ಚಿತ್ರಃ ಮನಸಾರೆ
ಗೀತರಚನೆಃ ಜಯಂತ್ ಕಾಯ್ಕಿಣಿ
ಸಂಗೀತಃ ಮನೋಮೂರ್ತಿ
ಹಿನ್ನಲೆ ಗಾಯನಃ ಸೋನು ನಿಗಮ್
ಎಲ್ಲೋ ಮಳೆಯಾಗಿದೆಯೆಂದು ತಂಗಾಳಿಯು ಹೇಳುತಿದೆ
ಇಲ್ಲೇ ಒಲವಾಗಿದೆ ಎಂದೂ ಕನಸೊಂದು ಬೀಳುತಿದೆ
ವ್ಯಾಮೋಹವ ಕೇವಲ ಮಾತಿನಲೀ ಹೇಳಲು ಬರಬಹುದೆ
ನಿನ ನೋಡಿದ ಮೇಲೆಯು ಪ್ರೀತಿಯಲಿ ಬೀಳದೆ ಇರಬಹುದೆ
ಕಣ್ಣಲಿ ಮೂಡಿದೆ ಹನಿಗವನ ಕಾಯಿಸಿ ನೀ ಕಾಡಿದರೆ
ನೂತನ ಬಾವದ ಆಗಮನ ನೀ ಬಿಡದೇ ನೋಡಿದರೆ
ನಿನ ಧ್ಯಾನದಿ ನಿನ್ನಯ ತೋಳಿನಲಿ ಹೀಗೆಯೆ ಇರಬಹುದೆ
ಈ ಧ್ಯಾನವ ಕಂಡರೆ ದೇವರಿಗೂ ಕೋಪವು ಬರಬಹುದೆ
ಎಲ್ಲೋ ಮಳೆಯಾಗಿದೆಯೆಂದು ತಂಗಾಳಿಯು ಹೇಳುತಿದೆ...
ನೆನಪಿನ ಹೂಗಳ ಬಿಸಣಿಗೆ ನೀ ಬರುವ ದಾರಿಯಲಿ
ಓಡಿದೆ ದೂರಕೆ ಬೇಸರಿಕೆ ನೀ ಇರುವ ಊರಿನಲಿ
ಅನುಮಾನವೆ ಇಲ್ಲವೆ ಕನಸಿನಲಿ ಮೆಲ್ಲಗೆ ಬರಬಹುದೆ
ಅಲೆಮಾರಿಯ ಹೃದಯದ ಡೇರೆಯಲಿ ನೀನು ಇರಬಹುದೆ
ಎಲ್ಲೋ ಮಳೆಯಾಗಿದೆಯೆಂದು ತಂಗಾಳಿಯು ಹೇಳುತಿದೆ...
Monday, September 28, 2009
ಎಲ್ಲೋ ಮಳೆಯಾಗಿದೆಯೆಂದು ತಂಗಾಳಿಯು ಹೇಳುತಿದೆ
Labels:
ಚಿತ್ರ ಗೀತೆ,
ಜಯಂತ್ ಕಾಯ್ಕಿಣಿ,
ಮನಸಾರೆ,
ಮನೋಮೂರ್ತಿ,
ಸೋನು ನಿಗಮ್
Subscribe to:
Post Comments (Atom)
2 comments:
ಯಜ್ನೇಶ್...
ಒಂದು ಸದಭಿರುಚಿಯ..
ಸೊಗಸಾದ ಹಾಡಿನ ಪರಿಚಯ ಮಾಡಿಕ್ಕೊಟ್ಟಿದ್ದೀರಿ..
ಸಿನೇಮಾ ಕೂಡ ನೋಡುವ ಆಸೆ ಆಗುತ್ತಿದೆ..
ಧನ್ಯವಾದಗಳು...
Thanks for posting beautiful lyrics..
Post a Comment