Thursday, October 23, 2008

ಚೆಲುವೆಯ ಅಂದದ ಮೊಗಕೇ ಕಣ್ಣೇ ಭೂಷಣ

ಚಿತ್ರ: ದೇವರಗುಡಿ
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಹಿನ್ನಲೆ ಗಾಯನ: ಎಸ್.ಪಿ


ಚೆಲುವೆಯ ಅಂದದ ಮೊಗಕೇ ಕಣ್ಣೇ ಭೂಷಣ
ನಲಿಯುತ ಬಾಳುವ ಮನೆಗೇ ಹೆಣ್ಣೇ ಭೂಷಣ
ಸುಖಸಂಸಾರಕೆ ಎಂದೂ ಸತಿಯೇ ಕಾರಣ

ಬಾನಿಗೆ ಎಂದೆಂದಿಗೂ ಆ ರವಿಯೇ ಭೂಷಣ
ಬಳುಕುವಾ ಲತೆಗೆ ಹೆಣ್ಣಿನಾ ಮುಡಿಗೆ ಹೂವೇ ಭೂಷಣ
ರಜನಿಗೆ ಎಂದೆಂದಿಗೂ ಆ ಶಶಿಯೇ ಭೂಷಣ
ಅರಳಿದಾ ಮನಕೆ ಹವಳದಾ ತುಟಿಗೆ ನಗುವೇ ಭೂಷಣ
ನೋವಿಗೇ ...ನಲಿವಿಗೇ....ಹೆಣ್ಣೇ ಕಾರಣ....

ಚೆಲುವೆಯ ಅಂದದ ಮೊಗಕೇ ಕಣ್ಣೇ ಭೂಷಣ...

ಮದುವೆಯು ಅನುಬಂಧವು ಎಂದೂ ಅಳಿಯದು
ಕೋಪದಾ ಕಿಡಿಗೆ ರೋಷದಾ ಉರಿಗೆ ಒಲವೂ ಬಾಡದೂ
ದೇಹವು ದೂರಾದರೂ ಮನಸೂ ಮರೆಯದು
ಬೆರೆತಿಹಾ ಜೀವ ವಿರಹದಾ ನೋವ ಎಂದೂ ಸಹಿಸದೂ
ಒಲವಿನಾ...ಜೀವನಾ...ಸುಖಕೇ ಸಾಧನಾ...

ಚೆಲುವೆಯ ಅಂದದ ಮೊಗಕೇ ಕಣ್ಣೇ ಭೂಷಣ...

ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ

ಚಿತ್ರ:ತಿರುಗುಬಾಣ
ರಚನೆ: ಚಿ.ಉದಯಶಂಕರ್
ಸಂಗೀತ: ಸತ್ಯಂ
ಹಿನ್ನಲೆ ಗಾಯನ: ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಮ್


ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ
ಎಲ್ಲೇ ಇರಲಿ ಹೇಗೇ ಇರಲಿ ಕನ್ನಡವೆ ನಮ್ಮ ಉಸಿರಲ್ಲಿ


ಕರುನಾಡು ಸ್ವರ್ಗದ ಸೀಮೆ
ಕಾವೇರಿ ಹುಟ್ಟಿದ ನಾಡು
ಕಲ್ಲಲ್ಲಿ ಕಲೆಯನು ಕಂಡ
ಬೇಲೂರ ಶಿಲ್ಪದ ಬೀಡು
ಬಸವೇಶ್ವರ ರನ್ನ ಪಂಪರ
ಕವಿವಾಣಿಯ ನಾಡು

ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ...

ಚಾಮುಂಡಿ ರಕ್ಷೆಯು ನಮಗೆ
ಗೊಮ್ಮಟೇಶ ಕಾವಲು ಇಲ್ಲಿ
ಶೃoಗೇರಿ ಶಾರದೆ ಲೀಲೆ
ರಸತುಂಗೆಯಾಗಿದೆ ಇಲ್ಲಿ
ವಿಶ್ವಖ್ಹ್ಯಾತಿಯ ವಿಶ್ವೇಶ್ವರಯ್ಯ
ಜನಿಸಿದ ಈ ನಾಡು

ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ...

ಎಳೇಳು ಜನ್ಮವೇ ಬರಲಿ
ಈ ಮಣ್ಣಲಿ ನಾನು ಹುಟ್ಟುವೆ
ಏನೇನು ಕಷ್ಟವೇ ಇರಲಿ
ಸಿರಿಗನ್ನಡಕಾಗೆ ದುಡಿಯುವೆ
ತನು ಕನ್ನಡ ನುಡಿ ಕನ್ನಡ
ಮನ ಕನ್ನಡವಾಗಿರಲಿ

ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ...

Thursday, October 16, 2008

ನೀನಾಡದಾ ಮಾತು ಮಾತಲ್ಲ

ಚಿತ್ರ: ಕಾಮನಬಿಲ್ಲು
ರಚನೆ: ಚಿ.ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
ಹಿನ್ನಲೆ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಮ್ ಹಾಗೂ ಸುಲೋಚನಾ

ನೀನಾಡದಾ ಮಾತು ಮಾತಲ್ಲ
ನೀನಾಡದಾ ಹಾಡು ಹಾಡಲ್ಲ
ನೀನಿಲ್ಲದಾ ಮನೆ ಮನೆಯಲ್ಲ
ನೀನಿಲ್ಲದೇ ನನಗೆ ಬಾಳಿಲ್ಲ

ನಲ್ಲೆ ನೀನು ಮುಡಿಯದ ಹೂವಲ್ಲಿ ಅಂದವಿಲ್ಲ
ಚೆಲುವೆ ನೀನು ಸವಿಯದ ಹಣ್ಣಲ್ಲಿ ಸಿಹಿಯು ಇಲ್ಲ
ನಿನ್ನಂಥ ಮಾತುಗಾರನ ಇನ್ನೆಲ್ಲೂ ನಾನು ಕಾಣೆನು
ಇನಿಯ ಸೋತೆನು

ನೀನಾಡದಾ ಮಾತು...

ನಲ್ಲ ನಿನ್ನ ಕಾಣದ ದಿನವೆಲ್ಲ ಶಾಂತಿಯಿಲ್ಲ
ಚೆಲುವ ನಿನ್ನ ಸೇರದ ಇರುಳಲ್ಲಿ ಸೌಖ್ಯವಿಲ್ಲ
ಮುದ್ದಾಗಿ ಮಾತನಾಡುತ ಮಾತಲ್ಲಿ ನಿನ್ನ ಗೆಲ್ಲುತ
ಸರಸ ತುಂಬಿದೆ

ನೀನಾಡದಾ ಮಾತು ಮಾತಲ್ಲ...