ಚಿತ್ರ: ಕಪ್ಪು ಬಿಳುಪು
ಸಾಹಿತ್ಯ : ಆರ್.ಎನ್. ಜಯಗೋಪಾಲ್
ಸಂಗೀತ : ಆರ್. ರತ್ನ
ಹಿನ್ನಲೆ ಗಾಯನ : ಪಿ.ಸುಶೀಲ
ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು
ನಿನ್ನ ಸಂಗ ಆಡಲೆಂದು ಬಂದೆ ನಾನು
ಓಹೋ...ಓಹೋ...........
ಸಣ್ಣ ಸಣ್ಣ ಹೂವಿನಲ್ಲೂ ಕಂಡೆ ನೀನು
ಬಣ್ಣದ ಬಣ್ಣದ ಚಿಟ್ಟೆಯಲ್ಲೂ ನೀನೆ ನೀನು
ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು...
ನೀನು ಇತ್ತ ಹಣ್ಣುಗಳೆ ಅನ್ನ ನನಗೆ
ನಿನ್ನ ಮಡಿಲಿನಲೇ ನನ್ನ ಹಾಸಿಗೆ
ಬೀಸಿ ಬಂದ ಗಾಳಿಯಲ್ಲೂ ನಿನ್ನ ಮಾಯೆ
ಹರಿಯುವ ನದಿಯಲೂ ನಿನ್ನ ಛಾಯೆ
ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು...
ಊರುಬೇಡ ಕೇರಿಬೇಡ ಯಾರೂ ಬೇಡಾ
ಅಮ್ಮ ಒಮ್ಮೆ ಕಣ್ಣ ಬಿಟ್ಟು ನನ್ನ ನೋಡಾ
ತಾಯಿತಂದೆ ಬಂಧುಬಳಗ ನೀನೇ ಎಲ್ಲಾ
ನಿನಗಿಂತ ಬೇರೆ ದೇವರಿಲ್ಲಾ
ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು...
1 comment:
ಯಜ್ಞೇಶ್ ,
ಅಮ್ಮಂದಿರ ದಿನಕ್ಕೆ ಒಳ್ಳೆಯ ಕೊಡುಗೆ. ಎಲ್ಲಾ ಹಾಡು ಮಸ್ತ್ ಇದ್ದು.
ಖುಶಿ ಆತು... ಹೀಗೆ ಮುಂದುವರೆಯಲಿ ಸಂಗ್ರಹ.
Post a Comment