ಚಿತ್ರ: ಅಪರಿಚಿತ
ಸಂಗೀತ: ಎಲ್. ವೈದ್ಯನಾಥನ್
ಹಿನ್ನಲೆ ಗಾಯನ: ಎಸ್. ಜಾನಕಿ
ಸವಿನೆನಪುಗಳು ಬೇಕು ಸವಿಯಲೀ ಬದುಕು
ಕಹಿನೆನಪು ಸಾಕೊಂದು ಮಾಸಲೀ ಬದುಕು
ಬೆಂಬಿಡದ ಆ ನೆನಪು ಮರುಕಳಿಸಿ ದಿನವೆಲ್ಲ
ಕಾಡುತಿದೆ ಮನವ
ಸವಿನೆನಪುಗಳು ಬೇಕು ಸವಿಯಲೀ ಬದುಕು...
ಪ್ರಿಯತಮನ ಒಲವಿಂದ ಕನಸುಗಳು ಮೂಡಿ
ಇನಿಯನ ಎದೆಗೊರಗಿ ಆಸರೆಯ ಬೇಡಿ
ಸರಸ ಸವಿಯ ಬಯಸಿದೆನು ನಾನು
ವಿರಹ ವಿಫಲ ಫಲಿಸಿದವು ನನಗೆ
ಇನಿಯನ ಎದೆ ಬಡಿತ ಗುಂಡಿನ ದನಿಗಿರಿದು
ಮಾಸುತಿದೆ ಕನಸು
ಸವಿನೆನಪುಗಳು ಬೇಕು ಸವಿಯಲೀ ಬದುಕು...
ಬೀಸುತಿಹ ತಂಗಾಳಿ ಬಿಸಿಯಾಗಿ ಕಾಡಿ
ನೆನಪಿನ ಭೀತಿಯಲಿ ನಾ ಬಂದಿಯಾಗಿ
ಮನಸು ಹೃದಯ ನೊಂದು ನೋವಾಗಿದೆ
ಒಲವು ನಲಿವು ಮೂಡಿ ಮಸುಕಾಗಿ
ಅರಳುವ ಹೂವೊಂದು ಕಮರುವ ಭಯದಲೀ
ಸಾಗುತಿದೆ ಬದುಕು
ಸವಿನೆನಪುಗಳು ಬೇಕು ಸವಿಯಲೀ ಬದುಕು...
Subscribe to:
Post Comments (Atom)
4 comments:
ಕೆಲವು ಕಾಗುಣಿತ ತಪ್ಪುಗಳು ..........
ಮತಕಾಗಿದೆ-ಮಸುಕಾಗಿ
ಅಮರವ-ಕಮರುವ
ಕುಮಾರ್ :-)
ಧನ್ಯವಾದ ಕುಮಾರ್.
ಯಜ್ಞೇಶ್, ಈ ಹಾಡನ್ನು ಹಾಡಿದ್ದು ಎಸ್. ಜಾನಕಿ ಅಲ್ಲ. ಇದನ್ನು ಹಾಡಿದ್ದು ವಾಣಿ ಜಯರಾಂ.
ಸಾಹಿತ್ಯ: ರಾಮದಾಸ್ ನಾಯ್ಡು
Post a Comment