ಚಿತ್ರಃ ಆಪ್ತಮಿತ್ರ
ಗೀತರಚನೆಃ ಕವಿರಾಜ್
ಸಂಗೀತಃ ಗುರುಕಿರಣ್
ಹಿನ್ನಲೆ ಗಾಯನಃ ಮಧು ಬಾಲಕೃಷ್ಣ
ಕಣಕಣದೆ ಶಾರದೆ, ಕಲೆತಿಹಳು ಕಾಣದೆ
ವನವನದಲ್ಲೂ ಕುಹುಕುಹು ಗಾನ
ಝರಿಝರಿಯಲ್ಲೂ ಜುಳುಜುಳು ಧ್ಯಾನ
ವಿಧವಿಧದಾ ನಾದ ಅವಳು ನುಡಿಸುತಿಹಳು
ಜನನಕು ಹಾಡು ಮರಣಕು ಹಾಡು ಯಾರೀ ಛಲಮಗಳು
ಪ್ರತಿ ಎದೆಯಾಳದಲು ಲಯ ತಾಳ ಗೀತೆ ಬದುಕಿನಲು
ಕೊರಳಿನಲಿ ಕೊಳಲಿನಲಿ ಚೆಲುವಿನಲಿ ಒಲವಿನಲಿ
ಒಲಿದು ಉಲಿದು ನಲಿದುಹರಿದು ಬರುವುದು ಶೃತಿಲಯವು
ಕಣಕಣದೆ ಶಾರದೆ, ಕಲೆತಿಹಳು ಕಾಣದೆ...
ಕುಲ ನೆಲದಾಚೆ ಅರಿಯುವ ಭಾಷೆ ಒಂದೇ ಜಗದೊಳಗೆ
ಅವರಿವರಿಲ್ಲ ಸರಿಸಮರೆಲ್ಲ ಸಪ್ತ ಸ್ವರಗಳಿಗೆ
ನಿಪಮಪನಿ ಸನಿಪನಿಸ ಗಸನಿಸಗ
ಮಪಮಪಗ ನಿಮಪಮ ಸನಿಪನಿ ಗಸನಿಸ
ಕಣಕಣದೆ ಶಾರದೆ, ಕಲೆತಿಹಳು ಕಾಣದೆ...
3 comments:
ಯಜ್ಞೇಶ್...
ಶಾರದಾ ಪೂಜೆಯ ದಿನಗಳಿವು...
ಸಮಯೋಚಿತ ಹಾಡನ್ನು ಪರಿಚಯಿಸಿದ್ದೀರಿ...
ನನಗೆ ಬಹಳ ಇಷ್ಟ ಈ ಹಾಡು...
ಧನ್ಯವಾದಗಳು...
ಅರ್ಥ ಗರ್ಭಿತ ಸಾಲುಗಳು. ಸರಸ್ವತಿ ಹಬ್ಬ ಸಮೀಪಿಸುತ್ತಿರುವಾಗ ಕವನದ ಮೂಲಕ ಶಾರದೆಯ ನೆನಪನ್ನು ಮೂಡಿಸಿದ್ದಕ್ಕೆ ವಂದನೆಗಳು.
ಶಾಮ್, http://thatskannada.oneindia.in/
@ಪ್ರಕಾಶಣ್ಣ, "ಕಣಕಣದೆ ಶಾರದೆ, ಕಲೆತಿಹಳು ಕಾಣದೆ" ಕೇಳ್ತಾ ಇದ್ರೆ ಅದೆಲ್ಲೋ ಹೋಗಿಬಿಡತ್ತೆ ಮನಸು. ಅಷ್ಟು ಸುಂದರ ಸಾಹಿತ್ಯ, ಸಂಗೀತ ಮತ್ತು ಹಾಡು.. ಎಲ್ಲವು ಅದ್ಭುತ. ಧನ್ಯವಾದ ಪ್ರತಿಕ್ರಿಯೆಗೆ.
@ಶ್ಯಾಮ್, ನಿಮ್ಮ ಆಕಸ್ಮಿಕ ಭೇಟಿ ಸಂಗ್ರಹದಲ್ಲಿ ಆಗಿದ್ದು ತುಂಬಾ ಸಂತೋಷ. ಹೀಗೆ ಬರ್ತಾ ಇರಿ. ಪ್ರತಿಕ್ರಿಯೆಗೆ ಧನ್ಯವಾದಗಳು.
Post a Comment