Monday, May 3, 2010

ಅಮ್ಮ... ಅಮ್ಮ .... ಅಮ್ಮ ... ನನ್ನಮ್ಮ

ಚಿತ್ರ : ಭಲೇಜೋಡಿ
ರಚನೆ: ಚಿ.ಉದಯಶಂಕರ್
ಸಂಗೀತ: ಆರ್. ರತ್ನ
ಹಿನ್ನಲೆ ಗಾಯನ: ಡಾ.ಪಿ.ಬಿ.ಶ್ರೀನಿವಾಸ್



ಅಮ್ಮ... ಅಮ್ಮ .... ಅಮ್ಮ ... ನನ್ನಮ್ಮ
ನಾ ಅಮ್ಮ ಎಂದಾಗ ಏನು ಸಂತೋಷವು
ನಿನ್ನ ಕಂಡಾಗ ಮನಕೇನು ಆನಂದವು
ಅಮ್ಮ... ಅಮ್ಮ .... ಅಮ್ಮ ... ನನ್ನಮ್ಮ ..

ಹಾಲಿನ ಸುಧೆಯು ನಿನ್ನಯ ಮನಸು
ಜೇನಿನ ಸವಿಯು ನಿನ್ನ ಮಾತು..
ಪುಣ್ಯದ ಫಲವೊ
ದೇವರ ವರವೊ
ಸೇವೆಯ ಭಾಗ್ಯ ನನ್ನದಾಯ್ತು

ಅಮ್ಮ... ಅಮ್ಮ .... ಅಮ್ಮ ... ನನ್ನಮ್ಮ ..

ತಾಯಿಯ ಮಮತೆ ಕಂಡ ದೇವನು
ಅಡಗಿದ ಎಲ್ಲೊ ಮರೆಯಾಗಿ
ತಾಯಿಯ ಶಾಂತಿಗೆ ಧರಣಿಯು ನಾಚಿ
ಮೌನದಿ ನಿಂತಳು ತಲೆಬಾಗಿ


ಅಮ್ಮ... ಅಮ್ಮ .... ಅಮ್ಮ ... ನನ್ನಮ್ಮ ..

4 comments:

Anonymous said...

ಎಲ್ಲಾ ಅಮ್ಮ ಹಾಡುಗಳಲ್ಲಿ ಈ ಹಾಡು ಹೆಚ್ಚು ಇಷ್ಟವಾಯಿತು. ಇದು ಕಲ್ಯಾಣಿ ರಾಗ ಇರಬಹುದಾ?

-ವಾಸು

ರಾಮ said...

ಹಾಯ್ ಯಜ್ಞೇಶ ಅವರೆ,

ನಿಮ್ಮ 'ಸಂಗ್ರಹ'ವನ್ನು ನಮ್ಮೆಲ್ಲರ ಸಂಗ್ರಹವಾಗುವಂತೆ ಮಾಡಿರುವುದಕ್ಕೆ ಧನ್ಯವಾದಗಳು.

ಕೆಳಗೆ ಕೊಟ್ಟಿರುವುದು 'ಮನೆದೇವ್ರು' ಚಿತ್ರದ ಹಾಡು. ಚಿತ್ರದ ಬಗೆಗಿನ ಮಾಹಿತಿಗಾಗಿ http://kn.wikipedia.org/wiki/ಮನೆದೇವ್ರು ಪುಟಕ್ಕೆ ಭೇಟಿ ನೀಡಿ.


ಹೆ:
ಅಪರಂಜಿ ಚಿನ್ನವು ಚಿನ್ನವು ನನ್ನ ಮನೆಯ ದೇವತೆ.
ಗುಲಗಂಜಿ ದೋಷವು ದೋಷವು ಇರದಾ ಸುಗುಣ ಶೀಲರು,
ಉರಿವ ಸೂರ್ಯನು ಅವನ್ಯಾಕೆ, ಕರಗೊ ಚಂದ್ರನು ಅವನ್ಯಾಕೆ ಹೋಲಿಕೆ.

ಗಂ:
ಅಪರಂಜಿ ಚಿನ್ನವು ಚಿನ್ನವು ನನ್ನ ಮನೆಯ ದೇವತೆ.
ಗುಲಗಂಜಿ ದೋಷವು ದೋಷವು ಇರದಾ ಬಾಳ ಸ್ನೇಹಿತೆ,
ಬಾಡೋ ಮಲ್ಲಿಗೆ ಹೂವ್ಯಾಕೆ, ಶಿಲೆಯ ಬಾಲಿಕೆ ಅವಳ್ಯಾಕೆ ಹೋಲಿಕೆ.

ಹೆ:
ಮನದಲ್ಲಿ ನಲಿದಾಡೋ ನಾಯಕ ನೆನೆದಂತೆ ತಾ ಹಾಡೊ ಗಾಯಕ,
ಗಂ:
ಕಣ್ಣಲ್ಲೆ ಮಾತಾಡೋ ನಾಯಕಿ ನಿಜ ಹೇಳಿ ನನ್ನಾಳೊ ಪಾಲಕಿ
ಹೆ:
ನಡೆಯಲ್ಲೂ ನುಡಿಯಲ್ಲೂ ಒಂದೆ ವಿಧವಾದ ಹೊಲಿಕೆ
ಗಂ:
ನಗುವಲ್ಲೂ ಮುನಿಸಲ್ಲೂ ಪ್ರೀತಿ ಒಂದೇನೆ ಕಾಣಿಕೆ. (ಅಪರಂಜಿ)

ಹೆ:
ಸುಖವಾದ ಸಂಸಾರ ನಮ್ಮದು, ನಮ್ಮಲ್ಲಿ ಅನುಮಾನ ಸುಳಿಯದೂ
ಗಂ:
ಪ್ರತಿರಾತ್ರಿ ಆನಂದ ವಿರಸವೇ, ವಿರಸಕ್ಕೆ ಕೊನೆ ಎಂದೂ ಸರಸವೇ
ಹೆ:
ಕೋಪಕ್ಕೆ ತಾಪಕ್ಕೆ ಎಣ್ಣೆ ಎರೆಯೋಲ್ಲ ಇಬ್ಬರೂ
ಗಂ:
ಬಡತನವೇ ಸುಖವೆಂದು ಒಬ್ಬರ ಪರವಾಗಿ ಒಬ್ಬರೂ (ಅಪರಂಜಿ)

ರಾಮ said...

ಕ್ಷಮೆ ಇರಲಿ..
ಅಪರಂಜಿ ಚಿನ್ನವು ಹಾಡಿನ ಮೊದಲ ಸಾಲು ಈ ಕೆಳಗಿನಂತೆ ಇರುವುದು.

ಅಪರಂಜಿ ಚಿನ್ನವು ಚಿನ್ನವು ನನ್ನ ಮನೆಯ ದೇವರು.
(ದೇವತೆ ಎಂದು ಬರೆದಿದ್ದೆ.)

Anonymous said...

ಅಪರಂಜಿ ಚಿನ್ನವೋ ಹಾಡಿನ ಕೊನೆಯ ಪಾರಾದಲ್ಲಿ ಎರಡನೇ ಸಾಲಿನಲ್ಲಿ 'ಆನಂದ' ಎಂಬುದರ ಬದಲಾಗಿ 'ಆರಂಭ' ಎಂದಾಗಬೇಕು..
---> ಪ್ರತಿರಾತ್ರಿ ಆರಂಭ ವಿರಸವೇ, ವಿರಸಕ್ಕೆ ಕೊನೆ ಎಂದೂ ಸರಸವೇ