Wednesday, July 2, 2008

ನನ್ನ ಹಾಡು ನನ್ನದು ನನ್ನ ರಾಗ ನನ್ನದು

ಚಿತ್ರ: ಸುಪ್ರಭಾತ
ರಚನೆ: ಚಿ.ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಹಿನ್ನಲೆ ಗಾಯನ: ಎಸ್.ಪಿ.ಬಾಲಸುಬ್ರಮಣ್ಯಂ




ನನ್ನ ಹಾಡು ನನ್ನದು ನನ್ನ ರಾಗ ನನ್ನದು
ನನ್ನ ತಾಳ ನನ್ನದು ನನ್ನ ಆಸೆ ನನ್ನದು

ಎಲ್ಲೆಲ್ಲಿಯು ಎಂದೆಂದಿಗು ಎಲ್ಲೆಲ್ಲಿಯು ಎಂದೆಂದಿಗು
ನನ್ನಂತೆ ನಾನು ಇರುವೆನು ನುಡಿವೆನು ನಡೆವೆನು ದುಡಿವೆನು
ಈ ಬಾಳಲಿ

ನೋಡು ನೀಲಿ ಬಾನಿಗೆ ಮೋಡ ಅಂದ ತಂದಿದೆ
ಹಕ್ಕಿ ಹಾಡಿ ಹಾರಾಡಿದೆ
ಹಾಯಾಗಿ ಆನಂದದೆ
ತಂಪು ಗಾಳಿ ಬೀಸಿದೆ ನದಿಯ ನೀರು ಓಡಿದೆ
ಹಸಿರು ಮೆತ್ತೆಯ ಹಾಸಿದೆ
ಲತೆಯಲ್ಲಿ ಹೂ ನಗುತಿದೆ
ಜಗದ ಸೊಬಗು ನನಗೆ ತಾನೆ

ನನ್ನ ಹಾಡು ನನ್ನದು ನನ್ನ ರಾಗ ನನ್ನದು...

ನೂರು ಜನರು ಬಂದರು ನೂರು ಜನರು ಹೋದರು
ನನಗೆ ನಾನೆ ಸಂಗಾತಿಯು
ನಾನೆಂದು ಸುಖ ಜೀವಿಯು
ಉರಿವ ಬಿಸಿಲೆ ಬಂದರು ಗುಡುಗು ಮಳೆಯೆ ಸುರಿದರು
ನನಗೆ ಎಲ್ಲ ಸಂತೋಷವೆ
ದಿನಕೊಂದು ಹೊಸ ನೋಟವೆ
ಹಗಲು ಇರುಳು ಸೊಗಸು ತಾನೆ

ನನ್ನ ಹಾಡು ನನ್ನದು ನನ್ನ ರಾಗ ನನ್ನದು...

1 comment:

Prashanth Urala. G said...

ನಮಸ್ಕಾರ,

ನಾನು ಈ ಹಾಡಿಗಾಗಿ ಹುಡುಕುತ್ತಾ ಇದ್ದೆ. ಅದನ್ನ ಒದಗಿಸಿಕೊಟ್ಟದ್ದಕ್ಕೆ ಧನ್ಯವಾದಗಳು.



-ಪ್ರಶಾಂತ ಜೀ ಉರಾಳ (Prashantha G uraLa)