ಚಿತ್ರ: ಸಿಪಾಯಿ ರಾಮು
ರಚನೆ: ಆರ್.ಎನ್. ಜಯಗೋಪಾಲ್
ಸಂಗೀತ: ಉಪೇಂದ್ರ ಕುಮಾರ್
ಹಿನ್ನಲೆ ಗಾಯನ: ಪಿ.ಬಿ. ಶ್ರೀನಿವಾಸ್
ಕಥೆ ಮುಗಿಯಿತೇ ಆರಂಭದ ಮುನ್ನ
ಲತೆ ಬಾಡಿ ಹೋಯಿತೆ ಹೂವಾಗುವ ಮುನ್ನ
ಎಲ್ಲಿಗೇ ಪಯಣ ಯಾವುದೋ ದಾರಿ
ಏಕಾಂಗಿ ಸಂಚಾರಿ ಏಕಾಂಗಿ ಸಂಚಾರಿ
ಮಡದಿ ಮಕ್ಕಳು ಸ್ನೇಹಿತರನ್ನು ಮಣ್ಣಿನ ವಶ ಮಾಡಿ
ನಡೆದಿಹೆ ಇಂದು ಅಂಧನ ರೀತಿ ಶೋಕದೇ
ಏನೋ ನಿನ್ನ ಗುರಿ ಎಲ್ಲಿಗೇ ಪಯಣ
ಸೋಲು ಗೆಲುವು ಸಾವು ನೋವು ಜೀವನದುಯ್ಯಾಲೆ
ಸಾಯುವ ಮುನ್ನ ಜನಿಸಿದ ಮಣ್ಣಾ ದರುಶನ ನೀ ಪಡೆದು
ತಾಯಿಯ ಮಡಿಲ ಧೂಳಲಿ ಬೆರೆತು ಶೂನ್ಯದೇ ಮುಗಿಸು ನಿನ್ನ ಕಥೆ
ಎಲ್ಲಿಗೇ ಪಯಣ ಯಾವುದೋ ದಾರಿ ಏಕಾಂಗಿ ಸಂಚಾರಿ
ಏಕಾಂಗಿ ಸಂಚಾರಿ ಏಕಾಂಗಿ ಸಂಚಾರಿ.
Subscribe to:
Post Comments (Atom)
No comments:
Post a Comment