Sunday, August 29, 2010

ಸೋರುತಿಹುದು ಮನೆಯ ಮಾಳಿಗಿ

ಚಿತ್ರ: ಸಂತ ಶಿಶುನಾಳ ಶರೀಫ
ಸಾಹಿತ್ಯ: ಶಿಶುನಾಳ ಷರೀಫ್
ಸಂಗೀತ: ಸಿ.ಅಶ್ವಥ್
ಹಿನ್ನಲೆ ಗಾಯನ: ಸಿ.ಅಶ್ವಥ್

ಸೋರುತಿಹುದು ಮನೆಯ ಮಾಳಿಗಿ
ಅಜ್ಞಾನದಿಂದಾ
ಸೋರುತಿಹುದು ಮನೆಯ ಮಾಳಿಗಿ

ಸೋರುತಿಹುದು ಮನೆಯ ಮಾಳಿಗಿ
ದಾರು ಗಟ್ಟಿ ಮಾಳ್ಪರಿಲ್ಲ
ಕಾಳ ಕತ್ತಲೆಯೊಳಗೆ ನಾನು
ಮೇಲಕೇರಿ ಹೋಗಲಾರೆ

ಸೋರುತಿಹುದು ಮನೆಯ ಮಾಳಿಗಿ...

ಮುರುಕು ತೊಲೆಯು ಹುಳುಕು ಜಂತಿ
ಕೊರೆದು ಸರಿದು ಕೀಲ ಸಡಲಿ
ಹರುಕು ಚಪ್ಪರ ಜೇರುಗಿಂಡಿ
ಮೇಲಕೇರಿ ಹೋಗಲಾರೆ

ಸೋರುತಿಹುದು ಮನೆಯ ಮಾಳಿಗಿ...

ಕರಕಿ ಹುಲ್ಲು ಕಸವು ಹತ್ತಿ
ಹರಿದು ಸಾಲು ಇರಬಿ ಮುತ್ತಿ
ಜಲದ ಭರದಿ ಸರಿಯೆ ಮಣ್ಣು
ಒಳಗೆ ಹೊರಗೆ ಏಕವಾಗಿ

ಸೋರುತಿಹುದು ಮನೆಯ ಮಾಳಿಗಿ...

ಕಾಂತೆ ಕೇಳೆ ಕರುಣದಿಂದ
ಬಂತು ಕಾಣೆ ಹುಬ್ಬು ಮಳೆಯು
ಎಂತೊ ಶಿಶುನಾಳಧೀಶನ ತಾನು
ನಿಂತು ಪೊರೆವನು ಎಂದು ನಂಬಿದೆ

ಸೋರುತಿಹುದು ಮನೆಯ ಮಾಳಿಗಿ...

Saturday, August 21, 2010

ಕೋಡಗನ ಕೋಳಿ ನುಂಗಿತ್ತಾ ನೋಡವ್ವ ತಂಗಿ

ಚಿತ್ರ:ಸಂತ ಶಿಶುನಾಳ ಶರೀಫ
ಸಾಹಿತ್ಯ: ಶಿಶುನಾಳ ಷರೀಫ್
ಸಂಗೀತ: ಸಿ.ಅಶ್ವಥ್
ಹಿನ್ನಲೆ ಗಾಯನ: ಸಿ.ಅಶ್ವಥ್



ಕೋಡಗನ ಕೋಳಿ ನುಂಗಿತ್ತಾ ನೋಡವ್ವ ತಂಗಿ
ಕೋಡಗನ ಕೋಳಿ ನುಂಗಿತ್ತಾ
ಆಡು ಆನೆಯ ನುಂಗಿ
ಗೋಡೆ ಸುಣ್ಣಾವ ನುಂಗಿ
ಆಡಲು ಬಂದ ಪಾತರದವಳ
ಮದ್ದಳೆ ನುಂಗಿತ್ತಾ ತಂಗಿ
ಕೋಡಗನ ಕೋಳಿ ನುಂಗಿತ್ತಾ

ಒಳ್ಳು ಒನಕೆಯ ನುಂಗಿ
ಕಲ್ಲು ಗೂಟಾವ
ಮೆಲ್ಲಲು ಬಂದ ಮುದುಕಿಯನ್ನೆ
ನೆಲ್ಲು ನುಂಗಿತ್ತಾ ತಂಗಿ
ಕೋಡಗನ ಕೋಳಿ ನುಂಗಿತ್ತಾ

ಕೋಡಗನ ಕೋಳಿನುಂಗಿತ್ತಾ ನೋಡವ್ವ ತಂಗಿ...

ಹಗ್ಗ ಮಗ್ಗಾವ ನುಂಗಿ
ಮಗ್ಗಾವ ಲಾಳಿ ನುಂಗಿ
ಮಗ್ಗದಲಿರುವ ಅಣ್ಣನನ್ನೆ
ಮಣಿಯು ನುಂಗಿತ್ತಾ ತಂಗಿ
ಕೋಡಗನ ಕೋಳಿ ನುಂಗಿತ್ತಾ

ಕೋಡಗನ ಕೋಳಿನುಂಗಿತ್ತಾ ನೋಡವ್ವ ತಂಗಿ...

ಗುಡ್ಡ ಗವಿಯನ್ನು ನುಂಗಿ
ಗವಿಯು ಇರುವೆಯಾ ನುಂಗಿ
ಗೋವಿಂದಾ ಗುರುವಿನ ಪಾದ
ನನ್ನನೆ ನುಂಗಿತ್ತಾ ತಂಗಿ
ಕೋಡಗನ ಕೋಳಿ ನುಂಗಿತ್ತಾ


ಕೋಡಗನ ಕೋಳಿನುಂಗಿತ್ತಾ ನೋಡವ್ವ ತಂಗಿ...

Thursday, August 12, 2010

ಜೀವ ಹೂವಾಗಿದೆ ಭಾವ ಜೇನಾಗಿದೆ

ಚಿತ್ರ: ನೀ ನನ್ನ ಗೆಲ್ಲಲಾರೆ
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ಇಳಯ ರಾಜ
ಹಿನ್ನಲೆ ಗಾಯನ: ಡಾ.ರಾಜಕುಮಾರ್ ಮತ್ತು ಎಸ್.ಜಾನಕಿ




ಐ ಲವ್ ಯೂ, ಐ ಲವ್ ಯೂ
ಐ ಲವ್ ಯೂ, ಐ ಲವ್ ಯೂ
ಜೀವ ಹೂವಾಗಿದೆ ಭಾವ ಜೇನಾಗಿದೆ
ಬಾಳು ಹಾಡಾಗಿದೆ ನಿನ್ನ ಸೇರಿ ನಾನು
ಸಂಜೆ ತಂಗಾಳಿ ತಂಪಾಗಿ ಬೀಸಿ
ಹೂವ ಕಂಪನ್ನು ಹಾದಿಗೇ ಹಾಸಿ
ತಂದಿದೆ ಹಿತವ ನಮಗಾಗಿ
ತಂದಿದೆ ಹಿತವ ನಮಗಾಗಿ
ಜೋಡಿ ಬಾನಾಡಿ, ಮೇಲೆ ಹಾರಾಡಿ
ತೇಲಾಡಿ ಓಲಾಡಿ ನಲಿವಂತೆ,
ನಾವು ಆಡೋಣ ಇನ್ನೇಕೆ ಬಾ ಚಿಂತೆ
ಜೀವ ಹೂವಾಗಿದೆ ಭಾವ ಜೇನಾಗಿದೆ...
ಇನ್ನು ನಿನ್ನಾಸೆ ನನ್ನಾಸೆ ಒಂದೇ
ಎಂದು ನಾವಾಡೋ ಮಾತೆಲ್ಲ ಒಂದೇ
ಬಯಕೆಯು ಒಂದೇ ಗುರಿಯೊಂದೆ
ಬಯಕೆಯು ಒಂದೇ ಗುರಿಯೊಂದೆ
ನಿನ್ನ ಚೆಲುವಿಂದ ನಿನ್ನ ಒಲವಿಂದೆ
ನನ್ನಲ್ಲಿ ನೀ ತಂದೆ ಆನಂದ
ಈ ಸಂತೋಷ ಸೌಭಾಗ್ಯ ನಿನ್ನಿಂದ
ಜೀವ ಹೂವಾಗಿದೆ ಭಾವ ಜೇನಾಗಿದೆ...