ಚಿತ್ರ:ತಿರುಗುಬಾಣ
ರಚನೆ: ಚಿ.ಉದಯಶಂಕರ್
ಸಂಗೀತ: ಸತ್ಯಂ
ಹಿನ್ನಲೆ ಗಾಯನ: ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಮ್
ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ
ಎಲ್ಲೇ ಇರಲಿ ಹೇಗೇ ಇರಲಿ ಕನ್ನಡವೆ ನಮ್ಮ ಉಸಿರಲ್ಲಿ
ಕರುನಾಡು ಸ್ವರ್ಗದ ಸೀಮೆ
ಕಾವೇರಿ ಹುಟ್ಟಿದ ನಾಡು
ಕಲ್ಲಲ್ಲಿ ಕಲೆಯನು ಕಂಡ
ಬೇಲೂರ ಶಿಲ್ಪದ ಬೀಡು
ಬಸವೇಶ್ವರ ರನ್ನ ಪಂಪರ
ಕವಿವಾಣಿಯ ನಾಡು
ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ...
ಚಾಮುಂಡಿ ರಕ್ಷೆಯು ನಮಗೆ
ಗೊಮ್ಮಟೇಶ ಕಾವಲು ಇಲ್ಲಿ
ಶೃoಗೇರಿ ಶಾರದೆ ಲೀಲೆ
ರಸತುಂಗೆಯಾಗಿದೆ ಇಲ್ಲಿ
ವಿಶ್ವಖ್ಹ್ಯಾತಿಯ ವಿಶ್ವೇಶ್ವರಯ್ಯ
ಜನಿಸಿದ ಈ ನಾಡು
ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ...
ಎಳೇಳು ಜನ್ಮವೇ ಬರಲಿ
ಈ ಮಣ್ಣಲಿ ನಾನು ಹುಟ್ಟುವೆ
ಏನೇನು ಕಷ್ಟವೇ ಇರಲಿ
ಸಿರಿಗನ್ನಡಕಾಗೆ ದುಡಿಯುವೆ
ತನು ಕನ್ನಡ ನುಡಿ ಕನ್ನಡ
ಮನ ಕನ್ನಡವಾಗಿರಲಿ
ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ...
Subscribe to:
Post Comments (Atom)
3 comments:
ಸರ್..ಯಾವುದು ಇಷ್ಟ ಆಗೋಲ್ಲ ಹೇಳಿ? ಈಗ ಇಂಥ ಒಳ್ಳೆಯ, ಮನತುಂಬುವ ಹಾಡುಗಳು ಎಲ್ಲಿ ಬರುತ್ತವೆ? ಈಗ ಏನಿದ್ದರೂ ರೋಡಿಗಿಳಿ ರಾಧಿಕಾ... ಇನ್ನು ಭಕ್ತಿಗೇತೆಗಳನ್ನು ಸಿನಿಮಾ ಹಾಡುಗಳ ಧಾಟಿಯಲ್ಲಿ ಹಾಡಕ್ಕೆ ಹೋಗುವ ನಮ್ಮ ಖ್ಯಾತನಾಮರಿಂದಾಗಿ ಅವುಗಳನ್ನು ಕೇಳಕ್ಕೂ ಅಸಹ್ಯವಾಗುತ್ತೆ.
ಒಳ್ಳೆಯ ಕೆಲಸ ಮಾಡುತ್ತಿದ್ದಿರಿ. ಅಭಿನಂದನೆಗಳು ಸರ್
-ಚಿತ್ರಾ

ಧನ್ಯವಾದ ಚಿತ್ರ.
ನನ್ಗೆ ಮೊದ್ಲಿಂದ ಉತ್ತಮ ಸಾಹಿತ್ಯವಿರೋ ಹಳೇ ಹಾಡುಗಳು ಅಂದ್ರೆ ಬಹಳ ಇಷ್ಟ. ಹಾಡೇನೋ ಗುನುಗ್ತಾಯಿದ್ದೆ. ಆದ್ರೆ ಸಾಹಿತ್ಯ ಮಾತ್ರ ಯದ್ವಾತದ್ವಾ ಇರ್ತಿತ್ತು. ನನ್ ಹೆಂಡ್ತಿ ಕೇಳಿ ನಗ್ತಿದ್ಳು. ಅದ್ಕೆ ಈ ಐಡಿಯಾ ಬಂದಿದ್ದು.
ಕೆಲಸದ ಒತ್ತಡಗಳ ನಡುವೆ ಬ್ಲಾಗನ್ನು ನೋಡಿ ಹಾಡನ್ನು ಮನಸ್ಸಲ್ಲಿ ಹೇಳ್ಕೋಳ್ತೇನೆ. ಎನೋ ಒಂದು ರೀತಿ ಸಮಾಧಾನವಾಗತ್ತೆ.
ನಿಮಗೆ ಇಷ್ಟವಾದ ಹಾಡನ್ನು ಕಮೆಂಟಿನಲ್ಲಿ ಹಾಕಿ.
Post a Comment