Showing posts with label ಪಡುವಾರ ಹಳ್ಳಿ ಪಾಂಡವರು. Show all posts
Showing posts with label ಪಡುವಾರ ಹಳ್ಳಿ ಪಾಂಡವರು. Show all posts

Wednesday, September 9, 2009

ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ

ಚಿತ್ರಃ ಪಡುವಾರ ಹಳ್ಳಿ ಪಾಂಡವರು
ಸಂಗೀತಃ ವಿಜಯಭಾಸ್ಕರ



ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ
ನನ್ನ ತಮ್ಮ ಮ೦ಕುತಿಮ್ಮ
ತೂಕಡಿಸಿ ತೂಕಡಿಸಿ ಬಿದ್ದರು
ನನ್ನಜ್ಜ ನಿನ್ನಜ್ಜ ಮುತ್ತಜ್ಜ

ಅಕ್ಷರದ ಸಕ್ಕರೆಯ ಕಹಿಯೆ೦ದು ತಿಳಿದು
ಪುಸ್ತಕವ ಕಸಕಿ೦ತ ಕಡೆಗಣಿಸಿ ಎಸೆದು
ಹಸ್ತವನು ತಲೆಗಿಟ್ಟು ಹಣೆ ಬರಹವೆ೦ದು
ತೂಕಡಿಸಿ ತೂಕಡಿಸಿ ಬಿದ್ದರು
ನಿನ್ನಜ್ಜ ನನ್ನಜ್ಜ ಮುತ್ತಜ್ಜ

ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ...

ಹಾಕಿಟ್ಟು ಹುಯಿಗ೦ಜಿ ತು೦ಡು ಕ೦ಬಳಿಗೆ
ತಾವಿಟ್ಟರೊ ಕೊರಳ ಜೀತದ ಕತ್ತರಿಗೆ
ದಿಕ್ಕೆಟ್ಟರೊ ನರಳಿ ಜೀವಶವದ೦ತೆ
ತೂಕಡಿಸಿ ತೂಕಡಿಸಿ ಬಿದ್ದರು
ನಿನ್ನಜ್ಜ ನನ್ನಜ್ಜ ಮುತ್ತಜ್ಜ

ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ...

ಬದುಕನ್ನು ಎದುರಿಸಲು ಕಣ್ತೆರೆದು ನೋಡ
ಬೆದರಿಕೆಗೆ ಕೈಕಟ್ಟಿ ಹಾಳಾಗಬೇಡ
ಕೊಚ್ಚೆಯ ಹುಳುವ೦ತೆ ಕುರುಡಾಗಬೇಡ
ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ
ನನ್ನ ತಮ್ಮ ಮ೦ಕುತಿಮ್ಮ
ತೂಕಡಿಸಿ ತೂಕಡಿಸಿ ಬಿದ್ದರು ನನ್ನಜ್ಜ ನಿನ್ನಜ್ಜ ಮುತ್ತಜ್ಜ