Sunday, July 15, 2007

ನಿನಗಾಗಿ ಓಡೋಡಿ ಬಂದೆ

ಚಿತ್ರ: ಸನಾದಿ ಅಪ್ಪಣ್ಣ
ರಚನೆ: ಚಿ.ಉದಯಶಂಕರ್
ಸಂಗೀತ: ಜಿ. ಕೆ. ವೆಂಕಟೇಶ್
ಹಿನ್ನಲೆ ಗಾಯನ: ಡಾ. ರಾಜ್ ಕುಮಾರ್
>

ನಿನಗಾಗಿ ಓಡೋಡಿ ಬಂದೆ ನಾನು
ಕಾಣದೆ ಹೀಗೇಕೆ ಮರೆಯಾಗಿ ಹೋದೆ
ಮರೆಯಾಗಿ ಹೋದೆ ನೀನು
ನಿನಗಾಗಿ ಓಡೋಡಿ ಬಂದೆ

ತಣ್ಣನೆ ಗಾಳಿ ಬೀಸಿದ ಹಾಗೆ
ಬಾಳಲಿ ಬಂದೆ ಸಂತಸ ತಂದೆ
ಕಣ್ಣಿಗೆ ಮಿಂಚು ಕಾಣುವ ಹಾಗೆ
ಬಾಳಿನ ಬಾನಲಿ ಬೆಳಕನು ತಂದೆ
ಸ್ನೇಹದಿ ಸೇರಿ ಮೋಹವ ತೋರಿ
ಸನಿಹಕೆ ಸಾರಿ ಮನವನು ಸೇರಿ
ಏಕೆ ನೀ ಮರೆಯಾದೆ

ನಿನಗಾಗಿ ಓಡೋಡಿ ಬಂದೆ...

ಬಿಸಿಲಿಗೆ ಹೂವು ಬಾಡುವ ಹಾಗೆ
ಕಾಣದಿ ನೊಂದೆ ವಿರಹದಿ ಬೆಂದೆ
ಮುಳ್ಳಿನ ಬಲೆಯ ಇಳಿಯಂತಾಗಿ
ಅಳುಕಿದೆ ಮನವು ನಡುಗಿದೆ ತನುವು
ತೀರದ ನೋವ ತಾಳದು ಜೀವ
ಕಾಣದೆ ನೀನು ಉಳಿಯನು ನಾನು
ಏಕೆ ನೀ ದೂರಾದೆ... ದೂರಾದೆ....

ನಿನಗಾಗಿ ಓಡೋಡಿ ಬಂದೆ...

11 comments:

ಶ್ರೀನಿಧಿ.ಡಿ.ಎಸ್ said...

ನಮಸ್ತೇ ಯಜ್ಞೇಶ್ ಸಾರ್:)

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ‘ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ‘ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ‘ಸಂಪದ’ದ ಹರಿಪ್ರಸಾದ್ ನಾಡಿಗ್, ‘ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ‘ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಶ್ರೀನಿಧಿ.ಡಿ.ಎಸ್.

ಯಜ್ಞೇಶ್ (yajnesh) said...

ಶ್ರೀನಿಧಿ,

ಖಂಡಿತಾ ಬತ್ತಿ. ವಿಷಯ ತಿಳಿಸಿದ್ದಕ್ಕೆ ಧನ್ಯವಾದಗಳು

kanasu said...

tumba chennagide...ella sundara hadugalu ondede kandu santhoshavaitu...

If u have the audio links to these songs..plss upload them too ;)

Anonymous said...

naa kelida bhavageethe

Kolananoodi mohisuvudanu kalisu enage chenna
Talamalipudu enna edeyu kolalagaanadinda ……. Kolala gaanadinda

Naliyutihudu uydaya gagana arunaraagadinda
Koladalegalu kuniyutihavu bhavadolumenyinda

Tanitacootadadiya modala nudiyakalisu chenna
Kolala kalisu bega enage mohisuvenu ninna …. Mohisuvenu ninna

Tanitacootadadiya idu sariyo tappo gottilla
Bere innenu details illa..

Sowmya

ಯಜ್ಞೇಶ್ (yajnesh) said...

ಸಂಗ್ರಹವನ್ನು ಸ್ಪರ್ಶಿಸಿದ ಕನಸು ಮತ್ತು ಸೌಮ್ಯ ಅವರಿಗೆ ಧನ್ಯವಾದಗಳು

Anonymous said...

Dhanyavada Yagnesh.

Nimma ee prayatnakke sahakara needuvude namma uddesha.

Sowmya

Adagella nenpidda bhavageethena abrdu comment nalli haktini. Nimge adara hinde munde gottidre sari, illandre hudukiyadru haki ee sangrahavanna exclusive mado nimma prayatnakke sahakaroyagtivi.

Khushiyaytri nimma prayatna noodi.

ಯಜ್ಞೇಶ್ (yajnesh) said...

ಧನ್ಯವಾದ ಸೌಮ್ಯ.

ನೀವು ಕನ್ನಡದಲ್ಲಿ ಬರೆದರೆ ನನಗೆ ಸಂಗ್ರಹದಲ್ಲಿ ಹಾಕಲು ಸಹಾಯವಾಗುತ್ತದೆ. ಕನ್ನಡವನ್ನು ಇಂಗ್ಲೀಷಿನಲ್ಲಿ ಬರೆದರೆ ಸ್ವಲ್ಪ ಕಷ್ಟವಾಗುತ್ತದೆ.

ಕನ್ನಡದಲ್ಲಿ ಬರೆಯಲು ನೀವು ಕೆಳಕಂಡ ವೆಬ್ ಸೈಟ್ ಗಳನ್ನು ಉಪಯೋಗಿಸಿಕೊಳ್ಳಬಹುದು
http://service.vishalon.net/pramukhtypepad.htm

http://www.google.co.in/transliterate/indic/Kannada

Anonymous said...

ಕೊಳನನೂದಿ ಮೊಹಿಸುವುದನು ಕಲಿಸು ಎನಗೆ ಚೆನ್ನ
ತಳಮಳಿಪುದು ಎನ್ನ ಎದೆಯು ಕೊಳಲಗಾನದಿಂದ ……. ಕೊಳಲಗಾನದಿಂದ

ನಲಿಯುತಿಹುದು ಉದಯಗಗನ ಅರುಣರಾಗದಿಂದ
ಕೊಳದಲೆಗಳು ಕುಣಿಯುತಿಹವು ಭಾವದೊಲುಮೆಯಿಂದ

ತನಿತಚೂತದಡಿಯಮೊದಲ ನುಡಿಯಕಲಿಸು ಚೆನ್ನ
ಕೊಳಲಕಲಿಸು ಬೇಗ ಎನಗೆ ಮೊಹಿಸುವೆನು ನಿನ್ನಾ …. ಮೊಹಿಸುವೇನು ನಿನ್ನ

ತನಿತಚೂತದಡಿಯ ಇದು ಸರಿಯೋ ತಪ್ಪೋ ಗೊತ್ತಿಲ್ಲ

ಸೌಮ್ಯ

Anonymous said...

ಹುಚ್ಚು ಕೋಡಿ ಮನಸು ಅದು ಹದಿನಾರರ ವಯಸು
ಹುಚ್ಚು ಕೋಡಿ ಮನಸು ಅದು ಹದಿನಾರರ ವಯಸು
ಮಾತು ಮಾತಿಗೇಕೋ ನಗು ಮರುಗಳಿಗೆ ಮೌನ
ಕನ್ನಡಿ ಮುಂದಷ್ಟು ಹೊತ್ತು ಬರೆಯದಿರುವ ಕವನ
ಹುಚ್ಚು ಕೋಡಿ ಮನಸು ಅದು ಹದಿನಾರರ ವಯಸು

ಸೆರಗು ತೀಡಿದಷ್ಟುಹೊತ್ತು ಹಟಮಾಡುವ ಕೂದಲು
ಸೆರಗು ತೀಡಿದಷ್ಟುಹೊತ್ತು ಹಟಮಾಡುವ ಕೂದಲು
ನಿರಿಯೇಕೋ ಸರಿಯಾಗದು ಮತ್ತೆ ಒಳಗೆ ಹೋದಳು
ನಿರಿಯೇಕೋ ಸರಿಯಾಗದು ಮತ್ತೆ ಒಳಗೆ ಹೋದಳು
ಹುಚ್ಚು ಕೋಡಿ ಮನಸು ಅದು ಹದಿನಾರರ ವಯಸು

ಕೆನ್ನೆ ಕೊಂಚ ಕೆಂಪಾಯಿತೆ ತುಟಿಯ ರಂಗು ಹೆಚ್ಚೇ
ಕೆನ್ನೆ ಕೊಂಚ ಕೆಂಪಾಯಿತೆ ತುಟಿಯ ರಂಗು ಹೆಚ್ಚೇ
ನಗುತ ಅವಳ ಅಣುಕಿಸುತಿದೆ ಗಲ್ಲದ ಕರಿ ಮಚ್ಚೆ
ಹುಚ್ಚು ಕೋಡಿ ಮನಸು ಅದು ಹದಿನಾರರ ವಯಸು

ಬರಿ ಹಸಿರು ಬರಿ ಹೂವು ಎದೆಯೊಳೆಷ್ಟು ಹೆಸರು
ಯಾವ ಮದುವೆ ದಿಬ್ಬಣವೋ ಸುಮ್ಮನೆ ನಿಟ್ಟುಸಿರು
ಹುಚ್ಚು ಕೋಡಿ ಮನಸು ಅದು ಹದಿನಾರರ ವಯಸು

Sowmya

ಯಜ್ಞೇಶ್ (yajnesh) said...

ಸೌಮ್ಯ,

ಸಂಗ್ರಹದ ಬೊಕ್ಕಸ ಹೆಚ್ಚಿಸಿದಕ್ಕೆ ಧನ್ಯವಾದಗಳು. ನೀವು ಕಳಿಸಿದ ಭಾವಗೀತೆಗಳನ್ನು ಸಂಗ್ರಹದಲ್ಲಿ ಹಾಕಿದ್ದೇನೆ.

Narayan said...

ನಮಸ್ಕಾರ ಯಜ್ಞೇಶ್‌.. ಇದೇ ಚಲನಚಿತ್ರದ "ನಾನೇ ತಾಯಿ ನಾನೆ ತಂದೆ ನಿನ್ನ ಪಾಲಿಗೆ" ಹಾಡಿನ ಗೀತೆ ನಿಮ್ಮ ಪುಟದಲ್ಲಿ ನಮೂದಿಸಿಕೊಡಲು ಸಾಧ್ಯವೇ? ಧನ್ಯವಾದಗಳು.- ನಾರಾಯಣ್‌