Monday, August 25, 2008

ನೀ ಹೀಂಗ ನೋಡಬ್ಯಾಡ ನನ್ನ

ರಚನೆ : ಡಾ.ದ.ರಾ.ಬೇಂದ್ರೆ
ಸಂಗೀತ: ಎಂ.ರಂಗರಾವ್
ಹಿನ್ನಲೆ ಗಾಯನ: ರಾಜಕುಮಾರ್ ಭಾರತಿ


ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಿದರೆ ನನ್ನ ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ

ದಾರೀಲಿ ನೆನೆದ ಕೈ ಹಿಡಿದೆ ನೀನು ತಣ್ಣsಗ ಅಂತ ತಿಳಿದು
ಬಿಡವೊಲ್ಲಿ ಇನ್ನುನೂ ಬೂದಿಮುಚ್ಚಿದ ಕೆಂಡ ಇದಂತ ಹೊಳೆದು
ಮುಗಿಲಿನ ಕಪ್ಪರಿಸಿ ನೆಲಕ ಬಿದ್ದರ ನೆಲಕ ನೆಲಿ ಎಲ್ಲಿನ್ನs
ಆ ಗಾದಿ ಮಾತು ನಂಬಿ ನಾನು ದೇವರಂತ ತಿಳಿದಿಯೇನ ನೀ ನನ್ನ

ನೀ ಹೀಂಗ ನೋಡಬ್ಯಾಡ ನನ್ನ...

ಇಬ್ಬನ್ನಿ ತೊಳೆದರೂ ಹಾಲು ಮೆತ್ತಿದಾ ಕವಳಿಕಾoಟಿಯಾ ಹಣ್ಣು
ಹೊಳೆ ಹೊಳೆವ ಹಾಂಗಿರುವ ಕಣ್ಣಿರುವ ಹೆಣ್ಣ ಹೇಳು ನಿನ್ನವೇನ ಈ ಕಣ್ಣು
ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡು ಒಮ್ಮಿಗಿಲ
ಹುಣ್ಣವೀ ಚಂದಿರನ ಹೆಣ ಬಂತೊ ಮುಗಿಲಾಗ ತೇಲತ ಹಗಲ

ನೀ ಹೀಂಗ ನೋಡಬ್ಯಾಡ ನನ್ನ...

ನಿನ ಕಣ್ಣಿನ್ಯಾಗ ಕಾಲೂರಿ ಮಳೆಯು ನಡ ನಡಕ ಹುಚ್ಚನಗಿ ಯಾಕ
ಹನಿ ಒಡೆಯಲಿಕ್ಕೆ ಬಂದಂಥ ಮೋಡ ತಡದ್ಹಾಂಗೆ ಗಾಳಿಯ ನೆವಕ
ಅತ್ತಾರೆ ಅತ್ತುಬಿಡು ಹೊನಲು ಬರಲಿ ನಕ್ಯಾಕೆ ಮರಸತೀ ದು:ಖ
ಎವೆಬಡಿಸಿ ಕೆಡವು ಬಿರಿಗಣ್ಣು ಬ್ಯಾಡ ತುಟಿಕಚ್ಚಿ ಹಿಡಿಯದಿರು ಬಿಕ್ಕ

ನೀ ಹೀಂಗ ನೋಡಬ್ಯಾಡ ನನ್ನ...

4 comments:

Anonymous said...

contribute madakagtilla antha bejar agta ide.

nimma namma sangraha heege adbhutavaagi saagali

Sowmya

ಯಜ್ಞೇಶ್ (yajnesh) said...

Thanks sowmya,

Nimma shuba hariake sada irali.

-Yajnesh

nandaja said...

hi,

tumba channagiddu ,innu janapada haadugalu iddare channagirtu

Vishwanath said...

ಪ್ರಿಯ ಯಜ್ಞೇಶ್,

ಬ್ಲಾಗ್ ನ ಉದ್ದೇಶ ಹಾಗೂ ಇದರಲ್ಲಿನ ವಿಷಯ ಚೆನ್ನಾಗಿದೆ. ಪ್ರಜಾವಾಣಿ ಯಲ್ಲಿ ನಿಮ್ಮ ಬ್ಲಾಗ್ ಬಗ್ಗೆ ಓದಿದಾಗ ಒಮ್ಮೆ ನೋಡಬೇಕಿನಿಸಿತು. ಇನ್ನೂ ಇಂಥ ಉತ್ತಮ ಬರಹಗಳು ಬರಲಿ. ಶುಭವಾಗಲಿ.


-ವಿಶ್ವನಾಥ ಬಸವನಾಳಮಠ