Showing posts with label ಜಯಂತ್ ಕಾಯ್ಕಿಣಿ. Show all posts
Showing posts with label ಜಯಂತ್ ಕಾಯ್ಕಿಣಿ. Show all posts

Sunday, March 7, 2010

ಮಧುವನ ಕರೆದರೆ...

ಚಿತ್ರ: ಇಂತಿ ನಿನ್ನ ಪ್ರೀತಿಯ
ಗೀತರಚನೆ: ಜಯಂತ್ ಕಾಯ್ಕಿಣಿ
ಸಂಗೀತ: ಸಾಧು ಕೋಕಿಲ
ಹಿನ್ನಲೆ ಗಾಯನ:ವಾಣಿ ಮತ್ತು ಚಿನ್ಮಯೀ




ಮಧುವನ ಕರೆದರೆ
ತನು ಮನ ಸೆಳೆದರೆ
ಶರಣಾಗು ನೀನು ಆದರೇ

ಬಿರುಗಾಳಿಯಲ್ಲಿ ತೇಲಿ
ಹೊಸ ಘಳಿಗೆ ಬಂದಿದೆ
ಕನಸೊಂದು ಮೈಯ್ಯಾ ಮುರಿದು
ಬಾ ಬಳಿಗೆ ಎಂದಿದೇ
ಶರಣಾಗು ಆದರೆ
ಸೆರೆಯಾಗು ಆದರೆ

ಮಧುವನ ಕರೆದರೆ...

ಕಂಗಳಲಿ ಕನಸಿನ ಕುಲುಮೆ
ಹೊಳೆಯುತಿದೆ ಜೀವದ ಒಲುಮೆ
ಬೆಳಕಲ್ಲಿ ನೋಡು ಆದರೆ
ಮೈಯೆಲ್ಲಾ ಚಂದ್ರನ ಗುರುತು
ಹೆಸರೆಲ್ಲೊ ಹೋಗಿದೆ ಮರೆತು
ನಾನ್ಯಾರು ಹೇಳು ಆದರೇ

ಮಧುವನ ಕರೆದರೆ...

ಮನಸಿನ ಹಸಿ ಬಣ್ಣಗಳಲ್ಲಿ
ನೀನೆಳೆವಾ ರೇಖೆಗಳಲ್ಲಿ
ನಾ ಮೂಡಬೇಕು ಆದರೇ
ಎದುರಿದ್ದು ಕರೆಯುವೇ ಏಕೆ
ಜೊತೆಯಿದ್ದು ಮರೆಯುವೇ ಏಕೆ
ನಿನ್ನೊಲವು ನಿಜವೇ ಆದರೇ

ಮಧುವನ ಕರೆದರೆ...

Monday, September 28, 2009

ಎಲ್ಲೋ ಮಳೆಯಾಗಿದೆಯೆಂದು ತಂಗಾಳಿಯು ಹೇಳುತಿದೆ

ಚಿತ್ರಃ ಮನಸಾರೆ
ಗೀತರಚನೆಃ ಜಯಂತ್ ಕಾಯ್ಕಿಣಿ
ಸಂಗೀತಃ ಮನೋಮೂರ್ತಿ
ಹಿನ್ನಲೆ ಗಾಯನಃ ಸೋನು ನಿಗಮ್



ಎಲ್ಲೋ ಮಳೆಯಾಗಿದೆಯೆಂದು ತಂಗಾಳಿಯು ಹೇಳುತಿದೆ
ಇಲ್ಲೇ ಒಲವಾಗಿದೆ ಎಂದೂ ಕನಸೊಂದು ಬೀಳುತಿದೆ
ವ್ಯಾಮೋಹವ ಕೇವಲ ಮಾತಿನಲೀ ಹೇಳಲು ಬರಬಹುದೆ
ನಿನ ನೋಡಿದ ಮೇಲೆಯು ಪ್ರೀತಿಯಲಿ ಬೀಳದೆ ಇರಬಹುದೆ


ಕಣ್ಣಲಿ ಮೂಡಿದೆ ಹನಿಗವನ ಕಾಯಿಸಿ ನೀ ಕಾಡಿದರೆ
ನೂತನ ಬಾವದ ಆಗಮನ ನೀ ಬಿಡದೇ ನೋಡಿದರೆ
ನಿನ ಧ್ಯಾನದಿ ನಿನ್ನಯ ತೋಳಿನಲಿ ಹೀಗೆಯೆ ಇರಬಹುದೆ
ಈ ಧ್ಯಾನವ ಕಂಡರೆ ದೇವರಿಗೂ ಕೋಪವು ಬರಬಹುದೆ

ಎಲ್ಲೋ ಮಳೆಯಾಗಿದೆಯೆಂದು ತಂಗಾಳಿಯು ಹೇಳುತಿದೆ...

ನೆನಪಿನ ಹೂಗಳ ಬಿಸಣಿಗೆ ನೀ ಬರುವ ದಾರಿಯಲಿ
ಓಡಿದೆ ದೂರಕೆ ಬೇಸರಿಕೆ ನೀ ಇರುವ ಊರಿನಲಿ
ಅನುಮಾನವೆ ಇಲ್ಲವೆ ಕನಸಿನಲಿ ಮೆಲ್ಲಗೆ ಬರಬಹುದೆ
ಅಲೆಮಾರಿಯ ಹೃದಯದ ಡೇರೆಯಲಿ ನೀನು ಇರಬಹುದೆ

ಎಲ್ಲೋ ಮಳೆಯಾಗಿದೆಯೆಂದು ತಂಗಾಳಿಯು ಹೇಳುತಿದೆ...