Showing posts with label ಸತ್ಯಂ. Show all posts
Showing posts with label ಸತ್ಯಂ. Show all posts

Tuesday, May 4, 2010

ಅಮ್ಮ ನೀನು ನಮಗಾಗಿ ಸಾವಿರ ವರುಷ ಸುಖವಾಗಿ

ಚಿತ್ರ: ಕೆರಳಿದ ಸಿಂಹ
ಸಂಗೀತ: ಸತ್ಯಂ
ಹಿನ್ನಲೆ ಗಾಯನ: ಡಾ. ರಾಜ್ ಕುಮಾರ್, ಡಾ.ಪಿ.ಬಿ.ಶ್ರೀನಿವಾಸ್

ಅಮ್ಮ ನೀನು ನಮಗಾಗಿ ಸಾವಿರ ವರುಷ ಸುಖವಾಗಿ
ಬಾಳಲೆ ಬೇಕು ಈ ಮನೆ ಬೆಳಕಾಗಿ
ಅಮ್ಮ ನೀನು ನಮಗಾಗಿ ಸಾವಿರ ವರುಷ ಸುಖವಾಗಿ
ಬಾಳಲೆ ಬೇಕು ಈ ಮನೆ ಬೆಳಕಾಗಿ
ಅಮ್ಮ ನೀನು ನಮಗಾಗಿ ಸಾವಿರ ವರುಷ ಸುಖವಾಗಿ

ಬಾಡದ ತಾವರೆ ಹೂವಿನ ಹಾಗೆ ಎಂದಿಗು ಆರದ ಜ್ಯೋತಿಯ ಹಾಗೆ
ಗೋಪುರವೇರಿದ ಕಲಶದ ಹಾಗೆ ಆ ಧೃವ ತಾರೆಯೆ ನಾಚುವ ಹಾಗೆ
ಜೊತೆಯಲಿ ಎಂದೆಂದು ನೀನಿರಬೇಕು ಬೇರೆ ಏನು ಬೇಡೆವು ನಾವು

ಅಮ್ಮ ನೀನು ನಮಗಾಗಿ ಸಾವಿರ ವರುಷ ಸುಖವಾಗಿ...

ಸಂಜೆಯ ಗಾಳಿಯ ತಂಪಿನ ಹಾಗೆ ಮಲ್ಲಿಗೆ ಹೂವಿನ ಕಂಪಿನ ಹಾಗೆ
ಜೀವವ ತುಂಬುವ ಉಸಿರಿನ ಹಾಗೆ ನಮ್ಮನು ಸೇರಿ ಎಂದಿಗು ಹೀಗೆ
ನಗುತಲಿ ಒಂದಾಗಿ ನೀನಿರಬೇಕು ನಿನ್ನ ನೆರಳಲಿ ನಾವಿರಬೇಕು

ಅಮ್ಮ ನೀನು ನಮಗಾಗಿ ಸಾವಿರ ವರುಷ ಸುಖವಾಗಿ...

ಸಾವಿರ ನದಿಗಳು ಸೇರಿದರೇನು ಸಾಗರಕೆ ಸಮನಾಗುವುದೇನು
ಶತಕೋಟಿ ದೇವರು ಹರಸಿದರೇನು ಅಮ್ಮನ ಹರಕೆಗೆ ಸರಿಸಾಟಿಯೇನು
ತಾಯಿಗೆ ಆನಂದ ತಂದರೆ ಸಾಕು ಬೇರು ಪೂಜೆ ಏತಕೆ ಬೇಕು

ಅಮ್ಮ ನೀನು ನಮಗಾಗಿ ಸಾವಿರ ವರುಷ ಸುಖವಾಗಿ...

Friday, March 12, 2010

ಈ ಗುಲಾಬಿಯು ನಿನಗಾಗಿ...

ಚಿತ್ರ: ಮುಳ್ಳಿನ ಗುಲಾಬಿ
ಸಂಗೀತ: ಸತ್ಯಂ
ಹಿನ್ನಲೆ ಗಾಯನ:ಎಸ್.ಪಿ


ಈ ಗುಲಾಬಿಯು ನಿನಗಾಗಿ
ಇದು ಚೆಲ್ಲುವ ಪರಿಮಳ ನಿನಗಾಗಿ
ಈ ಹೂವಿನಂದ ಪ್ರೇಯಸಿ
ನಿನಗಾಗೆ ಕೇಳೆ ಪ್ರೇಯಸಿ
ನಿನಗಾಗೆ ಕೇಳೆ ಓ ರತಿ

ನನ್ನೀ ಕಣ್ಣಲಿ ಕಾತರವೇನು
ನಿನ್ನನು ಕಾಣುವ ಆತುರವೇನು
ನನ್ನೀ ಕಣ್ಣಲಿ ಕಾತರವೇನು
ನಿನ್ನನು ಕಾಣುವ ಆತುರವೇನು
ಆತುರ ತರುವಾ ವೇದನೆಯೇನು
ಜೀವದ ಜೀವವು ಪ್ರಿಯತಮೆ ನೀನು

ಈ ಗುಲಾಬಿಯು ನಿನಗಾಗಿ...

ನೀರನು ತೊರೆದರೆ ಕಮಲಕೆ ಸಾವು
ಹೂವನು ಮರೆತರೆ ದುಂಬಿಗೆ ಸಾವು
ನೀರನು ತೊರೆದರೆ ಕಮಲಕೆ ಸಾವು
ಹೂವನು ಮರೆತರೆ ದುಂಬಿಗೆ ಸಾವು..
ಕಾಣದೆ ಹೋದರೆ ಅರೆಕ್ಷಣ ನಿನ್ನ
ಮರುಕ್ಷಣ ಪ್ರಿಯತಮೆ ನನ್ನ ಸಾವು

ಈ ಗುಲಾಬಿಯು ನಿನಗಾಗಿ...

Thursday, October 23, 2008

ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ

ಚಿತ್ರ:ತಿರುಗುಬಾಣ
ರಚನೆ: ಚಿ.ಉದಯಶಂಕರ್
ಸಂಗೀತ: ಸತ್ಯಂ
ಹಿನ್ನಲೆ ಗಾಯನ: ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಮ್


ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ
ಎಲ್ಲೇ ಇರಲಿ ಹೇಗೇ ಇರಲಿ ಕನ್ನಡವೆ ನಮ್ಮ ಉಸಿರಲ್ಲಿ


ಕರುನಾಡು ಸ್ವರ್ಗದ ಸೀಮೆ
ಕಾವೇರಿ ಹುಟ್ಟಿದ ನಾಡು
ಕಲ್ಲಲ್ಲಿ ಕಲೆಯನು ಕಂಡ
ಬೇಲೂರ ಶಿಲ್ಪದ ಬೀಡು
ಬಸವೇಶ್ವರ ರನ್ನ ಪಂಪರ
ಕವಿವಾಣಿಯ ನಾಡು

ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ...

ಚಾಮುಂಡಿ ರಕ್ಷೆಯು ನಮಗೆ
ಗೊಮ್ಮಟೇಶ ಕಾವಲು ಇಲ್ಲಿ
ಶೃoಗೇರಿ ಶಾರದೆ ಲೀಲೆ
ರಸತುಂಗೆಯಾಗಿದೆ ಇಲ್ಲಿ
ವಿಶ್ವಖ್ಹ್ಯಾತಿಯ ವಿಶ್ವೇಶ್ವರಯ್ಯ
ಜನಿಸಿದ ಈ ನಾಡು

ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ...

ಎಳೇಳು ಜನ್ಮವೇ ಬರಲಿ
ಈ ಮಣ್ಣಲಿ ನಾನು ಹುಟ್ಟುವೆ
ಏನೇನು ಕಷ್ಟವೇ ಇರಲಿ
ಸಿರಿಗನ್ನಡಕಾಗೆ ದುಡಿಯುವೆ
ತನು ಕನ್ನಡ ನುಡಿ ಕನ್ನಡ
ಮನ ಕನ್ನಡವಾಗಿರಲಿ

ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ...