ್ಪ ಕಾಯೋ ತಂದೆ
ಮೂರುಲೋಕ ಸ್ವಾಮಿ ದೇವಾ
ಹಸಿವೆಯನ್ನು ತಾಳಲಾರೆ
ಕಾಪಾಡೆಯ ಹರನೇ ಕಾಪಾಡೆಯಾ

ಭಕ್ತಿಯಂತೆ ಪೂಜೆಯಂತೆ
ಒಂದೂ ಅರಿಯೆ ನಾ
ಪಾಪವಂತೆ ಪುಣ್ಯವಂತೆ
ಕಾಣೆನಯ್ಯ ನಾ.. ಹರನೇ

ಶಿವಪ್ಪ ಕಾಯೋ ತಂದೆ...


ಶುದ್ಧನಾಗಿ ಪೂಜೆಗೈವೆ
ಒಲಿವೆಯಂತೆ ನೀ
ಶುದ್ಧವೋ ಅಶುದ್ಧವೋ
ನಾ ಕಾಣೆ ದೇವನೇ

ಶಿವಪ್ಪ ಕಾಯೋ ತಂದೆ...

ನಾದವಂತೆ ವೇದವಂತೆ
ಒಂದು ತಿಳಿಯೇ ನಾ
ಬೆಂದ ಜೀವ ನೊಂದು
ಕೂಗೆ ಬಂದು ನೋಡೆಯಾ ಹರನೇ

ಶಿವಪ್ಪ ಕಾಯೋ ತಂದೆ...

ಏಕಚಿತ್ತದಿ ನಂಬಿದವರ
ನೀ ಸಾಕಿ ಸಲಹುವೆ ಎಂತಪ್ಪಾ
ಶೋಕವ ಹರಿಸುವ
ದೇವ ನೀನಾದರೆ
ಬೇಟೆಯ ತೋರೋ ಎನ್ನಪ್ಪಾ
ಲೋಕವನಾಳುವ ನೀನಪ್ಪಾ

ಶಿವಪ್ಪ ಕಾಯೋ ತಂದೆ...