Showing posts with label ಎಂ.ರಂಗರಾವ್. Show all posts
Showing posts with label ಎಂ.ರಂಗರಾವ್. Show all posts

Tuesday, May 18, 2010

ಮುಂಜಾನೆ ಮೂಡಿದ ಹಾಗೆ

ಚಿತ್ರ: ಮುದುಡಿದ ತಾವರೆ ಅರಳಿತು
ಸಾಹಿತ್ಯ: ದೊಡ್ಡರಂಗೇಗೌಡ
ಸಂಗೀತ: ಎಂ. ರಂಗರಾವ್
ಹಿನ್ನಲೆ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ


ಮುಂಜಾನೆ ಮೂಡಿದ ಹಾಗೆ
ತಂಗಾಳಿ ತೀಡಿದ ಹಾಗೆ
ಹೊಂಬಾಳೆ ತೂಗಿದ ಹಾಗೆ
ಕೆಂದಾವರೆ ನೀನು ನನಗೆ

ಹಸಿರಾದ ಪ್ರೀತಿಯ ಕಂಡು
ಉಸಿರಾಗ ಬಂದೆನು ನಾನು
ಸವಿಯಾದ ಸ್ನೇಹ ಮೋಹ ಬಲು
ಬೆಳೆದು ನಿಂತಿರಲು ಓಡಿ ಬಂದೆ ಬಳಿಗೆ

ಮುಂಜಾನೆ ಮೂಡಿದ ಹಾಗೆ...

ಹೊಸದಾದ ಆಸೆಯ ತೋರಿ
ಶಶಿಯಂತೆ ಬೆಳಗುವೆ ನೀನು
ಚೆಲುವಾದ ಬಾಳ ಕಡಲಿನಲಿ
ಒಲುಮೆ ದೋಣಿಯಲಿ ತೇಲು ನನ್ನ ಜೊತೆಗೆ

ಮುಂಜಾನೆ ಮೂಡಿದ ಹಾಗೆ...

Monday, August 25, 2008

ನೀ ಹೀಂಗ ನೋಡಬ್ಯಾಡ ನನ್ನ

ರಚನೆ : ಡಾ.ದ.ರಾ.ಬೇಂದ್ರೆ
ಸಂಗೀತ: ಎಂ.ರಂಗರಾವ್
ಹಿನ್ನಲೆ ಗಾಯನ: ರಾಜಕುಮಾರ್ ಭಾರತಿ


ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಿದರೆ ನನ್ನ ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ

ದಾರೀಲಿ ನೆನೆದ ಕೈ ಹಿಡಿದೆ ನೀನು ತಣ್ಣsಗ ಅಂತ ತಿಳಿದು
ಬಿಡವೊಲ್ಲಿ ಇನ್ನುನೂ ಬೂದಿಮುಚ್ಚಿದ ಕೆಂಡ ಇದಂತ ಹೊಳೆದು
ಮುಗಿಲಿನ ಕಪ್ಪರಿಸಿ ನೆಲಕ ಬಿದ್ದರ ನೆಲಕ ನೆಲಿ ಎಲ್ಲಿನ್ನs
ಆ ಗಾದಿ ಮಾತು ನಂಬಿ ನಾನು ದೇವರಂತ ತಿಳಿದಿಯೇನ ನೀ ನನ್ನ

ನೀ ಹೀಂಗ ನೋಡಬ್ಯಾಡ ನನ್ನ...

ಇಬ್ಬನ್ನಿ ತೊಳೆದರೂ ಹಾಲು ಮೆತ್ತಿದಾ ಕವಳಿಕಾoಟಿಯಾ ಹಣ್ಣು
ಹೊಳೆ ಹೊಳೆವ ಹಾಂಗಿರುವ ಕಣ್ಣಿರುವ ಹೆಣ್ಣ ಹೇಳು ನಿನ್ನವೇನ ಈ ಕಣ್ಣು
ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡು ಒಮ್ಮಿಗಿಲ
ಹುಣ್ಣವೀ ಚಂದಿರನ ಹೆಣ ಬಂತೊ ಮುಗಿಲಾಗ ತೇಲತ ಹಗಲ

ನೀ ಹೀಂಗ ನೋಡಬ್ಯಾಡ ನನ್ನ...

ನಿನ ಕಣ್ಣಿನ್ಯಾಗ ಕಾಲೂರಿ ಮಳೆಯು ನಡ ನಡಕ ಹುಚ್ಚನಗಿ ಯಾಕ
ಹನಿ ಒಡೆಯಲಿಕ್ಕೆ ಬಂದಂಥ ಮೋಡ ತಡದ್ಹಾಂಗೆ ಗಾಳಿಯ ನೆವಕ
ಅತ್ತಾರೆ ಅತ್ತುಬಿಡು ಹೊನಲು ಬರಲಿ ನಕ್ಯಾಕೆ ಮರಸತೀ ದು:ಖ
ಎವೆಬಡಿಸಿ ಕೆಡವು ಬಿರಿಗಣ್ಣು ಬ್ಯಾಡ ತುಟಿಕಚ್ಚಿ ಹಿಡಿಯದಿರು ಬಿಕ್ಕ

ನೀ ಹೀಂಗ ನೋಡಬ್ಯಾಡ ನನ್ನ...

Thursday, August 7, 2008

ಶ್ರಾವಣ ಮಾಸ ಬಂದಾಗ ಆನಂದ ತಂದಾಗ

ಚಿತ್ರ: ಶ್ರಾವಣ ಬಂತು
ರಚನೆ: ಚಿ.ಉದಯಶಂಕರ್
ಸಂಗೀತ: ಎಂ.ರಂಗರಾವ್
ಹಿನ್ನಲೆ ಗಾಯನ: ಡಾ. ರಾಜ್ ಕುಮಾರ್ ಮತ್ತು ವಾಣಿ ಜಯರಾಮ್


ಶ್ರಾವಣ ಮಾಸ ಬಂದಾಗ ಆನಂದ ತಂದಾಗ
ವಿರಹ ಗೀತೆ ಇನ್ನಿಲ್ಲ ಪ್ರಣಯ ಗೀತೆ ಬಾಳೆಲ್ಲ

ನೀ ನನ್ನ ಜೊತೆಯಾಗಿ ಇರುವಾಗ ಹಿತವಾಗಿ
ಬಿಸಿಲೆಲ್ಲ ತಂಪಾಗಿ ಬೆಳದಿಂಗಳಂತಾಗಿ
ಮಾತೆಲ್ಲ ಹಾಡಾಗಿ ಆ ಹಾಡು ಇಂಪಾಗಿ
ಯುಗವೊಂದು ದಿನವಾಗಿ ಕ್ಷಣವಾಗಿ
ವಿರಹ ಗೀತೆ ಇನ್ನಿಲ್ಲ ಪ್ರಣಯ ಗೀತೆ ಬಾಳೆಲ್ಲ

ಶ್ರಾವಣ ಮಾಸ ಬಂದಾಗ ಆನಂದ ತಂದಾಗ...

ಮುಗಿಲೆಲ್ಲ ಕಪ್ಪಾಗಿ ಮಿಂಚಿಂದ ಬೆಳಕಾಗಿ
ಗುಡುಗಿಂದ ಸದ್ದಾಗಿ ಮಳೆಬಂದು ತಂಪಾಗಿ
ಸಂತೋಷ ಹೆಚ್ಚಾಗಿ ನವಿಲೊಂದು ಹುಚ್ಚಾಗಿ
ಕುಣಿದಾಗ ಸೊಗಸಾಗಿ ನಮಗಾಗ ಚಳಿಯಾಗಿ
ವಿರಹ ಗೀತೆ ಇನ್ನಿಲ್ಲ ಪ್ರಣಯ ಗೀತೆ ಬಾಳೆಲ್ಲ

ಶ್ರಾವಣ ಮಾಸ ಬಂದಾಗ ಆನಂದ ತಂದಾಗ...