Showing posts with label ಬಿ.ಆರ್.ಛಾಯ. Show all posts
Showing posts with label ಬಿ.ಆರ್.ಛಾಯ. Show all posts

Tuesday, April 22, 2014

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ

ಸಾಹಿತ್ಯ: ಚನ್ನವೀರ ಕಣವಿ
ಸಂಗೀತ: ಸಿ. ಅಶ್ವಥ್
ಗಾಯಕರು: ಬಿ.ಆರ್.ಛಾಯ



ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
ಸೋ! ಎಂದು ಶೃತಿ ಹಿಡಿದು ಸುರಿಯುತಿತ್ತು
ಅದಕೇ ಹಿಮ್ಮೇಳವನೆ ಸೂಸಿಪಹ ಸುಳಿಗಾಳಿ
ತೆಂಗು ಗರಿಗಳ ನಡುವೆ ನುಸುಳುತಿತ್ತು

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ...

ಇಳೆವೆಣ್ಣು ಮೈದೊಳೆದು ಮಕರಂದದರಿಶಣದಿ
ಹೂ ಮುಡಿದು ಮದುಮಗಳ ಹೋಲುತಿತ್ತು
ಮೂಡಣದಿ ನೇಸರನ ನಗೆ ಮೊಗದಾ ಶ್ರೀಕಾಂತಿ
ಬಿಳಿಯಾ ಮೋಡದ ಹಿಂದೆ ಹೊಳೆಯುತಿತ್ತು

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ...

ಹುಲ್ಲೆಸಳು ಹೂಪಕಳೆ ಮುತ್ತು ಹನಿಗಳ ಮಿಂಚು
ಸೊಡರಿನಲಿ ಆರತಿಯ ಬೆಳಗುತಿತ್ತು
ಕೊರಲುಕ್ಕಿ ಹಾಡುತಿಹ ಚಿಕ್ಕಪಕ್ಕಿಯ ಬಳಗ
ಶುಭಮಸ್ತು ಶುಭಮಸ್ತು ಎನ್ನುತಿತ್ತು

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ...

ತಳಿರ ತೋರಣದಲ್ಲಿ ಬಳ್ಳಿ ಮಾಡಗಳಲ್ಲಿ
ದುಂಬಿಗಳ ಓಂಕಾರ ಹೊಮ್ಮುತಿತ್ತು
ಹಚ್ಚ ಹಸುರಿನ ಪಚ್ಚೆ ನೆಲಗಟ್ಟಿನಂಗಳದಿ
ಚಿಟ್ಟೆ ರಿಂಗಣ ಗುಣಿತ ಹಾಕುತಿತ್ತು

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ...

ಉಷೆಯ ನುಙ್ಗದಪಿನಲಿ ಹರ್ಷಬಾಷ್ಪಗಳಂತೆ
ಮರದ ಹನಿ ತಟಪಟನೆ ಉದುರುತಿತ್ತು
ಸೃಷ್ಠಿಲೀಲೆಯೊಳಿಂತು ತಲ್ಲೀನವಾದ ಮನ
ಮುಂಬಾಳ ಸವಿಗನಸ ನೆನೆಯುತಿತ್ತು

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ...

Tuesday, July 1, 2008

ಹುಚ್ಚು ಕೋಡಿ ಮನಸು ಅದು ಹದಿನಾರರ ವಯಸು

ಸಾಹಿತ್ಯ: ಹೆಚ್.ಎಸ್.ವೆಂಕಟೇಶ ಮೂರ್ತಿ
ಹಿನ್ನಲೆ ಗಾಯನ: ಬಿ.ಆರ್.ಛಾಯ


ಹುಚ್ಚು ಕೋಡಿ ಮನಸು ಅದು ಹದಿನಾರರ ವಯಸು
ಹುಚ್ಚು ಕೋಡಿ ಮನಸು ಅದು ಹದಿನಾರರ ವಯಸು
ಮಾತು ಮಾತಿಗೇಕೋ ನಗು ಮರುಗಳಿಗೆ ಮೌನ
ಕನ್ನಡಿ ಮುಂದಷ್ಟು ಹೊತ್ತು ಬರೆಯದಿರುವ ಕವನ
ಹುಚ್ಚು ಕೋಡಿ ಮನಸು ಅದು ಹದಿನಾರರ ವಯಸು

ಸೆರಗು ತೀಡಿದಷ್ಟುಹೊತ್ತು ಹಟಮಾಡುವ ಕೂದಲು
ಸೆರಗು ತೀಡಿದಷ್ಟುಹೊತ್ತು ಹಟಮಾಡುವ ಕೂದಲು
ನಿರಿಯೇಕೋ ಸರಿಯಾಗದು ಮತ್ತೆ ಒಳಗೆ ಹೋದಳು
ನಿರಿಯೇಕೋ ಸರಿಯಾಗದು ಮತ್ತೆ ಒಳಗೆ ಹೋದಳು
ಹುಚ್ಚು ಕೋಡಿ ಮನಸು ಅದು ಹದಿನಾರರ ವಯಸು

ಕೆನ್ನೆ ಕೊಂಚ ಕೆಂಪಾಯಿತೆ ತುಟಿಯ ರಂಗು ಹೆಚ್ಚೇ
ಕೆನ್ನೆ ಕೊಂಚ ಕೆಂಪಾಯಿತೆ ತುಟಿಯ ರಂಗು ಹೆಚ್ಚೇ
ನಗುತ ಅವಳ ಅಣುಕಿಸುತಿದೆ ಗಲ್ಲದ ಕರಿ ಮಚ್ಚೆ
ಹುಚ್ಚು ಕೋಡಿ ಮನಸು ಅದು ಹದಿನಾರರ ವಯಸು

ಬರಿ ಹಸಿರು ಬರಿ ಹೂವು ಎದೆಯೊಳೆಷ್ಟು ಹೆಸರು
ಯಾವ ಮದುವೆ ದಿಬ್ಬಣವೋ ಸುಮ್ಮನೆ ನಿಟ್ಟುಸಿರು
ಹುಚ್ಚು ಕೋಡಿ ಮನಸು ಅದು ಹದಿನಾರರ ವಯಸು

ಇದನ್ನು ಕಳಿಸಿದ ಸೌಮ್ಯ ಅವರಿಗೆ ಧನ್ಯವಾದಗಳು. ಇದರ ಸಾಹಿತ್ಯ, ಸಂಗೀತ, ಹಿನ್ನಲೆಗಾಯಕರ ಮಾಹಿತಿಯಿದ್ದರೆ ಕಳಿಸಿಕೊಡಿ