Tuesday, May 21, 2013

ಮನಸೇ ನನ್ನ ಮನಸೇ ಏನಾಗಿದೆ ನಿನಗೆ

ರಚನೆಬಿ. ಆರ್. ಲಕ್ಷ್ಮಣರಾವ್ 
ಸಂಗೀತ ಮತ್ತು ಹಿನ್ನಲೆ ಗಾಯನ: ಸಿ ಅಶ್ವಥ್




ಮನಸೇ ನನ್ನ ಮನಸೇ
ಏನಾಗಿದೆ ನಿನಗೆ
ಏಕೆ ಅವಳ ಕಹಿ ನೆನಪೇ
ಜೇನಾಗಿದೆ ನಿನಗೆ

ಬೇಡವೆಂದರೂ ಏಕೆ ತರುವೆ
ಕಣ್ಮುಂದೆ ಅವಳ ಚಿತ್ರ
ಬೂಟಾಟಿಕೆ ಆ ನಾಟಕ
ಅವಳ ವಿವಿಧ ಪಾತ್ರ

ಮನಸೇ ನನ್ನ ಮನಸೇ ಏನಾಗಿದೆ ನಿನಗೆ...

ಪದೇ ಪದೇ ಮತ್ತದೇ ಜಾಗಕ್ಕೆ
ನನ್ನ ಸೆಳೆವೆಯೇಕೆ
ಕಂಡು ಮರುಗಲು ಕುಸಿದ ಅರಮನೆ
ಉರುಳಿದ ಪ್ರೇಮ ಪತಾಕೆ

ಮನಸೇ ನನ್ನ ಮನಸೇ ಏನಾಗಿದೆ ನಿನಗೆ...

ಮಣ್ಣಾಗಿದೆ ನನ್ನ ಪ್ರೀತಿ
ಹೃದಯದ ಗೋರಿಯಲ್ಲಿ
ಗೋರಿಯನ್ನೇಕೆ ಬಗೆಯುವೆ
ಮೋಹದ ಹಾರೆಯಲ್ಲಿ

ಮನಸೇ ನನ್ನ ಮನಸೇ ಏನಾಗಿದೆ ನಿನಗೆ...

2 comments:

Badarinath Palavalli said...

ನನ್ನ ಅತ್ಯುತ್ತಮ ನೆಚ್ಚಿನ ಭಾವ ಕವಿ ಬಿ.ಆರ್.ಎಲ್.

ಒಳ್ಳೆಯ ಕವನಕ್ಕಾಗಿ ಧನ್ಯವಾದಗಳು.
http://badari-poems.blogspot.in/

Anonymous said...

Please post badavanadare enu priye