ಚಿತ್ರ: ಪಲ್ಲವಿ ಅನುಪಲ್ಲವಿ
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ: ಇಳಯ ರಾಜ
ಹಿನ್ನಲೆ ಗಾಯಕರು: ಎಸ್.ಜಾನಕಿ
ನಗು ಎಂದಿದೆ ಮಂಜಿನ ಬಿಂದು
ನಲಿ ಎಂದಿದೆ ಗಾಳಿ ಇಂದು
ಚಿಲಿಪಿಲಿ ಎಂದು ಹಕ್ಕಿಯು ಹೇಳಿದೆ ಈಗ ಬಾ... ಬಾ
ಜೊತೆಯಲಿ ಕೂಡಿ ನಮ್ಮಂತೆ ಹಾರು ನೀ ಬೇಗ.. ಬಾ... ಬಾ...
ಹಾರಲು ಆಗದೆ ಸೋತಿರಲು
ಬಾಳಿಗೆ ಗೆಳೆಯನು ಬೇಕಿರಲು
ಬಯಸಿದೆ ಅರಸಿದೆ ನಾ
ಕಂಡೇ... ಈಗಲೆ ನಾ
ನನ್ನ ಸ್ನೇಹಿತನಾ
ಇದೇ ನಗುವ ಮನದ ಸ್ಪಂದ
ಸವಿ ಮಧುರ... ಮಮತೆ ಬಂಧ...
ನಗು ಎಂದಿದೆ ಮಂಜಿನ ಬಿಂದು...
ಹಾಡುವ ಬಾ ಬಾ.. ನದಿ ಅಲೆ ಕೊಡುವುದು ರಾಗ... ಈಗ
ಕುಣಿಯುವ ಬಾ ಬಾ ಮಳೆಯ ಹನಿ ತರುವುದು ತಾಳ ಮೇಳ
ಪ್ರಕೃತಿಯು ಬರೆದ ಕವನವಿದು...
ಮಮತೆಯ ಸೊಗಸಿನಾ ಪಲ್ಲವಿಯು
ಸುಂದರ ಸ್ನೇಹವಿದು..
ಇಂಥ ಅನುಬಂಧ
ಎಂಥ ಆನಂದ
ಇದೇ ನಗುವ ಮನದ ಸ್ಪಂದ
ಸವಿ ಮಧುರ... ಮಮತೆ ಬಂಧ
ನಗು ಎಂದಿದೆ ಮಂಜಿನ ಬಿಂದು...
Friday, January 16, 2009
Subscribe to:
Post Comments (Atom)
4 comments:
nice yajeshanna,
idna noDidya?:
kannadalyrics.com
ಥ್ಯಾಂಕ್ಸ್ ಶ್ರೀನಿಧಿ,
ಹಾಂ. ಆ ವೆಬ್ ಸೈಟ್ ನೋಡಿದ್ದಿ. ಕೆಲವು ಇಷ್ಟವಾದ ಹಾಡನ್ನು ಅಲ್ಲಿಂದ ತಗಂಡಿದ್ದಿ. ಮನೇಲಿ ಒಂದಿಷ್ಟು ಹಾಡಿನ ಪುಸ್ತಕ ಇದ್ದು. ಅದ್ರಲ್ಲಿ ಇಷ್ಟವಾದ ಹಾಡನ್ನು ಬರೆದು ಹಾಕ್ತಿ. ಕೆಲವೊಮ್ಮೆ ಆಫೀಸಲ್ಲಿ ಬೋರ್ ಆದಾಗ ಕನ್ನಡ ಹಾಡನ್ನು ಕೇಳ್ತಾ ಅದರ ಸಾಹಿತ್ಯ ಬರ್ಕೊಂಡು ಅದನ್ನ ಇಲ್ಲಿ ಹಾಕ್ತಿ. ಆಗಾಗ್ಗೆ ಇಷ್ಟದ ಹಾಡನ್ನು ಓದ್ತಾಯಿದ್ರೆ ಮನ್ಸು ಎಲ್ಲೋ ಇರ್ತು.
ನಿಂಗೆ ಇಷ್ಟದ ಹಾಡಿದ್ರೆ ಕೊಡು. ಇದ್ರಲ್ಲಿ ಹಾಕ್ತಿ.
ತುಂಬಾ ಒಳ್ಳೆಯ ಪ್ರಯತ್ನ. ಈ ಬ್ಲಾಗ್ ನೋಡಿ ತುಂಬಾ ಖುಷಿಯಾಯಿತು...
ವಿನಾಯಕ ಕೋಡ್ಸರ
Thanx vinayaka
Post a Comment