Showing posts with label ಆಪ್ತಮಿತ್ರ. Show all posts
Showing posts with label ಆಪ್ತಮಿತ್ರ. Show all posts

Wednesday, September 23, 2009

ಕಣಕಣದೆ ಶಾರದೆ, ಕಲೆತಿಹಳು ಕಾಣದೆ

ಚಿತ್ರಃ ಆಪ್ತಮಿತ್ರ
ಗೀತರಚನೆಃ ಕವಿರಾಜ್
ಸಂಗೀತಃ ಗುರುಕಿರಣ್
ಹಿನ್ನಲೆ ಗಾಯನಃ ಮಧು ಬಾಲಕೃಷ್ಣ



ಕಣಕಣದೆ ಶಾರದೆ, ಕಲೆತಿಹಳು ಕಾಣದೆ
ವನವನದಲ್ಲೂ ಕುಹುಕುಹು ಗಾನ
ಝರಿಝರಿಯಲ್ಲೂ ಜುಳುಜುಳು ಧ್ಯಾನ
ವಿಧವಿಧದಾ ನಾದ ಅವಳು ನುಡಿಸುತಿಹಳು

ಜನನಕು ಹಾಡು ಮರಣಕು ಹಾಡು ಯಾರೀ ಛಲಮಗಳು
ಪ್ರತಿ ಎದೆಯಾಳದಲು ಲಯ ತಾಳ ಗೀತೆ ಬದುಕಿನಲು
ಕೊರಳಿನಲಿ ಕೊಳಲಿನಲಿ ಚೆಲುವಿನಲಿ ಒಲವಿನಲಿ
ಒಲಿದು ಉಲಿದು ನಲಿದುಹರಿದು ಬರುವುದು ಶೃತಿಲಯವು

ಕಣಕಣದೆ ಶಾರದೆ, ಕಲೆತಿಹಳು ಕಾಣದೆ...

ಕುಲ ನೆಲದಾಚೆ ಅರಿಯುವ ಭಾಷೆ ಒಂದೇ ಜಗದೊಳಗೆ
ಅವರಿವರಿಲ್ಲ ಸರಿಸಮರೆಲ್ಲ ಸಪ್ತ ಸ್ವರಗಳಿಗೆ
ನಿಪಮಪನಿ ಸನಿಪನಿಸ ಗಸನಿಸಗ
ಮಪಮಪಗ ನಿಮಪಮ ಸನಿಪನಿ ಗಸನಿಸ

ಕಣಕಣದೆ ಶಾರದೆ, ಕಲೆತಿಹಳು ಕಾಣದೆ...