Tuesday, July 1, 2008

ಕೊಳನನೂದಿ ಮೊಹಿಸುವುದನು ಕಲಿಸು ಎನಗೆ ಚೆನ್ನ

ಕೊಳನನೂದಿ ಮೊಹಿಸುವುದನು ಕಲಿಸು ಎನಗೆ ಚೆನ್ನ
ತಳಮಳಿಪುದು ಎನ್ನ ಎದೆಯು ಕೊಳಲಗಾನದಿಂದ ……. ಕೊಳಲಗಾನದಿಂದ

ನಲಿಯುತಿಹುದು ಉದಯಗಗನ ಅರುಣರಾಗದಿಂದ
ಕೊಳದಲೆಗಳು ಕುಣಿಯುತಿಹವು ಭಾವದೊಲುಮೆಯಿಂದ

ತನಿತಚೂತದಡಿಯಮೊದಲ ನುಡಿಯಕಲಿಸು ಚೆನ್ನ
ಕೊಳಲಕಲಿಸು ಬೇಗ ಎನಗೆ ಮೊಹಿಸುವೆನು ನಿನ್ನಾ …. ಮೊಹಿಸುವೇನು ನಿನ್ನ

ಇದನ್ನು ಕಳಿಸಿದ ಸೌಮ್ಯ ಅವರಿಗೆ ಧನ್ಯವಾದಗಳು. ಇದರ ಸಾಹಿತ್ಯ, ಸಂಗೀತ, ಹಿನ್ನಲೆಗಾಯಕರ ಮಾಹಿತಿಯಿದ್ದರೆ ಕಳಿಸಿಕೊಡಿ

4 comments:

ಭಾವಜೀವಿ... said...

ಯಜ್ಞೇಶ್‌
ಒಳ್ಳೆಯ ಪ್ರಯತ್ನ!!
ಇದನ್ನು ಬರೆದ ಕವಿಯ ಹೆಸರೂ ಹಾಕಿದ್ದರೆ ಇನ್ನೂ ಚೆನ್ನ...!

ಶಾಂತಲಾ ಭಂಡಿ (ಸನ್ನಿಧಿ) said...

ಯಜ್ಞೇಶ್ ಅವರೆ...
ತುಂಬ ಸುಂದರವಾದ ಗೀತೆ. ನಮ್ಮೊಡನೆ ಹಂಚಿಕೊಡಿದ್ದಕ್ಕೆ ಧನ್ಯವಾದಗಳು.

ಯಜ್ಞೇಶ್ (yajnesh) said...

ಧನ್ಯವಾದಗಳು ಶಾಂತಲ ಅವರೇ,

ಸಂಗ್ರಹಕ್ಕೆ ಆಗ್ಗಾಗ್ಗೆ ಬೇಟಿ ನೀಡುತ್ತಿರಿ

lakshmikanth said...

hadu channagide Aadre adannu keluvudu hege