ಸಾಹಿತ್ಯ: ಎಂ.ಎನ್.ವ್ಯಾಸರಾವ್
ಸಂಗೀತ: ಸಿ.ಅಶ್ವತ್ಥ್
ಹಿನ್ನಲೆ ಗಾಯನ: ರತ್ನಮಾಲಾ ಪ್ರಕಾಶ್
ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದಂತೆ
ನನ್ನೆದೆಯ ಕಡಲೇಕೆ ಬೀಗುತಿಹುದು
ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದಂತೆ
ನನ್ನೆದೆಯ ಕಡಲೇಕೆ ಬೀಗುತಿಹುದು
ಸೂಜುಗಲ್ಲಾಗಿರುವೆ ಸೆಳೆದು ನಿನ್ನಯ ಕಡೆಗೆ
ಗರಿಗೆದರೆ ಕನಸುಗಳು ಕಾಡುತಿಹುದು
ಎದೆಗೆ ತಾಪದ ಉಸಿರು ತೀಡಿ ತರುತಿದೆ ಅಲರು
ನಿನ್ನ ಹುಣ್ಣಿಮೆ ನಗೆಯು ಛೇಡಿಸಿಹುದು
ಬಳಿಗೆ ಬಾರದೆ ನಿಂತೆ ಹೃದಯ ತುಂಬಿದೆ ಚಿಂತೆ
ಜೀವ ನಿನ್ನಾಸರೆಗೆ ಕಾಯುತಿಹುದು
ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದಂತೆ....
ನೀನೊಂದು ದಡದಲ್ಲಿ ನಾನೊಂದು ದಡದಲ್ಲಿ
ನಡುವೆ ಮೈಚಾಚಿರುವ ವಿರಹದಡವು
ಯಾವ ದೋಣಿಯು ತೇಲಿ ಎಂದು ಬರುವಿದೊ ಕಾಣೆ
ನೀನಿರುವ ಬಳಿಯಲ್ಲಿ ನನ್ನ ಬಿಡಲು
ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದಂತೆ...
Sunday, June 29, 2008
Subscribe to:
Post Comments (Atom)
2 comments:
ಒಳ್ಳೇ ಕಲೆಕ್ಶನ್ ಸ್ವಾಮಿ. ಉತ್ತಮ ಪ್ರಯತ್ನ.
ನಿಮ್ಮ ಹೆಡರ್ನಲ್ಲಿರೋ 'ಕ್ರೂಡಿಕರಿಸು' ಅನ್ನೋದು 'ಕ್ರೋಢೀಕರಿಸು' ಅಂತಾಗಬೇಕಿತ್ತಲ್ವೆ?
ಕ್ರೋಢೀಕರಿಸು - Consolidate/Collate
tooo god collection! thanls a lot for sharing. nimma hatra idre can u pls share...ella maretiruwaga illada sallada nepawa by Nissar Ahmed
Post a Comment