Showing posts with label ಸಿ. ಅಶ್ವಥ್. Show all posts
Showing posts with label ಸಿ. ಅಶ್ವಥ್. Show all posts

Tuesday, April 22, 2014

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ

ಸಾಹಿತ್ಯ: ಚನ್ನವೀರ ಕಣವಿ
ಸಂಗೀತ: ಸಿ. ಅಶ್ವಥ್
ಗಾಯಕರು: ಬಿ.ಆರ್.ಛಾಯ



ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
ಸೋ! ಎಂದು ಶೃತಿ ಹಿಡಿದು ಸುರಿಯುತಿತ್ತು
ಅದಕೇ ಹಿಮ್ಮೇಳವನೆ ಸೂಸಿಪಹ ಸುಳಿಗಾಳಿ
ತೆಂಗು ಗರಿಗಳ ನಡುವೆ ನುಸುಳುತಿತ್ತು

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ...

ಇಳೆವೆಣ್ಣು ಮೈದೊಳೆದು ಮಕರಂದದರಿಶಣದಿ
ಹೂ ಮುಡಿದು ಮದುಮಗಳ ಹೋಲುತಿತ್ತು
ಮೂಡಣದಿ ನೇಸರನ ನಗೆ ಮೊಗದಾ ಶ್ರೀಕಾಂತಿ
ಬಿಳಿಯಾ ಮೋಡದ ಹಿಂದೆ ಹೊಳೆಯುತಿತ್ತು

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ...

ಹುಲ್ಲೆಸಳು ಹೂಪಕಳೆ ಮುತ್ತು ಹನಿಗಳ ಮಿಂಚು
ಸೊಡರಿನಲಿ ಆರತಿಯ ಬೆಳಗುತಿತ್ತು
ಕೊರಲುಕ್ಕಿ ಹಾಡುತಿಹ ಚಿಕ್ಕಪಕ್ಕಿಯ ಬಳಗ
ಶುಭಮಸ್ತು ಶುಭಮಸ್ತು ಎನ್ನುತಿತ್ತು

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ...

ತಳಿರ ತೋರಣದಲ್ಲಿ ಬಳ್ಳಿ ಮಾಡಗಳಲ್ಲಿ
ದುಂಬಿಗಳ ಓಂಕಾರ ಹೊಮ್ಮುತಿತ್ತು
ಹಚ್ಚ ಹಸುರಿನ ಪಚ್ಚೆ ನೆಲಗಟ್ಟಿನಂಗಳದಿ
ಚಿಟ್ಟೆ ರಿಂಗಣ ಗುಣಿತ ಹಾಕುತಿತ್ತು

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ...

ಉಷೆಯ ನುಙ್ಗದಪಿನಲಿ ಹರ್ಷಬಾಷ್ಪಗಳಂತೆ
ಮರದ ಹನಿ ತಟಪಟನೆ ಉದುರುತಿತ್ತು
ಸೃಷ್ಠಿಲೀಲೆಯೊಳಿಂತು ತಲ್ಲೀನವಾದ ಮನ
ಮುಂಬಾಳ ಸವಿಗನಸ ನೆನೆಯುತಿತ್ತು

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ...

Saturday, September 11, 2010

ಗುಡಿಯ ನೋಡಿರಣ್ಣಾ

ಚಿತ್ರ: ಸಂತ ಶಿಶುನಾಳ ಶರೀಫ
ಸಾಹಿತ್ಯ: ಶಿಶುನಾಳ ಷರೀಫ್
ಸಂಗೀತ: ಸಿ.ಅಶ್ವಥ್
ಹಿನ್ನಲೆ ಗಾಯನ: ಸಿ.ಅಶ್ವಥ್



ಗುಡಿಯ ನೋಡಿರಣ್ಣಾ
ದೇಹದ ಗುಡಿಯ ನೋಡಿರಣ್ಣಾ

ಗುಡಿಯ ನೋಡಿರಿದು
ಪೊಡವಿಗೆ ಒಡೆಯನು
ಆಡಗಿಕೊಂಡು ಕಡುಬೆಡಗಿನೊಳಿರುತಿಹ
ಗುಡಿಯ ನೋಡಿರಣ್ಣಾ

ಮೂರು ಮೂಲೆಯ ಕಲ್ಲು ಅದರೊಳು
ಜಾರುತಿರುವ ಕಲ್ಲು
ಧೀರ ನಿರ್ಗುಣನು ಸಾರ ಸಗುಣದಲಿ
ತೋರಿ ಅಡಗಿ ತಾ ಬ್ಯಾರ್ಯಾಗಿರುತಿಹ
ಗುಡಿಯ ನೋಡಿರಣ್ಣಾ ದೇಹದ ಗುಡಿಯ ನೋಡಿರಣ್ಣಾ...

ಆರು ಮೂರು ಕಟ್ಟಿ ಮೇಲಕೆ
ಏರಿದನು ಘಟ್ಟಿ
ಭೇರಿ ಕಾಳಿ ಶಂಖ
ಭಾರಿ ಸುನಾದದಿ
ಮೀರಿದಾನಂದ ತೋರಿ ಹೊಳೆಯುತಿಹ
ಗುಡಿಯ ನೋಡಿರಣ್ಣಾ ದೇಹದ ಗುಡಿಯ ನೋಡಿರಣ್ಣಾ...

ಸಾಗುತಿಹವು ದಿವಸ ಬಹುದಿನ
ಹೋಗಿ ಮಾಡಿ ಪಾಯ್ಸ
ಯೋಗಿ ರಾಜ ಶಿಶುನಾಳಧೀಶ ತಾ—
ನಾಗಿ ಪರಾತ್ಪರ ಬ್ರಹ್ಮರೂಪನಿಹ
ಗುಡಿಯ ನೋಡಿರಣ್ಣಾ ದೇಹದ ಗುಡಿಯ ನೋಡಿರಣ್ಣಾ...

Sunday, September 5, 2010

ಮೋಹದ ಹೆಂಡತಿ ತೀರಿದ ಬಳಿಕ

ಚಿತ್ರ: ಸಂತ ಶಿಶುನಾಳ ಶರೀಫ
ಸಾಹಿತ್ಯ: ಶಿಶುನಾಳ ಷರೀಫ್
ಸಂಗೀತ: ಸಿ.ಅಶ್ವಥ್
ಹಿನ್ನಲೆ ಗಾಯನ: ಸಿ.ಅಶ್ವಥ್



ಮೋಹದ ಹೆಂಡತಿ ತೀರಿದ ಬಳಿಕ
ಮಾವನ ಮನೆಯ ಹಂಗಿನ್ಯಾಕೋ
ಸಾವು ನೋವಿಗೆ ಸಾರದ ಬೀಗನ
ಮಾತಿನ ಹಂಗೊಂದೆನಗ್ಯಾಕೋ?

ಖಂಡವನದಿ ಸೋಕಿ ತನ್ನ ಮೈಯೊಳು ತಾಕಿ
ಬಂಡೆದ್ದು ಹೋಗುವುದು ಭಯವ್ಯಾಕೋ?
ಮಂಡಲನಾಡಿಗೆ ಪಿಂಡದ ಗೂಡಿಗೆ
ಚಂಡಿತನದಿ ಚರಿಸ್ಯಾಡುವುದ್ಯಾಕೋ?

ಮೋಹದ ಹೆಂಡತಿ ತೀರಿದ ಬಳಿಕ...

ತಂದೆ ಗೋವಿಂದ ಗುರುವಿನ ಸೇವಕ
ಕುಂದಗೋಳಕೆ ಬಂದು ನಿಂತನ್ಯಾಕೋ ?
ಬಂಧುರ ಶಿಶುನಾಳಾಧೀಶನ ದಯದಿಂದ
ಇಂದಿಗೆ ವಿಷಯದ ವ್ಯಸನವು ಸಾಕೋ.

ಮೋಹದ ಹೆಂಡತಿ ತೀರಿದ ಬಳಿಕ...

Saturday, August 21, 2010

ಕೋಡಗನ ಕೋಳಿ ನುಂಗಿತ್ತಾ ನೋಡವ್ವ ತಂಗಿ

ಚಿತ್ರ:ಸಂತ ಶಿಶುನಾಳ ಶರೀಫ
ಸಾಹಿತ್ಯ: ಶಿಶುನಾಳ ಷರೀಫ್
ಸಂಗೀತ: ಸಿ.ಅಶ್ವಥ್
ಹಿನ್ನಲೆ ಗಾಯನ: ಸಿ.ಅಶ್ವಥ್



ಕೋಡಗನ ಕೋಳಿ ನುಂಗಿತ್ತಾ ನೋಡವ್ವ ತಂಗಿ
ಕೋಡಗನ ಕೋಳಿ ನುಂಗಿತ್ತಾ
ಆಡು ಆನೆಯ ನುಂಗಿ
ಗೋಡೆ ಸುಣ್ಣಾವ ನುಂಗಿ
ಆಡಲು ಬಂದ ಪಾತರದವಳ
ಮದ್ದಳೆ ನುಂಗಿತ್ತಾ ತಂಗಿ
ಕೋಡಗನ ಕೋಳಿ ನುಂಗಿತ್ತಾ

ಒಳ್ಳು ಒನಕೆಯ ನುಂಗಿ
ಕಲ್ಲು ಗೂಟಾವ
ಮೆಲ್ಲಲು ಬಂದ ಮುದುಕಿಯನ್ನೆ
ನೆಲ್ಲು ನುಂಗಿತ್ತಾ ತಂಗಿ
ಕೋಡಗನ ಕೋಳಿ ನುಂಗಿತ್ತಾ

ಕೋಡಗನ ಕೋಳಿನುಂಗಿತ್ತಾ ನೋಡವ್ವ ತಂಗಿ...

ಹಗ್ಗ ಮಗ್ಗಾವ ನುಂಗಿ
ಮಗ್ಗಾವ ಲಾಳಿ ನುಂಗಿ
ಮಗ್ಗದಲಿರುವ ಅಣ್ಣನನ್ನೆ
ಮಣಿಯು ನುಂಗಿತ್ತಾ ತಂಗಿ
ಕೋಡಗನ ಕೋಳಿ ನುಂಗಿತ್ತಾ

ಕೋಡಗನ ಕೋಳಿನುಂಗಿತ್ತಾ ನೋಡವ್ವ ತಂಗಿ...

ಗುಡ್ಡ ಗವಿಯನ್ನು ನುಂಗಿ
ಗವಿಯು ಇರುವೆಯಾ ನುಂಗಿ
ಗೋವಿಂದಾ ಗುರುವಿನ ಪಾದ
ನನ್ನನೆ ನುಂಗಿತ್ತಾ ತಂಗಿ
ಕೋಡಗನ ಕೋಳಿ ನುಂಗಿತ್ತಾ


ಕೋಡಗನ ಕೋಳಿನುಂಗಿತ್ತಾ ನೋಡವ್ವ ತಂಗಿ...

Monday, May 17, 2010

ಒಲುಮೇ ಪೂಜೆಗೆಂದೆ ಕರೆಯಾ ಕೇಳಿ ಬಂದೆ

ಚಿತ್ರ: ಅನುಪಮ
ಸಾಹಿತ್ಯ: ದೊಡ್ಡರಂಗೇಗೌಡ
ಸಂಗೀತ: ಅಶ್ವಥ್ ಮತ್ತು ವೈದಿ
ಹಿನ್ನಲೆ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಎಸ್.ಜಾನಕಿ



ಒಲುಮೇ ಪೂಜೆಗೆಂದೆ ಕರೆಯಾ ಕೇಳಿ ಬಂದೆ
ರಾಗ ತಾನ ಪ್ರೇಮಗಾನ ಸಂಜೀವನ

ಮಮತೆ ಮೀಟಿ ಮಿಲನ ಕಂಡೇ
ನಿನ್ನ ಸ್ನೇಹ ಸೌಭಾಗ್ಯ ಮಿಂದೇ
ಹರೆಯಾ ತೂಗಿ ಸನಿಹಾ ಬಂದೇ
ಎಲ್ಲ ಪ್ರೀತಿ ಸನ್ಮೋಹ ತಂದೇ
ಹರುಷಾ ತಂದಾ ಹಾದಿಯೆ ಚಂದಾ
ಒಲವಿನಾಸರೆ ರೋಮಾಂಚಬಂಧಾ

ಒಲುಮೇ ಪೂಜೆಗೆಂದೆ ಕರೆಯಾ ಕೇಳಿ ಬಂದೆ...

ಜೊತೆಯಾ ಸೇರೀ ಬರುವೆ ನಾನೂ
ನನ್ನ ಬಾಳ ಬಂಗಾರ ನೀನು
ಬೆಳಕು ನೀನೂ ಕಿರಣಾ ನಾನೂ
ನಿನ್ನ ಕೂಡಿ ಹೊಂಬಿಸಿಲ ಬಾನು
ನಿನಗೇ ನಾನು ನನಗೆ ನೀನು
ನಿನಗೇ ನಾನು ನನಗೆ ನೀನು
ಪ್ರೇಮ ಜೀವನ ಎಂದೆಂದು ಜೇನು

ಒಲುಮೇ ಪೂಜೆಗೆಂದೆ ಕರೆಯಾ ಕೇಳಿ ಬಂದೆ...

Sunday, June 29, 2008

ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದಂತೆ

ಸಾಹಿತ್ಯ: ಎಂ.ಎನ್.ವ್ಯಾಸರಾವ್
ಸಂಗೀತ: ಸಿ.ಅಶ್ವತ್ಥ್
ಹಿನ್ನಲೆ ಗಾಯನ: ರತ್ನಮಾಲಾ ಪ್ರಕಾಶ್

ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದಂತೆ
ನನ್ನೆದೆಯ ಕಡಲೇಕೆ ಬೀಗುತಿಹುದು
ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದಂತೆ
ನನ್ನೆದೆಯ ಕಡಲೇಕೆ ಬೀಗುತಿಹುದು
ಸೂಜುಗಲ್ಲಾಗಿರುವೆ ಸೆಳೆದು ನಿನ್ನಯ ಕಡೆಗೆ
ಗರಿಗೆದರೆ ಕನಸುಗಳು ಕಾಡುತಿಹುದು

ಎದೆಗೆ ತಾಪದ ಉಸಿರು ತೀಡಿ ತರುತಿದೆ ಅಲರು
ನಿನ್ನ ಹುಣ್ಣಿಮೆ ನಗೆಯು ಛೇಡಿಸಿಹುದು
ಬಳಿಗೆ ಬಾರದೆ ನಿಂತೆ ಹೃದಯ ತುಂಬಿದೆ ಚಿಂತೆ
ಜೀವ ನಿನ್ನಾಸರೆಗೆ ಕಾಯುತಿಹುದು

ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದಂತೆ....

ನೀನೊಂದು ದಡದಲ್ಲಿ ನಾನೊಂದು ದಡದಲ್ಲಿ
ನಡುವೆ ಮೈಚಾಚಿರುವ ವಿರಹದಡವು
ಯಾವ ದೋಣಿಯು ತೇಲಿ ಎಂದು ಬರುವಿದೊ ಕಾಣೆ
ನೀನಿರುವ ಬಳಿಯಲ್ಲಿ ನನ್ನ ಬಿಡಲು

ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದಂತೆ...

Wednesday, June 13, 2007

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು

ರಚನೆ: ಚಂದ್ರಶೇಖರ ಪಾಟೀಲ
ಸಂಗೀತ: ಸಿ. ಅಶ್ವಥ್
ಹಿನ್ನಲೆ ಗಾಯನ: ಸಿ. ಅಶ್ವಥ್

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು
ಒಳಗೊಳಗೇ ಹರಿಯುವವಳು
ಜೀವ ಹಿಂಡಿ ಹಿಪ್ಪೆ ಮಾಡಿ
ಒಳಗೊಳಗೇ ಕೊರೆಯುವವಳು ಸದಾ…
ಗುಪ್ತಗಾಮಿನಿನನ್ನ ಶಾಲ್ಮಲಾ

ಹಸಿರು ಮುರಿವ ಎಲೆಗಳಲ್ಲಿ
ಬಸಿರ ಬಯಕೆ ಒಸರುವವಳು
ತುಟಿ ಬಿರಿಯುವ ಹೂಗಳಲ್ಲಿ
ಬೆಂಕಿ ಹಾಡು ಉಸುರುವವಳು ಸದಾ…
ತಪ್ತಕಾಮಿನಿ ನನ್ನ ಶಾಲ್ಮಲಾ

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು...

ಭೂಗರ್ಭದ ಮೌನದಲ್ಲಿ
ಜುಂಮೆನುತ ಬಳುಕುವವಳು
ಅರಿವಿಲ್ಲದೆ ಮೈಯ ತುಂಬಿ
ಕನಸಿನಲ್ಲಿ ತುಳುಕುವವಳು ಸದಾ..
ಸುಪ್ತಮೋಹಿನಿ ನನ್ನ ಶಾಲ್ಮಲಾ

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು...

ನನ್ನ ಬದುಕ ಭುವನೇಶ್ವರಿ
ನನ್ನ ಶಾಲ್ಮಲಾ
ನನ್ನ ಹೃದಯ ರಾಜೇಶ್ವರಿ
ನನ್ನ ಶಾಲ್ಮಲಾ ಸದಾ…
ಗುಪ್ತಗಾಮಿನಿ ನನ್ನ ಶಾಲ್ಮಲಾ

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು...