Thursday, July 24, 2008

ಅಮ್ಮ…ನಿನ್ನ ಎದೆಯಾಳದಲ್ಲಿ

ರಚನೆ: ಬಿ.ಆರ್.ಲಕ್ಷ್ಮಣರಾವ್

ಅಮ್ಮ…ನಿನ್ನ ಎದೆಯಾಳದಲ್ಲಿ
ಗಾಳಕ್ಕೆ ಸಿಕ್ಕ ಮೀನು
ಮಿಡುಕಾಡುತಿರುವೆ ನಾನು
ಕಡಿಯಲೊಲ್ಲೆ ಈ ಕರುಳ ಬಳ್ಳಿ
ಒಲವೂಡುತಿರುವ ತಾಯೆ
ಬಿಡದ ಭುವಿಯ ಮಾಯೆ

ನಿನ್ನ ರಕ್ಷೆ ಗೂಡಲ್ಲಿ ಬೆಚ್ಚಗೆ
ಅಡಗಲಿ ಎಷ್ಟು ದಿನ ?
ದೂಡು ಹೊರಗೆ ನನ್ನ
ಓಟ ಕಲಿವೆ, ಒಳನೋಟ ಕಲಿವೆ, ನಾ
ಕಲಿವೆ ಊರ್ಧ್ವ ಗಮನ
ಓ ಅಗಾಧ ಗಗನ !

ಅಮ್ಮ…ನಿನ್ನ ಎದೆಯಾಳದಲ್ಲಿ...

ಮೇಲೆ ಹಾರಿ ನಿನ್ನ ಸೆಳೆತ ಮೀರಿ
ನಿರ್ಭಾರ ಸ್ಥಿತಿಗೆ ತಲುಪಿ
ಬ್ರಹ್ಮಾಂಡವನ್ನೇ ಬೆದಕಿ
ಇಂಧನ ತೀರಲು
ಬಂದೇ ಬರುವೆನು
ಮತ್ತೆ ನಿನ್ನ ತೊಡೆಗೆ
ಮೂರ್ತ ಪ್ರೇಮದೆಡೆಗೆ !

ಅಮ್ಮ…ನಿನ್ನ ಎದೆಯಾಳದಲ್ಲಿ...

Saturday, July 19, 2008

ಒಮ್ಮೆ ನಿನ್ನನ್ನೂ ಕಣ್ತುಂಬಾ ಕಾಣುವಾಸೆ ಎಲ್ಲಿರುವೇ

ಚಿತ್ರ:ಗಾಳಿ ಮಾತು
ರಚನೆ: ಚಿ.ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಹಿನ್ನಲೆ ಗಾಯನ: ಎಸ್.ಜಾನಕಿ




ಒಮ್ಮೆ ನಿನ್ನನ್ನೂ ಕಣ್ತುಂಬಾ ಕಾಣುವಾಸೆ ಎಲ್ಲಿರುವೇ
ಭುವಿಯಲ್ಲೋ ಬಾನಲ್ಲೋ ಇನ್ನೆಲ್ಲೋ ನಾ ಕಾಣೇ..

ಅರಳಿರುವ ಹೂವಿನಲ್ಲೀ ನಿನ್ನ ನೋಟವಾ
ಹರಿಯುತಿಹ ನೀರಿನಲ್ಲೀ ನಿನ್ನ ಓಟವಾ
ಇಂಪಾದ ಗಾನದಲ್ಲೀ ನಿನ್ನ ಮೊಗದ ಭಾವವಾ
ಮಳೆ ಬಿಲ್ಲ ಬಣ್ಣದಲ್ಲಿ ನಿನ್ನ ಅಂದವಾ
ನವಿಲಾಡೊ ನಾಟ್ಯದಲ್ಲೀ ಚಂದವಾ
ತಂಪಾದ ಗಾಳಿಯಲ್ಲೀ ನೀನಾಡೋ ಆಟವಾ
ದಿನವೆಲ್ಲಾ ನಾ ಕಂಡೇ ನಾ ಕಂಡೂ ಬೆರೆಗಾದೆ...

ಒಮ್ಮೆ ನಿನ್ನನ್ನೂ..

ಮಿನುಗುತಿಹ ತಾರೆಯೆಲ್ಲಾ ನಿನ್ನ ಕಂಗಳೋ
ನಗುತಿರಲು ಭೂಮಿಗೆಲ್ಲಾ ಬೆಳದಿಂಗಳೋ
ಆ ಬೆಳ್ಳೀ ಮೋಡವೆಲ್ಲಾ ನೀ ಬರೆದ ಬೊಂಬೆಗಳೋ
ಮೂಡಣದ ಅಂಚಿನಿಂದಾ ನಿನ್ನ ಪಯಣವೋ
ಮುಂಜಾನೆ ಕಾಣೋ ಕೆಂಪು ಚಂದುಟಿಯ ಬಣ್ಣವೋ
ಆಗಸದ ನೀಲಿಯೆಲ್ಲಾ ನೀ ನಡೆವ ಹಾದಿಯೋ
ನಿನ್ನಂತೇ ಯಾರಿಲ್ಲಾ ನಿನ್ನಲ್ಲೇ ಮನಸೆಲ್ಲಾ...

ಒಮ್ಮೆ ನಿನ್ನನ್ನೂ..

Wednesday, July 9, 2008

ಮುಚ್ಚುಮರೆ ಇಲ್ಲದೆಯೇ

ರಚನೆ: ಕುವೆಂಪು
ಸಂಗೀತ: ಮೈಸೂರು ಅನಂತಸ್ವಾಮಿ
ಹಿನ್ನಲೆ ಗಾಯನ: ಪುಷ್ಪ ಜಗದೀಶ್


ಮುಚ್ಚುಮರೆ ಇಲ್ಲದೆಯೇ
ನಿನ್ನ ಮುಂದೆಲ್ಲವನು
ಬಿಚ್ಚಿಡುವೆ ಓ ಗುರುವೇ, ಅಂತರಾತ್ಮ

ಪಾಪವಿದೆ ಪುಣ್ಯವಿದೆ
ನರಕವಿದೆ ನಾಕವಿದೆ
ಸ್ವೀಕರಿಸು ಓ ಗುರುವೇ, ಅಂತರಾತ್ಮ

ಮುಚ್ಚುಮರೆ ಇಲ್ಲದೆಯೇ...

ರವಿಗೆ ಕಾಂತಿಯನೀವೆ ನಿನ್ನ ಕಣ್ಣೀಕ್ಷಿಸಲು
ಪಾಪ ತಾನುಳಿಯುವುದೇ ಪಾಪವಾಗಿ
ಗಂಗೆ ತಾನುದ್ಭವಿಪ ನಿನ್ನಡಿಯ ಸೋಂಕಿಂಗೆ
ನರಕ ತಾನುಳಿಯುವುದೇ ನರಕವಾಗಿ

ಮುಚ್ಚುಮರೆ ಇಲ್ಲದೆಯೇ...

ಸಾಂತರೀತಿಯೊಳೆಮ್ಮಿ ಕದಡಿರುವುದೆನ್ನಾತ್ಮ
ನಾಂತರೀತಿಯು ಅದೆಂತೋ, ಓ ಅನಂತಾ..
ನನ್ನ ರೀತಿಯ ಕುರುಡಿಂದೆನ್ನ ರಕ್ಷಿಸೈ
ನಿನ್ನ ನೀತಿಯ ಬೆಳಗಿನ ಅನಂತಕೊಯ್

ಮುಚ್ಚುಮರೆ ಇಲ್ಲದೆಯೇ...

Tuesday, July 8, 2008

ಸವಿನೆನಪುಗಳು ಬೇಕು ಸವಿಯಲೀ ಬದುಕು

ಚಿತ್ರ: ಅಪರಿಚಿತ
ಸಂಗೀತ: ಎಲ್. ವೈದ್ಯನಾಥನ್
ಹಿನ್ನಲೆ ಗಾಯನ: ಎಸ್. ಜಾನಕಿ



ಸವಿನೆನಪುಗಳು ಬೇಕು ಸವಿಯಲೀ ಬದುಕು
ಕಹಿನೆನಪು ಸಾಕೊಂದು ಮಾಸಲೀ ಬದುಕು
ಬೆಂಬಿಡದ ಆ ನೆನಪು ಮರುಕಳಿಸಿ ದಿನವೆಲ್ಲ
ಕಾಡುತಿದೆ ಮನವ

ಸವಿನೆನಪುಗಳು ಬೇಕು ಸವಿಯಲೀ ಬದುಕು...

ಪ್ರಿಯತಮನ ಒಲವಿಂದ ಕನಸುಗಳು ಮೂಡಿ
ಇನಿಯನ ಎದೆಗೊರಗಿ ಆಸರೆಯ ಬೇಡಿ
ಸರಸ ಸವಿಯ ಬಯಸಿದೆನು ನಾನು
ವಿರಹ ವಿಫಲ ಫಲಿಸಿದವು ನನಗೆ
ಇನಿಯನ ಎದೆ ಬಡಿತ ಗುಂಡಿನ ದನಿಗಿರಿದು
ಮಾಸುತಿದೆ ಕನಸು

ಸವಿನೆನಪುಗಳು ಬೇಕು ಸವಿಯಲೀ ಬದುಕು...

ಬೀಸುತಿಹ ತಂಗಾಳಿ ಬಿಸಿಯಾಗಿ ಕಾಡಿ
ನೆನಪಿನ ಭೀತಿಯಲಿ ನಾ ಬಂದಿಯಾಗಿ
ಮನಸು ಹೃದಯ ನೊಂದು ನೋವಾಗಿದೆ
ಒಲವು ನಲಿವು ಮೂಡಿ ಮಸುಕಾಗಿ
ಅರಳುವ ಹೂವೊಂದು ಕಮರುವ ಭಯದಲೀ
ಸಾಗುತಿದೆ ಬದುಕು

ಸವಿನೆನಪುಗಳು ಬೇಕು ಸವಿಯಲೀ ಬದುಕು...

Saturday, July 5, 2008

ನಿನ್ನಾ ಪೂಜೆಗೆ ಬಂದೆ ಮಹದೇಶ್ವರಾ

ಚಿತ್ರ: ಸೈಕೊ
ಸಂಗೀತ: ರಘು ದೀಕ್ಷಿತ್
ರಚನೆ: ದೇವದತ್ತ, ರಘು ದೀಕ್ಷಿತ್
ಹಿನ್ನಲೆ ಗಾಯನ: ರಘು ದೀಕ್ಷಿತ್


ಹೇ! ನಿನ್ನಾ ಪೂಜೆಗೆ ಬಂದೆ ಮಹದೇಶ್ವರಾ
ಎನ್ನ ಕರುಣದಿ ಕಾಯೊ ಮಹದೇಶ್ವರಾ
ಹೇ ಶಂಕರ ಪ್ರೇಮಾಂಕುರ ಆದನಂತರ ನೆಮ್ಮದಿ ದೂರ
ಯಾಕೀತರ ಹೇಳು ಪ್ರೇಮಾ ಅಂಬೋದೆ ಹುನ್ನಾರ
ಇದರಿಂದ ಶಾಂತಿ ಸಂಹಾರ

ಒಮ್ಮೆ ಚಂದದಿ ನೋಡೊ ಮಹದೇಶ್ವರಾ...

ಈ ಪ್ರೇಮವು ದೇವರ ಹಾಗೆ
ನನ್ನೋಳ ಮನಸು ಪರಿಶುದ್ಧ ಗಂಗೆ
ಹುಸಿ ಮಾದದೆ ನಾನಿಟ್ಟ ನಂಬಿಕೆ
ಹುಸಿರಾಗುತ್ತಾಳೆ ಈ ನನ್ನ ಜೀವಕೆ
ಈ ಪ್ರೇಮದಿಂದ ವ್ಯಸನವು ಥರ ಥರ
ಬದುಕಿನ ಗತಿ ಬದಲಿಸೋ ಗಡಿಯಾರ

ನಿನ್ನಾ ಪೂಜೆಗೆ ಬಂದೆ ಮಹದೇಶ್ವರಾ...

ಓ ಪ್ರೇಮವೇ ನಿನಗೆ ಪ್ರಣಾಮ
ನಿನ್ನಿಂದಲೆ ಈ ಲೋಕ ಕ್ಷೇಮ
ಓಂಕಾರ ರೂಪಿ ಈ ನನ್ನ ಪ್ರೇಮ
ಸಾವಿಲ್ಲದ ಚೈತನ್ಯ ಧಾಮ
ಈ ಮುಗ್ಧ ಹೃದಯದಿ ಚಿಗುರುದೆ ಸಡಗರ
ಗುನುಗುನಿಸಲಿ ಸುಮಧುರ ಝೇಂಕಾರ

ನಿನ್ನಾ ಪೂಜೆಗೆ ಬಂದೆ ಮಹದೇಶ್ವರಾ
ಇವನ ಕರುಣದಿ ಕಾಯೊ ಮಹದೇಶ್ವರಾ
ಶಂಭೊ ಯಾರಿವನ್ಯಾರೊ ಮಹದೇಶ್ವರಾ
ಪ್ರೇಮಾ ದೇವರು ಎಂದ ಪ್ರೇಮೇಶ್ವರಾ
ಬೇರೇನನು ನಾ ಬೇಡೆನು ಈ ಪ್ರೇಮವ ಕಾಪಾಡು ನೀನು
ಈ ಪ್ರೇಮಿಯಾ ಆಸೆ ಈಡೆರಿಸೊ ಹರ
ಇನ್ನಾಗಲಿ ಬಾಳು ಬಂಗಾರ.

ನಿನ್ನಾ ಪೂಜೆಗೆ ಬಂದೆ ಮಹದೇಶ್ವರಾ...

Wednesday, July 2, 2008

ನನ್ನ ಹಾಡು ನನ್ನದು ನನ್ನ ರಾಗ ನನ್ನದು

ಚಿತ್ರ: ಸುಪ್ರಭಾತ
ರಚನೆ: ಚಿ.ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಹಿನ್ನಲೆ ಗಾಯನ: ಎಸ್.ಪಿ.ಬಾಲಸುಬ್ರಮಣ್ಯಂ




ನನ್ನ ಹಾಡು ನನ್ನದು ನನ್ನ ರಾಗ ನನ್ನದು
ನನ್ನ ತಾಳ ನನ್ನದು ನನ್ನ ಆಸೆ ನನ್ನದು

ಎಲ್ಲೆಲ್ಲಿಯು ಎಂದೆಂದಿಗು ಎಲ್ಲೆಲ್ಲಿಯು ಎಂದೆಂದಿಗು
ನನ್ನಂತೆ ನಾನು ಇರುವೆನು ನುಡಿವೆನು ನಡೆವೆನು ದುಡಿವೆನು
ಈ ಬಾಳಲಿ

ನೋಡು ನೀಲಿ ಬಾನಿಗೆ ಮೋಡ ಅಂದ ತಂದಿದೆ
ಹಕ್ಕಿ ಹಾಡಿ ಹಾರಾಡಿದೆ
ಹಾಯಾಗಿ ಆನಂದದೆ
ತಂಪು ಗಾಳಿ ಬೀಸಿದೆ ನದಿಯ ನೀರು ಓಡಿದೆ
ಹಸಿರು ಮೆತ್ತೆಯ ಹಾಸಿದೆ
ಲತೆಯಲ್ಲಿ ಹೂ ನಗುತಿದೆ
ಜಗದ ಸೊಬಗು ನನಗೆ ತಾನೆ

ನನ್ನ ಹಾಡು ನನ್ನದು ನನ್ನ ರಾಗ ನನ್ನದು...

ನೂರು ಜನರು ಬಂದರು ನೂರು ಜನರು ಹೋದರು
ನನಗೆ ನಾನೆ ಸಂಗಾತಿಯು
ನಾನೆಂದು ಸುಖ ಜೀವಿಯು
ಉರಿವ ಬಿಸಿಲೆ ಬಂದರು ಗುಡುಗು ಮಳೆಯೆ ಸುರಿದರು
ನನಗೆ ಎಲ್ಲ ಸಂತೋಷವೆ
ದಿನಕೊಂದು ಹೊಸ ನೋಟವೆ
ಹಗಲು ಇರುಳು ಸೊಗಸು ತಾನೆ

ನನ್ನ ಹಾಡು ನನ್ನದು ನನ್ನ ರಾಗ ನನ್ನದು...

Tuesday, July 1, 2008

ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ

ಚಿತ್ರ : ಬೆಟ್ಟದ ಹೂವು
ರಚನೆ : ಚಿ.ಉದಯಶಂಕರ್
ಸಂಗೀತ : ರಾಜನ್-ನಾಗೇಂದ್ರ
ಹಿನ್ನಲೆ ಗಾಯನ: ಡಾ.ಪಿ.ಬಿ.ಶ್ರೀನಿವಾಸ್, ಮಾ.ಲೋಹಿತ್ ಮತ್ತು ಸಂಗಡಿಗರು



ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ
ಪ್ರೇಮದಿಂದಲಿ ಸಲಹು ಮಾತೆ ನೀಡು ಸನ್ಮತಿ ಸೌಖ್ಯದಾತೆ

ಅಂಧಕಾರವ ಓಡಿಸು ಜ್ಞಾನ ಜ್ಯೋತಿಯ ಬೆಳಗಿಸು
ಹೃದಯ ಮಂದಿರದಲ್ಲಿ ನೆಲೆಸು ಚಿಂತೆಯಾ ಅಳಿಸು
ಶಾಂತಿಯಾ ಉಳಿಸು
ಶಾಂತಿಯಾ ಉಳಿಸು

ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ...

ನಿನ್ನ ಮಡಿಲಿನ ಮಕ್ಕಳಮ್ಮ ನಿನ್ನ ನಂಬಿದ ಕಂದರಮ್ಮ
ನಿನ್ನ ಕರುಣೆಯ ಬೆಳಕಲೆಮ್ಮ ಬಾಳನೂ ಬೆಳಗಮ್ಮ
ನಮ್ಮ ಕೋರಿಕೆ ಆಲಿಸಮ್ಮ
ನಮ್ಮ ಕೋರಿಕೆ ಆಲಿಸಮ್ಮ

ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ...

ಒಳ್ಳೆ ಮಾತುಗಳಾಡಿಸು ಒಳ್ಳೆ ಕೆಲಸವ ಮಾಡಿಸು
ಒಳ್ಳೆ ದಾರಿಯಲೆಮ್ಮ ನಡೆಸು ವಿದ್ಯೆಯಾ ಕಲಿಸು
ಆಸೆ ಪೂರೈಸೂ
ಆಸೆ ಪೂರೈಸೂ

ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ...

ಕೊಳನನೂದಿ ಮೊಹಿಸುವುದನು ಕಲಿಸು ಎನಗೆ ಚೆನ್ನ

ಕೊಳನನೂದಿ ಮೊಹಿಸುವುದನು ಕಲಿಸು ಎನಗೆ ಚೆನ್ನ
ತಳಮಳಿಪುದು ಎನ್ನ ಎದೆಯು ಕೊಳಲಗಾನದಿಂದ ……. ಕೊಳಲಗಾನದಿಂದ

ನಲಿಯುತಿಹುದು ಉದಯಗಗನ ಅರುಣರಾಗದಿಂದ
ಕೊಳದಲೆಗಳು ಕುಣಿಯುತಿಹವು ಭಾವದೊಲುಮೆಯಿಂದ

ತನಿತಚೂತದಡಿಯಮೊದಲ ನುಡಿಯಕಲಿಸು ಚೆನ್ನ
ಕೊಳಲಕಲಿಸು ಬೇಗ ಎನಗೆ ಮೊಹಿಸುವೆನು ನಿನ್ನಾ …. ಮೊಹಿಸುವೇನು ನಿನ್ನ

ಇದನ್ನು ಕಳಿಸಿದ ಸೌಮ್ಯ ಅವರಿಗೆ ಧನ್ಯವಾದಗಳು. ಇದರ ಸಾಹಿತ್ಯ, ಸಂಗೀತ, ಹಿನ್ನಲೆಗಾಯಕರ ಮಾಹಿತಿಯಿದ್ದರೆ ಕಳಿಸಿಕೊಡಿ

ಹುಚ್ಚು ಕೋಡಿ ಮನಸು ಅದು ಹದಿನಾರರ ವಯಸು

ಸಾಹಿತ್ಯ: ಹೆಚ್.ಎಸ್.ವೆಂಕಟೇಶ ಮೂರ್ತಿ
ಹಿನ್ನಲೆ ಗಾಯನ: ಬಿ.ಆರ್.ಛಾಯ


ಹುಚ್ಚು ಕೋಡಿ ಮನಸು ಅದು ಹದಿನಾರರ ವಯಸು
ಹುಚ್ಚು ಕೋಡಿ ಮನಸು ಅದು ಹದಿನಾರರ ವಯಸು
ಮಾತು ಮಾತಿಗೇಕೋ ನಗು ಮರುಗಳಿಗೆ ಮೌನ
ಕನ್ನಡಿ ಮುಂದಷ್ಟು ಹೊತ್ತು ಬರೆಯದಿರುವ ಕವನ
ಹುಚ್ಚು ಕೋಡಿ ಮನಸು ಅದು ಹದಿನಾರರ ವಯಸು

ಸೆರಗು ತೀಡಿದಷ್ಟುಹೊತ್ತು ಹಟಮಾಡುವ ಕೂದಲು
ಸೆರಗು ತೀಡಿದಷ್ಟುಹೊತ್ತು ಹಟಮಾಡುವ ಕೂದಲು
ನಿರಿಯೇಕೋ ಸರಿಯಾಗದು ಮತ್ತೆ ಒಳಗೆ ಹೋದಳು
ನಿರಿಯೇಕೋ ಸರಿಯಾಗದು ಮತ್ತೆ ಒಳಗೆ ಹೋದಳು
ಹುಚ್ಚು ಕೋಡಿ ಮನಸು ಅದು ಹದಿನಾರರ ವಯಸು

ಕೆನ್ನೆ ಕೊಂಚ ಕೆಂಪಾಯಿತೆ ತುಟಿಯ ರಂಗು ಹೆಚ್ಚೇ
ಕೆನ್ನೆ ಕೊಂಚ ಕೆಂಪಾಯಿತೆ ತುಟಿಯ ರಂಗು ಹೆಚ್ಚೇ
ನಗುತ ಅವಳ ಅಣುಕಿಸುತಿದೆ ಗಲ್ಲದ ಕರಿ ಮಚ್ಚೆ
ಹುಚ್ಚು ಕೋಡಿ ಮನಸು ಅದು ಹದಿನಾರರ ವಯಸು

ಬರಿ ಹಸಿರು ಬರಿ ಹೂವು ಎದೆಯೊಳೆಷ್ಟು ಹೆಸರು
ಯಾವ ಮದುವೆ ದಿಬ್ಬಣವೋ ಸುಮ್ಮನೆ ನಿಟ್ಟುಸಿರು
ಹುಚ್ಚು ಕೋಡಿ ಮನಸು ಅದು ಹದಿನಾರರ ವಯಸು

ಇದನ್ನು ಕಳಿಸಿದ ಸೌಮ್ಯ ಅವರಿಗೆ ಧನ್ಯವಾದಗಳು. ಇದರ ಸಾಹಿತ್ಯ, ಸಂಗೀತ, ಹಿನ್ನಲೆಗಾಯಕರ ಮಾಹಿತಿಯಿದ್ದರೆ ಕಳಿಸಿಕೊಡಿ