ಚಿತ್ರ: ಅನುಭವ
ಸಾಹಿತ್ಯ: ವಿ.ಮನೋಹರ್
ಸಂಗೀತ: ಎಲ್. ವೈದ್ಯನಾಥನ್
ಗಾಯನ: ವಾಣಿ ಜಯರಾಮ್
ಹೋದೆಯ ದೂರ ಓ ಜೊತೆಗಾರ ಸೇರಲು ಬಂದಾಗ
ನೀ ಅರಿಯದೆ ಹೋದೆ ಪ್ರೇಮದ ನಾ ಸಂದೇಶವ ತಂದಾಗ
ನೀ ಶೃತಿಯ ಮಿಡಿದಾಗ ಹಾಡಿದೆ ನಾ ಹುಸಿ ರಾಗ
ತೋರಿದೆ ನೀ ಅನುರಾಗ ಗಮನಿಸದೆ ತೆರಳಿದೆ ನಾ
ಹೋದೆಯ ದೂರ ಓ ಜೊತೆಗಾರ ಸೇರಲು ಬಂದಾಗ...
ನಲ್ಲ ಬಳಿಸಾರಿ ಮೆಲ್ಲ ಬಿಗಿದಾಗ ತಳ್ಳಿ ದೂರಾದೆ ಅರಿಯದೆ ನಾ
ಮದನ ನೀನಾಗಿ ಮುದದಿ ತೆರೆದಾಗ ರತಿಯ ಸವಿಲೀಲೆ ಮರೆತೆನು ನಾ
ಹೂವಿನ ಹಾಸಿಗೆ ನೀ ಹಾಸಿ ಮೋಗದಿ ನನ್ನನು ಕರೆದಾಗ
ಮಾಡಿದೆ ನಾನು ಪರಿಹಾಸ ನೀಡದೆ ನಿನಗೆ ಉಲ್ಲಾಸ
ಸವಿ ಇರುಳ ಹೊಂಗನಸ ಮುರಿದೆನು ನಾ
ಹೋದೆಯ ದೂರ ಓ ಜೊತೆಗಾರ ಸೇರಲು ಬಂದಾಗ...
ಮೇಘ್ಹ ಸರಿದಾಗ ತಾರೆ ಹೊಳೆದಾಗ ಚಂದ್ರ ಮರೆಯಾದ ನನ್ನ ತೊರೆದ
ಯಾರ ಬಳಿನಾನು ನೋವ ನುಡಿದೇನು ಇನಿಯ ಮರೆತಾಗ ಸಹಿಸೆನು ನಾ
ಬಾಳೆನು ಚಿಂತೆಯ ಪಾಲಾಇ ದುಂಬಿಯ ಕಾಣದ ಹೂವಾಗಿ
ತಾಳೆನು ನಾನು ಏಕಾಂತ ಬರುವೆನೆಇನ್ನ ಓ ಕಾಂತ
ಕೊರಗುತಿಹೆ ಮರುಗುತಿಗೆ ವಿರಹದಿ ನಾ
ಹೋದೆಯ ದೂರ ಓ ಜೊತೆಗಾರ ಸೇರಲು ಬಂದಾಗ...
4 comments:
Hi dude,
Good effort. Lovely collections.
cheers,
venki
Good job... long time no updates on songs n lyricss
hey can you also please look for lyrics of the song "needu shiva needadiru shiva" from Ganayogi Panchakshari
ಈ ಗೀತೆ ಪೂರಿಯಧನಾಶ್ರೀ ಎನ್ನುವ ರಾಗದಲ್ಲಿದೆ. ಈ ರಾಗವು ಹಂಸಾನಂದಿ ರಾಗದ ಛಾಯೆಯನ್ನು ಹೊಂದಿದೆ. ಆರೋಹ ಮತ್ತು ಅವರೋಹದಲ್ಲಿ ರೆ ಮತ್ತು ದ ಕೋಮಲ ಸ್ವರಗಳಾಗಿದ್ದು, ಆರೋಹದಲ್ಲಿ ಪ ವರ್ಜ್ಯ ಸ್ವರವಾಗಿದೆ.
Post a Comment